ಅಕ್ಟೋಬರ್ 17ಕ್ಕೆ ಬಿಬಿಎಂಪಿಯಿಂದ 'ಶ್ವಾನ ಮಹೋತ್ಸವ' ಆಚರಣೆ, ಪಾಲಕರ ನೋಂದಣಿ
ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನಲ್ಲಿ ನಾಯಿಗಳ ಹಾವಳಿಗೆ ತುತ್ತಾಗಿದ್ದ ಜನರ ರಕ್ಷಣೆಗಾಗಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಇದೇ ಮೊದಲ ಬಾರಿಗೆ ಪಾಲಕರ ನೋಂದಣಿ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಳಿಕೆಯು ಕುಕುರ್ ತಿಹಾರ್ (ಶ್ವಾನ ಮಹೋತ್ಸವ) ಆಚರಣೆಗೆ ಮುಂದಾಗಿದೆ. ಈ ದಿನವನ್ನು ಮೈಲಿಗಲ್ಲು ದಿನವನ್ನಾಗಿ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ನಾಗರಿಕರು ಈ ಕುಕುರ್ ತಿಹಾರ್‌ಗೆ ಅಭೂತವಾಗಿ ಸ್ಪಂದಿಸುತ್ತಿದ್ದಾರೆ. ಪ್ರಾಣಿ ಕಲ್ಯಾಣ ಯೋಜನೆಗಳ ಭಾಗವಾಗಲು ಬಿಬಿಎಂಪಿ ಗೆ 200 ಕ್ಕೂ ಹೆಚ್ಚು ನೋಂದಣಿಗಳನ್ನು ಸ್ವೀಕರಿಸಲಾಗಿದೆ ಮತ್ತು ಬಿಬಿಎಂಪಿ ತಂಡವು ಶೀಘ್ರದಲ್ಲೇ ಈ ನೋಂದಣಿ ಮಾಡಿಕೊಂಡ ನಾಗರಿಕರನ್ನು ಸಂಪರ್ಕಿಸಲಿದೆ.

ಒನ್ ಹೆಲ್ತ್ ಭಾಗವಾಗಿ #BITE FREE LOCALITY ಮತ್ತು ಸಹಬಾಳತ್ವೆ ಅಡಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಬಿಬಿಎಂಪಿ ಆರಂಭಿಸಿದೆ. ಅದೆಷ್ಟೋ ನಾಯಿಗಳಿಗೆ ತಿನ್ನಲು ಆಹಾರ ಇಲ್ಲದೇ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಹೋಟೆಲ್, ಇನ್ನಿತರ ಕಡೆಗಳಲ್ಲಿ ತ್ಯಾಜ್ಯ ಸೇರುವ ಆಹಾರವನ್ನು ನಾಯಿಗಳಿಗೆ ಒದಗಿಸಲು ಬಿಬಿಎಂಪಿ ತೀರ್ಮಾನಿಸಿದೆ. ಈ ಸಂಬಂಧ ಇದೇ ಅಕ್ಟೋಬರ್ 17ರಂದು 'ಶ್ವಾನ ಮಹೋತ್ಸವ' ಆಚರಿಸಲಾಗುತ್ತದೆ.
ಆಹಾರ ಸಂಗ್ರಹಿಸಬಹುದಾದ ಆಯ್ದ ಸ್ಥಳಗಳಿಗಿಂತ ದೊಡ್ಡ ಪ್ರದೇಶಗಳನ್ನು ಒಳಗೊಳ್ಳಲುವ ಸಮಾಜದ ವಿವಿಧ ಪಾಲುದಾರರನ್ನು ಒಟ್ಟುಗೂಡಿಸುವ ಮೂಲಕ ಸಹಬಾಳ್ವೆಗೆ ಒತ್ತು ನೀಡುವ ಇಂತಹ ಯೋಜನೆಯನ್ನು ಬಿಬಿಎಂಪಿ ಆರಂಭಿಸಿದೆ. ಇಂತಹ ಕಾರ್ಯಕ್ರಮ ದೇಶದಲ್ಲಿಯೇ ಮೊದಲ ಬಾರಿಗೆ ಬಿಬಿಎಂಪಿ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನಕ್ಕೊಂದು ಸಲ ನಾಯಿಗಳಿಗೆ ಆಹಾರ
ಈ ಯೋಜನೆ ಅಡಿಯಲ್ಲಿ, ಪೌರ ಕಾರ್ಮಿಕರು, ಹೋಟೆಲ್ ಮಾಲೀಕರು, ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು ಮತ್ತು ಆಸಕ್ತ ನಾಗರಿಕರು ಒಟ್ಟಾಗಿ ಸಂಘಟಿತರಾಗುತ್ತಾರೆ ಮತ್ತು ಸಮುದಾಯ ನಾಯಿಗಳಿಗೆ ಆಹಾರದ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡಲು ಯೋಜನೆ ರೂಪಿಸಲಾಗಿದೆ.
ಬಿಬಿಎಂಪಿಯು ನಾಯಿಗಳಿಗೆ ಮಸಾಲೆ, ಎಣ್ಣೆ ಅಥವಾ ಇತರೆ ಉದ್ರೇಕಕಾರಿಗಳಲ್ಲದ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಒದಗಿಸುವ ಆಯಾ ಪ್ರದೇಶಗಳಲ್ಲಿನ ಹೋಟೆಲ್‌ಗಳಿಗೆ ಆಹಾರದ ಅವಶ್ಯಕತೆಗಳನ್ನು Curating ಮಾಡಲು ಸೂಚನೆ ನೀಡಲಾಗಿದೆ.
ಈ ಶ್ವಾನ ಮಹೋತ್ಸವದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಸೇರಲು ಈ ಪ್ರದೇಶಗಳಲ್ಲಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಮಾಹಿತಿಗೆ 1533 ಕರೆ ಮಾಡಬಹುದು.
ನಾಯಿಗಳಿಗೆ ಅನ್ನಸಂತರ್ಪಣೆ ನಡೆಯುವ ವಾರ್ಡ್‌ಗಳ ಪಟ್ಟಿ
* ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್ ಚೌಕ, ಹಡ್ಸನ್ ವೃತ್ತ
* ಸಿದ್ದಾಪುರ ವಾರ್ಡ್, ಗುಟ್ಟೆಪಾಳ್ಯ
* ಟೆಲಿಕಾಂ ಲೇಔಟ್, ಜಕ್ಕೂರ್.
* ಸದಾಮಂಗಲ ರಸ್ತೆ ಮತ್ತು ಗ್ರಾಮದೇವತೆ ದೇವಸ್ಥಾನ, ಹೂಡಿ.
* ಗುಬ್ಬಲಾಲ ಮುಖ್ಯ ರಸ್ತೆ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ವಸಂತಪುರ- ಆಯ್ದ ಸ್ಥಳಗಳು.
* ಬಿಸಿಬಿಸಿ ಲೇಔಟ್, ಆರ್.ಆರ್ ನಗರ
* ಬಾಗಲಗುಂಟೆ, ಮಂಜುನಾಥ ನಗರ ಮುಖ್ಯ ರಸ್ತೆ
* ಗಾಯತ್ರಿ ನಗರ ಮತ್ತಿತರರ ಸ್ಥಳಗಳು.
ನೀವಿರುವ ಸ್ಥಳದಲ್ಲಿ ಈ ಮಹೋತ್ಸವ ನಡೆಯಲಿದ್ದು, ನಾಗರಿಕರು ಭೇಟಿ ನೀಡುವ ಮೂಲಕ ಆಚರಣೆಯಲ್ಲಿ ಪಾಲ್ಗೊಳ್ಳಬಹುದು. ನಿಮ್ಮ ಬೀದಿಗಳು ಮತ್ತು ಸಾಕು ನಾಯಿಗಳಿಗೆ ಸಣ್ಣ ಹಬ್ಬವನ್ನು ಮಾಡುವ ಮೂಲಕ ನಿಮ್ಮ ಪ್ರದೇಶಗಳಲ್ಲಿ ಏಕಕಾಲದಲ್ಲಿ ಆಚರಿಸಲಾಗುತ್ತದೆ. ಅವುಗಳಿಗೆ ಆಹಾರ ನೀಡಿ ಮತ್ತು ಆಚರಣೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಪಾಲಿಕೆಗೆ ಕಳುಹಿಸಿದಲ್ಲಿ ಇವುಗಳನ್ನು ನಾವು ನಿಮ್ಮ ಬೀದಿಗಳಲ್ಲಿ ಪ್ರದರ್ಶಿಸುತ್ತೇವೆ ಎಂದು ಪಾಲಿಕೆ ತಿಳಿಸಿದೆ. ಒಟ್ಟಾರೆ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.












Click it and Unblock the Notifications