ಪಾಲಿಕೆ ಆದಾಯಕ್ಕೆ ದುಬೈ ಮಾದರಿ ಅನುಸರಣೆ!
ಬೆಂಗಳೂರು, ಮಾರ್ಚ್ 06: ಬಿಬಿಎಂಪಿ ಆದಾಯ ಮೂಲಗಳಾದ ವಾಹನ ನಿಲುಗಡೆ, ಜಾಹಿರಾತು, ಒಎಫ್ ಸಿ ಶುಲ್ಕ ವಸೂಲಿಯಲ್ಲಿ ದುಬೈ ಮಾದರಿ ಅನುಸರಿಸುವ ಮೂಲಕ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.
ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ಆದಾಯ ಮೂಲ ಸದೃಢಗೊಳಿಸುವ ಕುರಿತಂತೆ ವಿಪಕ್ಷನಾಯಕ ಪದ್ಮನಾಭರೆಡ್ಡಿ ನೀಡಿದ ಸಲಹೆಯನ್ನಾಧರಿಸಿ ಮಾತನಾಡಿದ ಅವರು, ದುಬೈ ಸೇರಿ ಇನ್ನಿತರೆ ಕಡೆಗಳಲ್ಲಿನ ಸ್ಥಳೀಯ ಆಡಳಿತಗಳು ವಾಹನ ನಿಲುಗಡೆ, ಜಾಹೀರಾಉ, ಒಎಫ್ ಸಿ ಶುಲ್ಕಗಳ ವರಮಾನದಿಂದಲೇ ಅಭಿವೃದ್ಧಿ ಕಾಮಗಾರಿ ನಡೆಸುತ್ತಿವೆ.
ಅದು ನಮ್ಮ ಆಡಳಿತಕ್ಕೂ ಮಾದರಿಯಾಗಬೇಕಿದೆ. ಅದರಂತೆ ಅಕ್ರಮ ಜಾಹೀರಾತಿ, ವಾಹನ ನಿಲುಗಡೆ ಹಾಗೂ ಒಎಫ್ ಸಿ ಅಳವಡಿಕೆಯನ್ನು ತಹಬದಿಗೆ ತಂದು, ಆದಾಯ ವೃದ್ಧಿಸಲು ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿ ಇಂದಲೇ ಜಾಹಿರಾತು ಫಲಕ ಅಳವಡಿಕೆಗೆ ಸ್ಥಳ ಗುರುತಿಸಲಿದೆ. ಅಲ್ಲದೆ, ಫಲಕಗಳ ವಿನ್ಯಾಸದಲ್ಲೂ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಬಿಬಿಎಂಪಿ ಆರೋಗ್ಯ ಕರ ಗ್ರಂಥಾಲಯ, ಭಿಕ್ಷುಕ ಕರಗಳನ್ನು ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ವ್ಯಯಿಸದೆ ರಾಜ್ಯದ ಎಲ್ಲ ನಗರಗಳಿಗೂ ಹಂಚುತ್ತಿದೆ. ಹೀಗಾಗಿ ಬಿಬಿಎಂಪಿ ವಸೂಲಿ ಮಾಡುವ ಉಪಕರಗಳನ್ನು ಬೆಂಗಳೂರಿಗೆ ಮಾತ್ರ ಸೀಮಿತ ಮಾಡುವಂತೆ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.












Click it and Unblock the Notifications