ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ!

|
Google Oneindia Kannada News

ಬೆಂಗಳೂರು, ಮಾರ್ಚ್ 22: ಪ್ರತಿಭಾನ್ವಿತ ಕ್ರಿಕೆಟಿಗರನ್ನು ಸಿದ್ಧಪಡಿಸಲು ಸ್ಥಳೀಯ ಆಡಳಿತ ಯೋಜನೆ ರೂಪಿಸಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಾದರಿಯಲ್ಲಿಯೇ ಬಿಬಿಎಂಪಿ ಕ್ರಿಕೆಟ್ ಕ್ರೀಡಾಂಗಣ ರೂಪಿಸಲು ಸಜ್ಜಾಗಿದೆ.

ಅದಕ್ಕಾಗಿ ಚಿನ್ನಸ್ವಾಮಿ ಸ್ಟೇಡಿಯಂಗೆ ಪರ್ಯಾಯ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಿದೆ. ನಗರದಲ್ಲಿ ಮಕ್ಕಳಿಗೆ ಆಟವಾಡಲು ಮೈದಾನಗಳ ಕೊರತೆ ಕಾಡುತ್ತಿದೆ. ಇರುವ ಮೈದಾನಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹೀಗಾಗಿಯೇ ಅಂತಾರಾಷ್ಟ್ರೀಯ ದರ್ಜೆಯ ಸ್ಟೇಡಿಯಂ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ.ಅದಕ್ಕೆ ಅನುಮೋದನೆ ಮತ್ತು ಜಾಗ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

BBMP will construct own cricket stadium soon

ಭೂಮಿ ನೀಡಲು ಮನವಿ: ಒತ್ತುವರಿದಾರರಿಂದ ನಗರ ಜಿಲ್ಲಾಡಳಿತ ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ವಾರ್ಡ್ ನಲ್ಲಿ ವಶಪಡಿಸಿಕೊಂಡಿರುವ 40ಎಕರೆ ಜಾಗವನ್ನು ಹಸ್ತಾಂತರಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಸಲ್ಲಿಸಿದೆ.

25ಕೋಟಿ ರೂ. ವೆಚ್ಚ: ಉದ್ದೇಶಿತ ಸ್ಟೇಟಿಯಂ ನಿರ್ಮಾಣಕ್ಕೆ 25 ಕೋಟಿ ರೂ ವೆಚ್ಚವಾಗಲಿದೆ. ಹಣವನ್ನು ವಿಶೇಷ ಅನುದಾನದ ರೂಪದಲ್ಲಿ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಸಕಾರ ನೀಡದಿದ್ದರೆ ಮೇಯರ್, ಬೆಂಗಳೂರು ನಗರಾಭಿವೃದ್ಧಿ ಸೇರಿ ಇನ್ನಿತರೆ ನಿಧಿ ಪಡೆದಾದರೂ ಕಾಮಗಾರಿ ಆರಂಭಿಸುವ ಚಿಂತನೆ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

English summary
To support local talents and train up poor the BBMP is planning to come up with own cricket stadium and all infrastructures in its own project. The BBMP is preparing a project of Rs.25 crores for own cricket stadium in the line of KSCA stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X