ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚು ತೆರಿಗೆ ಸಂಗ್ರಹಿಸಿ ಬಹುಮಾನ ಗೆಲ್ಲಿ: ಪ್ರೋತ್ಸಾಹಕ್ಕೆ ಬಿಬಿಎಂಪಿ ಚಿಂತನೆ

|
Google Oneindia Kannada News

ಬೆಂಗಳೂರು, ನವೆಂಬರ್ 22: ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸದೆ ಸಾಕಷ್ಟು ಮಂದಿ ವಂಚನೆ ಮಾಡುತ್ತಿದ್ದಾರೆ. ಹಾಗಾಗಿ ಹೆಚ್ಚು ತೆರಿಗೆ ಸಂಗ್ರಹ ಮಾಡುವ ಅಧಿಕಾರಿಗಳಿಗೆ ಬಹುಮಾನ ನೀಡುವುದಾಗಿ ಬಿಬಿಎಂಪಿ ಘೋಷಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ತೆರಿಗೆ ಸಂಗ್ರಹಣೆ ಮಾಡಿದ ಕಂದಾಯ ಅಧಿಕಾರಿ ಮತ್ತು ಸಹಾಯಕ ಕಂದಾಯ ಅಧಿಕಾರಿಗೆ ಪ್ರಶಸ್ತಿ ನೀಡಲಿದೆ. ಬಿಬಿಎಂಪಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದ್ದು, ವಾರ್ಡ್ ಮಟ್ಟದಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಗೆ ತೆರಿಗೆ ಸಂಗ್ರಹಣೆ ಸಪ್ತಾಹ ನಡೆಸಲು ಯೋಚಿಸಿದೆ.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಜತೆಗೆ ಹೆಚ್ಚಿನ ತೆರಿಗೆ ಸಂಗ್ರಹಣೆ ಮಾಡುವ ಕಂದಾಯ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳಿಗೆ ಪ್ರಶಸಸ್ತಿ ನೀಡಿ ಪ್ರೋತ್ಸಾಹಿಸುವುದಕ್ಕೆ ಬಿಬಿಎಂಪಿ ಚಿಂತಿಸಿದೆ.

BBMP to honour revenue officers on best performance

ಬೆಂಗಳೂರಿಗರ ಆಸ್ತಿ ಮೇಲೆ ಬೀಳುತ್ತೆ ಶೇ.25-30 ರಷ್ಟು ಅಧಿಕ ತೆರಿಗೆ ಹೊರೆಬೆಂಗಳೂರಿಗರ ಆಸ್ತಿ ಮೇಲೆ ಬೀಳುತ್ತೆ ಶೇ.25-30 ರಷ್ಟು ಅಧಿಕ ತೆರಿಗೆ ಹೊರೆ

ಪ್ರತಿ ವಾರ್ಡ್‌ಗಳ ಮಟ್ಟದಲ್ಲಿ ಕಂದಾಯ ಅಧಿಕಾರಿಗಳಿದ್ದು, ನಿರ್ದಿಷ್ಟ ಪ್ರಮಾಣದಲ್ಲಿ ಆಸ್ತಿ ಸಂಗ್ರಹಣೆಯ ಗುರಿ ನೀಡಲಾಗುತ್ತದೆ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡುವುದು, ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡಿದವರನ್ನು ಪತ್ತೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡುವವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್

ಬಿಬಿಎಂಪಿಯ ದೊಡ್ಡ ಆದಾಯ ಮೂಲ ಆಸ್ತಿ ತೆರಿಗೆಯಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹವಾಗದಿರುವುದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.ಹಾಗಾಗಿ ಬಿಬಿಎಂಪಿ ಸದ್ಯಕ್ಕೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರದ ಮುಂದೆ ಹೋಗಿ ಅನುದಾನಕ್ಕೆ ಬೇಡಿಕೆ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.

English summary
BBMP is thinking to honour revenue officers with various awards to support and appreciate their commitment towards revenue collection and improvement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X