ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ ಬಡ ಮಕ್ಕಳಿಗಾಗಿ ಟ್ಯೂಷನ್‌ ಸೆಂಟರ್; ಯಾವಾಗ, ಎಲ್ಲೆಲ್ಲಿ ತಿಳಿಯಿರಿ

|
Google Oneindia Kannada News

ಬೆಂಗಳೂರು, ಆಗಸ್ಟ್‌ 23: ಹಿಂದುಳಿದ ವರ್ಗಗಳ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗುವ ಉದ್ಧೇಶದೊಂದಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಟ್ಯೂಷನ್‌ ಸೆಂಟರ್‌ಗಳನ್ನು ಆರಂಭಿಸಲು ಮುಂದಾಗಿದೆ. ಬೆಂಗಳೂರಿನ ಹತ್ತು ಕಡೆ ಈ ಬೋಧನ ಕೇಂದ್ರ(ಟ್ಯೂಷನ್‌ ಸೆಂಟರ್‌) ಗಳನ್ನು ಪ್ರಾರಂಭಿಸಲು ಬಿಬಿಎಂಪಿ ತಯಾರಿ ನಡೆಸಿದೆ.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್‌ 5 ರಿಂದ ನಗರದ ವಿವಿಧೆಡೆ ಹಿಂದುಳಿದ ವರ್ಗದ ಮಕ್ಕಳಿಗಾಗಿ ಟ್ಯೂಷನ್ ಸೆಂಟರ್ ಆರಂಭಿಸಲು ನಗರದ ನಾಗರಿಕರ ಸಂಸ್ಥೆ ಬಿಬಿಎಂಪಿ ಸಜ್ಜಾಗಿದೆ.

ಕೋತಿಗಳ ಹಾವಳಿ ತಡೆಗೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ-ಹೈಕೋರ್ಟ್ಕೋತಿಗಳ ಹಾವಳಿ ತಡೆಗೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ-ಹೈಕೋರ್ಟ್

"ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ" ಎಂಬ ವಿಶಿಷ್ಟ ಉಪಕ್ರಮವನ್ನು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಸಹಾಯದಿಂದ ಹತ್ತು ಸ್ಥಳಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾಗುವುದು. ಅಲ್ಲಿ ಶಿಕ್ಷಕರು ಕೊಳೆಗೇರಿ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಡ ಮಕ್ಕಳಿಗೆ ಟ್ಯೂಷನ್ ತರಗತಿ ನಡೆಸುವುದರ ಮೂಲಕ ಶೈಕ್ಷಣಿಕವಾಗಿ ಸಹಾಯ ಮಾಡುತ್ತಾರೆ. ಅಲ್ಲದೆ ಕಲಿಕೆಯ ಕೌಶಲ್ಯಗಳು ಮತ್ತು ಹೋ ವರ್ಕ್‌ಗಳನ್ನು ಮಾಡಲು ಅವರಿಗೆ ಸಹಾಯ ಮಾಡುತ್ತದೆ.

"ಆರ್ಥಿಕ ಬಿಕ್ಕಟ್ಟಿನಿಂದಾಗಿ ಟ್ಯೂಷನ್‌ಗೆ ಹೋಗಲು ಮತ್ತು ಪರೀಕ್ಷೆಗಳಿಗೆ ತಯಾರಾಗಲು ಹೆಚ್ಚಿನ ಕೌಶಲ್ಯಗಳನ್ನು ಪಡೆಯಲು ಸಾಧ್ಯವಾಗದ ಅನೇಕ ವಿದ್ಯಾರ್ಥಿಗಳು ನಗರದಲ್ಲಿದ್ದಾರೆ. ಹಾಗಾಗಿ ನಮ್ಮ ಬಿಬಿಎಂಪಿ ಶಾಲೆಗಳಲ್ಲಿ 25 ರಿಂದ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವ ಟ್ಯೂಷನ್ ಸೆಂಟರ್‌ಗಳನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಬಿಬಿಎಂಪಿ ಸಹಾಯಕ ಆಯುಕ್ತ (ಶಿಕ್ಷಣ) ಡಿ.ಎಸ್.ಉಮೇಶ್ ಹೇಳಿದರು.

ಗಣೇಶ ಚತುರ್ಥಿ: ಈ ಬಾರಿ ಗಣಪ ದುಬಾರಿ, ಯಾಕೆ ಗೊತ್ತಾ?ಗಣೇಶ ಚತುರ್ಥಿ: ಈ ಬಾರಿ ಗಣಪ ದುಬಾರಿ, ಯಾಕೆ ಗೊತ್ತಾ?

ಅಧ್ಯಯನ ಸಾಮಗ್ರಿ, ಉಪಕರಣನ್ನು ನೀಡಲಾಗುತ್ತೆ

ಅಧ್ಯಯನ ಸಾಮಗ್ರಿ, ಉಪಕರಣನ್ನು ನೀಡಲಾಗುತ್ತೆ

ಅಗಸ್ತ್ಯ ಇಂಟರ್‌ನ್ಯಾಶನಲ್ ಫೌಂಡೇಶನ್ ಎಂಬ ಎನ್‌ಜಿಒ ಟ್ಯೂಷನ್ ಸೆಂಟರ್‌ಗಳನ್ನು ಸ್ಥಾಪಿಸಲು ಬಿಬಿಎಂಪಿಗೆ ಸಹಾಯ ಮಾಡುತ್ತದೆ. ಟ್ಯೂಷನ್‌ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಕಾರ್ಯಾದೇಶ ನೀಡಲಾಗಿದೆ. ಎನ್‌ಜಿಒ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ಮತ್ತು ಟ್ಯೂಷನ್ ಸೆಂಟರ್‌ಗಳಿಗೆ ಉಪಕರಣಗಳನ್ನು ಒದಗಿಸುತ್ತದೆ ಎಂದು ಉಮೇಶ್ ಹೇಳಿದರು.

ಸಂಜೆ 5.30 ರಿಂದ 7 ಗಂಟೆಯವರೆಗೆ ಟ್ಯೂಷನ್‌

ಸಂಜೆ 5.30 ರಿಂದ 7 ಗಂಟೆಯವರೆಗೆ ಟ್ಯೂಷನ್‌

ವಿದ್ಯಾರ್ಥಿಗಳಿಗೆ ಕಲಿಸುವ ಆಸಕ್ತಿಯಿರುವ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಲಿಸಲು ಬಯಸುವ ಅರ್ಹ ಯುವಕರು ಅರ್ಜಿ ಸಲ್ಲಿಸಬಹುದು. ಬಿಬಿಎಂಪಿಯು ಶಿಕ್ಷಕರಿಗೆ ತಿಂಗಳಿಗೆ ₹3,500 ಗೌರವಧನ ನೀಡಲಿದೆ. ಈ ತರಗತಿಗಳು ಸಂಜೆ 5.30 ರಿಂದ 7 ಗಂಟೆಯವರೆಗೆ ನಡೆಯಲಿವೆ. ಇದು ಪ್ರಾಯೋಗಿಕ ಯೋಜನೆಯಾಗಿರುವುದರಿಂದ 3 ರಿಂದ 5 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಮಾತ್ರ ತರಗತಿಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಯೋಜನೆಯು ಹೇಗೆ ಜಾರಿಯಾಗುತ್ತದೆ ಎಂಬುದನ್ನು ನೋಡಿದ ನಂತರ ಬಿಬಿಎಂಪಿ ಪ್ರೌಢಶಾಲೆಯವರೆಗೆ ಟ್ಯೂಷನ್ ತರಗತಿಯನ್ನು ವಿಸ್ತರಿಸುತ್ತದೆ ಎಂದು ಸಹಾಯಕ ಆಯುಕ್ತ ಉಮೇಶ್ ಹೇಳಿದರು.

ವಿಜಯನಗರ ಪ್ರೌಢಶಾಲೆನಲ್ಲಿ ಸೆಂಟರ್‌

ವಿಜಯನಗರ ಪ್ರೌಢಶಾಲೆನಲ್ಲಿ ಸೆಂಟರ್‌

ಬಿಬಿಎಂಪಿ ಟ್ಯೂಷನ್‌ ಕೇಂದ್ರಗಳು ಇಂತಿವೆ. 1. ಕ್ಲೀವ್ಲ್ಯಾಂಡ್ ಟೌನ್ ಪಿಯು ಕಾಲೇಜು ಮತ್ತು ಪ್ರೌಢಶಾಲೆ, 2. ಬೈರವೇಶ್ವರ ನಗರ ಪ್ರೌಢಶಾಲೆ ಮತ್ತು ಪಿಯು ಕಾಲೇಜು, 3. ಶ್ರೀರಾಂಪುರ ಪ್ರೌಢಶಾಲೆ ಮತ್ತು ಪಿಯು ಕಾಲೇಜು, 4. ಕಸ್ತೂರಬಾ ನಗರ ಪ್ರೌಢಶಾಲೆ ಮತ್ತು ಪಿಯು ಕಾಲೇಜು, 5. ಮತ್ತಿಕೆರೆ ಪ್ರೌಢಶಾಲೆ ಮತ್ತು ಪಿಯು ಕಾಲೇಜು, 6. ಆಸ್ಟಿನ್ ಟೌನ್ ಬಿಬಿಎಂಪಿ ಬಾಲಕರ ಪ್ರೌಢಶಾಲೆ, 7.ಗಂಗಾನಗರ ಪ್ರೌಢಶಾಲೆ, 8. ಪಾದರಾಯನಪುರ ಪ್ರೌಢಶಾಲೆ ಮತ್ತು ಪಿಯು ಕಾಲೇಜು, 9. ವಿಜಯನಗರ ಪ್ರೌಢಶಾಲೆ, 10. ಪಿಳ್ಳಣ್ಣ ಗಾರ್ಡನ್ ಪ್ರೌಢಶಾಲೆ ಮತ್ತು ಪಿಯು ಕಾಲೇಜು.

ಎನ್‌ಜಿಒ ಸಂಸ್ಥೆಯ ಸಹಯೋಗ

ಎನ್‌ಜಿಒ ಸಂಸ್ಥೆಯ ಸಹಯೋಗ

ಮನೆಯಲ್ಲಿ ಓದಲು ಕಷ್ಟವಿರುವ ಪರಿಸ್ಥಿತಿ ಇರುವ ಮಕ್ಕಳು ಇನ್ನು ಬೆಂಗಳೂರಿನಲ್ಲಿ ಇದ್ದಾರೆ. ಅವರು ಶೈಕ್ಷಣಿಕವಾಗಿ ಮುಂದೆ ತರುವುದು ಬಿಬಿಎಂಪಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎನ್‌ಜಿಒ ಸಂಸ್ಥೆಯ ಮೂಲಕ ಮಕ್ಕಳಿಗೆ ಟ್ಯೂಷನ್‌ ಕೊಡಿಸಲಾಗುವುದು. ಇಲ್ಲಿ ಮಕ್ಕಳಿಗೆ ಖಾಸಗಿ ಟ್ಯೂಷನ್‌ ಸೆಂಟರ್‌ನಂತೆಯೇ ಪಾಠ ಹಾಗೂ ಹೋ ವರ್ಕ್‌ಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Recommended Video

Kohli Rohit ಇಲ್ಲದಿದ್ದರೂ ಟೀಂ ಇಂಡಿಯಾ ಅದ್ಬುತ ಆಟ | OneIndia Kannada

English summary
Brihat Bengaluru Mahanagara Corporation is planning to start Tuition Centers with the aim of providing educational assistance to the children of the backward classes. BBMP has prepared to start these tuition centers in ten parts of Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X