ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಪೇ ಆಂಡ್ ಪಾರ್ಕಿಂಗ್ ವ್ಯವಸ್ಥೆ 685 ರಸ್ತೆಗಳಿಗೆ ವಿಸ್ತರಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರಲ್ಲಿ ಇನ್ನು ಮುಂದೆ ಒಟ್ಟು 685 ರಸ್ತೆಗಳಲ್ಲಿ ಉಚಿತ ಪಾರ್ಕಿಗ್ ವ್ಯವಸ್ಥೆ ಇರಲ್ಲ. ಬದಲಾಗಿ ಪೇ ಆಂಡ್ ಪಾಕ್‌ ವ್ಯವಸ್ಥೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.

ಬೆಂಗಳೂರು ನಗರದ ಹೃದಯ ಭಾಗದಲ್ಲಿ ಈಗಾಗಲೇ 85 ರಸ್ತೆಗಳಿಗೆ ಅನ್ವಯಿಸುವಂತೆ ಮೊದಲ ಹಂತದಲ್ಲಿ ಪೇ ಆಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತಂದ ಬಿಬಿಎಂಪಿ, ಅದನ್ನು 600 ಕ್ಕೂ ಹೆಚ್ಚು ರಸ್ತೆಗಳಿಗೆ ವಿಸ್ತರಿಸಲಿದೆ. ನಗರ ಭೂಸಾರಿಗೆ ನಿದೇಶನಾಲಯ (ಡಲ್ಟ್) ಸಹಕಾರದಲ್ಲಿ ಈ ನಿರ್ಧಾರ ಕೈಗೊಂಡಿದೆ. ಶೀಘ್ರವೇ ಈ ಸಂಬಂಧ ಸಾರ್ವಜನಿಕ ಸಂಸ್ಥೆಗಳಿಗೆ ಹರಾಜು ನೀಡುವ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆ ಇದೆ.

ಬಿಬಿಎಂಪಿ; 165 ವಾರ್ಡ್‌ ವ್ಯಾಪ್ತಿಯಲ್ಲಿ ಕೆಲಸ ಖಾಲಿ ಇದೆ ಬಿಬಿಎಂಪಿ; 165 ವಾರ್ಡ್‌ ವ್ಯಾಪ್ತಿಯಲ್ಲಿ ಕೆಲಸ ಖಾಲಿ ಇದೆ

ಹರಾಜಿನಲ್ಲಿ ಪಾಲ್ಗೊಂಡು ವಿವಿಧ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಟೆಂಡರ್ ಪಡೆಯುವ ಸಂಸ್ಥೆಗಳು ನಿಯಮಗಳಡಿ ದ್ವಿಚಕ್ರವಾಹನ, ಕಾರುಗಳ ಪಾರ್ಕಿಂಗ್‌ ಇಂತಿಷ್ಟು ಎಂದು ಹಣ ಪಡೆಯಲಿವೆ. ಮುಂದಿನ ದಿನಗಳಲ್ಲಿ ನಗರದ ಒಟ್ಟು 684 ರಸ್ತೆಗಳು ಫ್ರೀ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ.

8 ವಲಯದಲ್ಲಿ ಪೇ ಆಂಡ್ ಪಾರ್ಕಿಂಗ್ ವ್ಯವಸ್ಥೆ

8 ವಲಯದಲ್ಲಿ ಪೇ ಆಂಡ್ ಪಾರ್ಕಿಂಗ್ ವ್ಯವಸ್ಥೆ

ಭೂ ಸಮೀಕ್ಷೆ ವರದಿ ಪ್ರಕಾರ, ಬಿಬಿಎಂಪಿಯು ಎಲ್ಲ 8 ವಲಯಗಳಲ್ಲಿರುವ 24,300ಕ್ಕೂ ಹೆಚ್ಚು ಬೈಕ್‌ಗಳು ಹಾಗೂ 2,834 ಕಾರುಗಳಿಗೆ ಪೇ ಆಂಡ್ ಪಾರ್ಕ್ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ. ಈ ವ್ಯವಸ್ಥೆಯಿಂದ ಸಂಗ್ರಹವಾಗುವ ಹಣವನ್ನು ನಗರದಲ್ಲಿ ಮೋಟಾರು ರಹಿತ ಸಾರಿಗೆ (ಎನ್‌ಎಂಟಿ) ಸೌಲಭ್ಯ ಒದಗಿಸುವ ಯೋಜನೆಗೆ ಬಳಸಲಿದೆ.

ಬೆಂಗಳೂರಿನಲ್ಲಿ ಈಗಾಗಲೇ ಇರುವ 85 ರಸ್ತೆಗಳಲ್ಲಿನ ಪೇ ಆಂಡ್ ಪಾರ್ಕಿಂಗ್ ವ್ಯವಸ್ಥೆ ಇನ್ನಿತರ ರಸ್ತೆಗಳಿಗೆ ವಿಸ್ತರಿಸಲು ನಾಗರಿಕ ಸಂಸ್ಥೆಯು ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ವಾಹನ ಚಾಲಕರಿಂದ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವ ಸಂಸ್ಥೆಗಳು ಭಾಗವಹಿಸಲಿವೆ. ಇದೇ ತಿಂಗಳ ಅಕ್ಟೋಬರ್ ಅಂತ್ಯಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

ವಲಯವಾರು ಸ್ಥಳಗಳ ಮಾಹಿತಿ

ವಲಯವಾರು ಸ್ಥಳಗಳ ಮಾಹಿತಿ

ಬೆಂಗಳೂರು ದಕ್ಷಿಣ ವಲಯದಲ್ಲಿ 197 ರಸ್ತೆಗಳು, ಪಶ್ಚಿಮ 137 ರಸ್ತೆ ಮತ್ತು ದಾಸರಹಳ್ಳಿ 104 ರಸ್ತೆಗಳಲ್ಲಿ ಅಧಿಕ ಸ್ಥಳ ಗುರುತಿಸಲಾಗಿದೆ. ಅದೇ ರೀತಿ ಪೂರ್ವ ವಲಯದಲ್ಲಿ 59 ರಸ್ತೆ ಆಯ್ಕೆ ಮಾಡಲಾಗಿದೆ. ಗುರುತಿಸಲಾದ ಈ ಪ್ರದೇಶಗಳು ವಾಣಿಜ್ಯ ಪ್ರದೇಶಗಳಾಗಿದ್ದು, ಈ ಭಾಗದಲ್ಲಿ ಸುಸ್ಥಿರ ಸಂಚಾರಕ್ಕೆ ಅವಕಾಶ ಕಲ್ಪಿಸಲು ಬಿಬಿಎಂಪಿ ಇಲ್ಲಿ ಪೇ ಆಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರುತ್ತಿದೆ.

ಪೇ ಆಂಡ್ ಪಾರ್ಕ್ ಸ್ಥಳಗಳ ಹೊರತಾಗಿ ನಿಗದಿತ ಅಧಿಕಾರಿಗಳ ವಾಹನಗಳು, ಮೈಕ್ರೋ ಮೊಬಿಲಿಟಿ ಸೇವೆಗಳಿಗೆ, ವಿಕಲಚೇತನರು, ಆಟೋರಿಕ್ಷಾ ಮತ್ತು ಲಘು ವಾಣಿಜ್ಯ ವಾಹನಗಳಿಗೆ ಪಾರ್ಕಿಂಗ್ ಸ್ಥಳವನ್ನು ಸಹ ಬಿಬಿಎಂಪಿ ಮೀಸಲಿಟ್ಟಿದೆ. ಈ ಸ್ಥಳಗಳಲ್ಲಿ ಶುಲ್ಕವಿಲ್ಲದೇ ಸೈಕಲ್‌ಗಳನ್ನು ನಿಲ್ಲಿಸಬಹುದಾಗಿದೆ. ಅಲ್ಲದೇ ಸರಕುಗಳನ್ನು ಇಳಿಸಲು ಮತ್ತು ತುಂಬಲು ಪ್ರತ್ಯೇಕ ಸ್ಥಳ ನೀಡಲಾಗುತ್ತದೆ.

ಬಿಬಿಎಂಪಿ ಗುರುತಿಸಿದ ರಸ್ತೆಗಳು ಯಾವವು?

ಬಿಬಿಎಂಪಿ ಗುರುತಿಸಿದ ರಸ್ತೆಗಳು ಯಾವವು?

ನಗರದ ಬಿಇಎಲ್ ರಸ್ತೆ, ಜಾಲಹಳ್ಳಿ ರಸ್ತೆ, ಲಗ್ಗೆರೆ ಮುಖ್ಯರಸ್ತೆ, ವಿದ್ಯಾರಣ್ಯಪುರ, ಉತ್ತರಹಳ್ಳಿ ಮುಖ್ಯರಸ್ತೆ, ಪುಟ್ಟೇನಹಳ್ಳಿ ರಸ್ತೆ, ಹುಳಿಮಾವು ಮತ್ತು ವಿಜಯ್ ಬ್ಯಾಂಕ್ ಎನ್‌ಕ್ಲೇವ್ ರಸ್ತೆ, ಎಇಸಿಎಸ್ ರಸ್ತೆ, ಕೆಂಗೇರಿ, ಅಬ್ಬಿಗೆರೆ ರಸ್ತೆ, ಪೈಪ್‌ಲೈನ್ ರಸ್ತೆ, ಹೆಸರಘಟ್ಟ ರಸ್ತೆ, ಸಿಎಂಎಚ್ ರಸ್ತೆ, ಹೊಸ ತಿಪ್ಪಸಂದ್ರ ರಸ್ತೆ, ಡೇವಿಸ್ ರಸ್ತೆ, ಹೆಣ್ಣೂರು ಮುಖ್ಯರಸ್ತೆ, ಕೇಂಬ್ರಿಡ್ಜ್ ರಸ್ತೆ, ಬಳಗೆರೆ ರಸ್ತೆ, ಹೂಡಿ ಮುಖ್ಯರಸ್ತೆ.

ವೈಟ್‌ಫಿಲ್ಡ್ ಮುಖ್ಯರಸ್ತೆ, ಐಟಿಪಿಎಲ್ ರಸ್ತೆ, ಚನ್ನಸಂದ್ರ ಮುಖ್ಯರಸ್ತೆ, ಬೋರ್ ವೆಲ್ ರಸ್ತೆ, ಜಕ್ಕೂರು ರಸ್ತೆ, ಯಲಹಂಕ ರಸ್ತೆ, ಕೋಗಿಲು ರಸ್ತೆ, ಥಣಿಸಂದ್ರ ರಸ್ತೆ. ಆರ್‌ಎಂಸಿ ಯಾರ್ಡ್ ರಸ್ತೆ, ಯಶವಂತಪುರ ರಸ್ತೆ, ಮಾಗಡಿ ಮುಖ್ಯರಸ್ತೆ, ಚಂದ್ರಾ ಬಡಾವಣೆ ಮುಖ್ಯ ರಸ್ತೆ ಸೇರಿ ಮತ್ತಿತರ ರಸ್ತೆಗಳು. ಈ ಪೇ ಆಂಡ್ ಪಾರ್ಕಿಂಗ್ ವ್ಯವಸ್ಥೆಯಿಂದ ವೈಯಕ್ತಿಕ ವಾಹನಗಳ ಬಳಕೆ ಕಡಿಮೆ ಮಾಡುವ ಸಾಧ್ಯತೆ ಇದ್ದು, ನಾಗರಿಕ ಸಂಸ್ಥೆಗೆ ಆದಾಯ ಸಹ ಬರುತ್ತದೆ. ಹೀಗಾಗಿ ಸಾರಿಗೆ ತಜ್ಞರು ಈ ವ್ಯವಸ್ಥೆ ಪರವಾಗಿದ್ದಾರೆ.

ಅವಧಿಗೂ ಮೀರಿದ ವಾಹನಗಳಿಗೆ 500 ರೂ. ದಂಡ

ಅವಧಿಗೂ ಮೀರಿದ ವಾಹನಗಳಿಗೆ 500 ರೂ. ದಂಡ

ವ್ಯವಸ್ಥೆಯಡಿ ವಾಹನ ನಿಲುಗಡೆ ಮಾಡಿದ್ದ ಅವಧಿ ಮೀರಿದರೆ ಆಗ ಸವಾರರು ಹೆಚ್ಚುವರಿ ಸಮಯಕ್ಕೆ ದಂಡದ ದೂರಪದಲ್ಲಿ 500ರೂ. ನೀಡಬೇಕಿದೆ. ನಿಗದಿತ ಸಮಯ ಮೀರಿದರೆ ನಿಮಿಷ, ಇಲ್ಲವೇ ಗಂಟೆಗಳ ಲೆಕ್ಕದಲ್ಲಿ ಸೂಕ್ತ ಹಣ ನೀಡುವಂತೆ ಆಯ್ಕೆ ಈ ವ್ಯವಸ್ಥೆಯಡಿ ತರಲಾಗಿಲ್ಲ. ಹೀಗಾಗಿ ಇದಕ್ಕೆ ಸಾಕಷ್ಟು ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಈ ದಂಡ ಪಡೆಯುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ನಿಗದಿತ ಸಮಯಕ್ಕಿಂತ ಕೇವಲ 10 ನಿಮಿಷ ತಡವಾದರೆ 500 ರೂ. ದಂಡ ನಿಯಮ ಸಾಕಷ್ಟು ವ್ಯಾಜ್ಯ, ವಾಗ್ವಾದಗಳಿಗೆ ಕಾರಣವಾಗಬಹುದ ಎಂದು ವಾಹನ ಸವಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕಾರಣದಿಂದ ನಿಗದಿತ ಸಮಯ ಮೀರಿದರೆ ಆನ್‌ಲೈನ್‌ನಲ್ಲಿ ಸ್ಲಾಟ್‌ಗಳ ಮೂಲಕ ಹೆಚ್ಚುವರಿ ಸಮಯ ಪಾರ್ಕಿಂಗ್ ಮಾಡಲು ಅಥವಾ ವಿಸ್ತರಿಸುವ ಆಯ್ಕೆ ನೀಡಲಾಗುವುದು. ಆಗ ವಾಹನ ಸವಾರರು ಫೋನ್‌ಗಳಲ್ಲೇ ಸ್ಲಾಟ್‌ಗಳನ್ನು ವಿಸ್ತರಿಸಬಹುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Bruhat Bengaluru Mahanagara Palike (BBMP) will be Pay and Park system extend for 685 roads in Bengaluru city soon, Tender process starts expect Oct. month end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X