• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಬ್ಬನ್ ಪಾರ್ಕ್‌ ಅಭಿವೃದ್ಧಿ; ಎರಡು ಹಂತದ ಯೋಜನೆಗೆ 40 ಕೋಟಿ

|

ಬೆಂಗಳೂರು, ಫೆಬ್ರವರಿ 02 : "ಸ್ಮಾರ್ಟ್ ಸಿಟಿ ಯೋಜನೆಯಡಿ 300 ಎಕರೆಯ ಕಬ್ಬನ್ ಉದ್ಯಾನವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕಾಗಿ ಒಟ್ಟು 40 ಕೋಟಿ ರೂ. ಯೋಜನೆಯನ್ನು ಸಿದ್ಧಪಡಿಸಲಾಗಿದೆ" ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದರು.

ಭಾನುವಾರ ಬಿಬಿಎಂಪಿ, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಕಬ್ಬನ್ ಉದ್ಯಾನ ಅಭಿವೃದ್ಧಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಉದ್ಯಾನವನ ವಾದ್ಯರಂಗದಲ್ಲಿ ಸಾರ್ವಜನಿಕರು ಹಾಗೂ ವಾಯುವಿಹಾರಿಗಳ ಜೊತೆ ಸಭೆ ನಡೆಯಿತು.

ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರದ ಸಮಯ ಬದಲು?

ಸಭೆಯಲ್ಲಿ ಬಿಬಿಎಂಪಿ ಮೇಯರ್, ಸಂಸದರಾದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಬಿಬಿಎಂಪಿ ಸದಸ್ಯರು, ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕರಾದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮುಂತಾದವರು ಪಾಲ್ಗೊಂಡಿದ್ದರು.

ಶೀಘ್ರದಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ

ಸ್ಮಾರ್ಟ್ ಸಿಟಿ ಯೋಜನೆಯಡಿ ಕಬ್ಬನ್ ಉದ್ಯಾನವನ್ನು ಎರಡು ಹಂತಗಳಲ್ಲಿ ವಿವಿಧ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದ ಮೇಯರ್ ಪ್ರಾತ್ಯಕ್ಷಿಕೆ ಸಮೇತ ವಿವರಣೆಯನ್ನು ನೀಡಿದರು. ಎರಡು ಹಂತದ ಯೋಜನೆಗೆ 40 ಕೋಟಿ ರೂ. ಖರ್ಚಾಗಲಿದೆ.

ಕಬ್ಬನ್ ಪಾರ್ಕ್ ಉಳಿವಿಗಾಗಿ ಚಿಪ್ಕೋ ಚಳುವಳಿ ಮಾದರಿ ಪ್ರತಿಭಟನೆಗೆ ಸಜ್ಜು

ಬಿಬಿಎಂಪಿ ಮೇಯರ್ ಹೇಳಿದ್ದೇನು?

ಬಿಬಿಎಂಪಿ ಮೇಯರ್ ಹೇಳಿದ್ದೇನು?

ಸಭೆಯಲ್ಲಿ ಮಾತನಾಡಿದ ಮೇಯರ್ "ಕಬ್ಬನ್ ಉದ್ಯಾನವನ್ನು ಮತ್ತಷ್ಟು ಸುಂದರೀಕರಣಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದೆ. ಜನರ ಭಾವನೆಗಳಿಗೆ ಯಾವುದೇ ತೊಂದರೆಯಾಗದ ರೀತಿ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುತ್ತದೆ" ಎಂದರು.

ಸ್ಮಾರ್ಟ್ ಸಿಟಿ ಯೋಜನೆ

ಸ್ಮಾರ್ಟ್ ಸಿಟಿ ಯೋಜನೆ

ಬೆಂಗಳೂರು ಸ್ಮಾರ್ಟ್ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, "ಸ್ಮಾರ್ಟ್ ಸಿಟಿ ಯೋಜನೆಯಡಿ ಕಬ್ಬನ್ ಉದ್ಯಾನ ಅಭಿವೃದ್ಧಿಗೊಳಿಸಲು ಎರಡು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಿಸ್ತೃತ ಯೋಜನಾ ವರದಿ ತಯಾರಿಸಿ ವಾಸ್ತುಶಿಲ್ಪಿಗಳ ಮೂಲಕ ನೀಲನಕ್ಷೆ ಸಿದ್ದಪಡಿಸಲಾದೆ. ಪಾದಚಾರಿ ಮಾರ್ಗ, ಸೈಕಲ್ ಟ್ರ‍್ಯಾಕ್, ಜಾಗಿಂಗ್ ಟ್ರ‍್ಯಾಕ್, ವಾಯುವಿಹಾರ ಪಥ, ನೀರು ಶುದ್ಧೀಕರಣ ಸೇರಿದಂತೆ ಇನ್ನಿತರ ಕಾಮಗಾರಿ ನಡೆಸಲಾಗುವುದು" ಎಂದು ಹೇಳಿದರು.

ಪರಿಸರ ಸ್ನೇಹಿ ಕ್ರಮ

ಪರಿಸರ ಸ್ನೇಹಿ ಕ್ರಮ

"ಪರಿಸರ ಸ್ನೇಹಿ ಮಾದರಿಯಲ್ಲಿ ಪ್ರಕೃತಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ ಮುಂದಿನ ಮಾರ್ಚ್ ಅಂತ್ಯದೊಳಗಾಗಿ ಮೊದಲನೇ ಹಂತ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಮೊದಲ ಹಂತಕ್ಕೆ 20 ಕೋಟಿ ರೂ.,ಎರಡನೇ ಹಂತಕ್ಕೆ ಸೇರಿ ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ ಕಬ್ಬನ್ ಉದ್ಯಾನವನ್ನು ಅಭಿವೃದ್ಧಿ" ಮಾಡಲಾಗುತ್ತದೆ ಎಂದರು.

ಮೊದಲ ಹಂತದ ಯೋಜನೆಗಳು

ಮೊದಲ ಹಂತದ ಯೋಜನೆಗಳು

ಕಬ್ಬನ್ ಉದ್ಯಾನದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಮೊದಲ ಹಂತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿವಿರಗಳು ಇಲ್ಲಿವೆ. ಮೊದಲ ಹಂತದ ಕಾಮಗಾರಿಗೆ 20 ಕೋಟಿ ರೂ. ವೆಚ್ಚವಾಗಲಿದೆ.

* ಪಾದಚಾರಿ ಮಾರ್ಗಪಥ ಪುನರ್ ನವೀಕರಣ

* ವಾಯುವಿಹಾರ ಪಥ ಅಭಿವೃದ್ಧಿ

* ರಸ್ತೆ ಅಭಿವೃದ್ಧಿ

* ನೀರು ಶುದ್ಧೀಕರಣ ಮಾಡುವುದು

* ಸೈಕಲ್ ಟ್ರ‍್ಯಾಕ್

* ಜಾಗಿಂಗ್ ಟ್ರ‍್ಯಾಕ್

* ಕಮಲದ ಕೊಳ ಅಭಿವೃದ್ಧಿ

* ಕಮಲದ ಕೋಳದ ಸುತ್ತಲು ಸಾಂಚಾರಿಮಾರ್ಗ,

* ನಾಲ ಮತ್ತು ಸೇತುವೆಗಳ ಅಭಿವೃದ್ಧಿ ಹಾಗೂ ಇತರೆ

ಎರಡನೇ ಹಂತದ ಯೋಜನೆಗಳು

ಎರಡನೇ ಹಂತದ ಯೋಜನೆಗಳು

* ಕರಗದ ಕುಂಟೆ ಅಭಿವೃದ್ಧಿ

* ಜೌಗು ಪ್ರದೇಶದ ಅಭಿವೃದ್ಧಿ

* ಕಾರಂಜಿಗಳು

* ಆಸನಗಳ ವ್ಯವಸ್ಥೆ

* ಕಲ್ಯಾಣಿ ಅಭಿವೃದ್ಧಿ

* ಚಾನಲ್‌ಗಳ ಅಭಿವೃದ್ಧಿ

* ಸಸಿಗಳನ್ನು ನೆಡುವುದು

* ವಿಕಲಚೇನರಿಗಾಗಿ ಸಂವೇದನಾ ಅಂಗಳ ಅಭಿವೃದ್ದಿ

* ಆಯುರ್ವೇದ ಉದ್ಯಾನ ನಿರ್ಮಾಣ

* ಹಿರಿಯ ನಾಗರೀಕರು ಹಾಗೂ ಮಕ್ಕಳಿಗಾಗಿ ಮೀಸಲಿಟ್ಟಿರುವ ಸ್ಥಳ ಪುನರ್ ನವೀಕರಣ

* ಯೋಗ ಪ್ರದೇಶ ಅಭಿವೃದ್ಧಿ

* ಕಬ್ಬನ್ ಉದ್ಯಾನ ಇತಿಹಾಸ ಹಾಗೂ ಸಮರ್ಪಕ ಮಾಹಿತಿಗಳ ಫಲಕ ಅಳವಡಿಕೆ

* ಬಯೋ ಗ್ಯಾಸ್ ಪಾಯಿಂಟ್ ಸ್ಥಾಪನೆ

* ಸೈಕಲ್ ನಿಲ್ದಾಣ

* ಪಾರಿವಾಳಗಳ ಆಹಾರ ವಿತರಿಸುವ ಸ್ಥಳ ಅಭಿವೃದ್ಧಿ

* ಫೆನ್ಸಿಂಗ್ ಹಾಗೂ ದ್ವಾರಗಳ ಅಳವಡಿಕೆ

* ಹಿರಿಯರಿಗಾಗಿ ಪ್ರತ್ಯೇಕ ಆಸನಗಳ ವ್ಯವಸ್ಥೆ

* ಬಿದಿರಿನಿಂದ ಹಲವು ವಿನ್ಯಾಸ ತಯಾರಿಕೆ

English summary
The Bruhat Bengaluru Mahanagara Palike (BBMP) will take up development work at Cubbon park at the cost of 40 crore. Work will divided in to two phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X