ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಚರಿಕೆ! ಎಲ್ಲೆಂದರಲ್ಲಿ ಕಸ ಹಾಕಿದರೆ ಬರಲಿದ್ದಾರೆ ಚಾರ್ಲಿಗಳು...

|
Google Oneindia Kannada News

ಬೆಂಗಳೂರು, ಜನವರಿ 23: 2020 ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಬೆಂಗಳೂರಿಗೆ ಅತ್ಯುತ್ತಮ ಅಂಕಗಳನ್ನು ಪಡೆಯಬೇಕು ಎಂದು ನಿರ್ಧರಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅದಕ್ಕಾಗಿ ಬಿರುಸಿನ ಸ್ವಚ್ಛತಾ ಚಟುವಟಿಕೆಗಳನ್ನು ನಡೆಸುತ್ತಿದೆ.

ಸ್ವಚ್ಛ ಸರ್ವೇಕ್ಷಣೆಯ ಬಗ್ಗೆ ಪಾಲಿಕೆ ಕೈಗೊಂಡ ಕ್ರಮಗಳ ಬಗ್ಗೆ ಸಾಕ್ಷಿ ಸಮೇತ ವರದಿ ನೀಡಲು ಜನವರಿ 31 ಕಡೆಯ ದಿನವಾಗಿದೆ. ಇದಕ್ಕಾಗಿ ಬಿಬಿಎಂಪಿ ವಿಭಿನ್ನ ಕಾರ್ಯಕ್ರಮಗಳನ್ನು ಹಾಕಿಕೊಂಡು ಬೆಂಗಳೂರು ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಜನಜಾಗೃತಿಯನ್ನಂಟು ಮಾಡುತ್ತಿದೆ. ಈ ಸಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಬೆಂಗಳೂರಿಗೆ ಅತ್ಯುತ್ತಮ ಅಂಕಗಳು ಬರಲೇಬೇಕು ಎಂದು ವಿಶೇಷವಾಗಿ ಮೇಯರ್ ಎಂ ಗೌತಮ್ ಕುಮಾರ್ ಹಾಗೂ ಆಯುಕ್ತ ಅನಿಲ್ ಕುಮಾರ್ ಅವರು ಹಠ ತೊಟ್ಟಿದ್ದಾರೆ.

'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...

ಈ ಪ್ರಯುಕ್ತ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಕಾರ್ಯಕ್ರಮಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಿರುವ ಬಿಬಿಎಂಪಿ ಇದೀಗ ಕಂಡ ಕಂಡಲ್ಲಿ ಕಸ ಹಾಕುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಇಂತವರ ಮೇಲೆ ಬಿಬಿಎಂಪಿ ಚಾರ್ಲಿಗಳು ಇನ್ಮುಂದೆ ಕಣ್ಣಿಡಲಿದ್ದಾರೆ.

ಬರಲಿದ್ದಾರೆ ಬಿಬಿಎಂಪಿ ಚಾರ್ಲಿಗಳು

ಬರಲಿದ್ದಾರೆ ಬಿಬಿಎಂಪಿ ಚಾರ್ಲಿಗಳು

ನಗರದಲ್ಲಿ ಸ್ವಚ್ಚತೆ ಕಾಯ್ದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ಜಾರಿಯಲ್ಲಿವೆ. ಸಾರ್ವಜನಿಕರು ತ್ಯಾಜ್ಯ ವಿಂಗಡಣೆ ಮಾಡಿ ಕಸ ವಿಲೇವಾರಿ ಮಾಡಬೇಕು. ಕಂಡ ಕಂಡಲ್ಲಿ ಕಸ ಹಾಕುವ ಹಾಗಿಲ್ಲ ಎಂಬ ನಿಯಮಗಳು ಜಾರಿಯಲ್ಲಿವೆ. ಆದರೆ, ಆಗಾಗ ಕೆಲವರು ಈ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುತ್ತಾರೆ. ಆದರೆ ಇನ್ಮುಂದೆ ಇಂತವರು ಬಹಳ ಎಚ್ಚರದಿಂದ ಇರಬೇಕಾಗುತ್ತೆ.

500 ರುಪಾಯಿ ದಂಡ ತೆರಬೇಕಾಗುತ್ತದೆ

ಕಂಡ ಕಂಡಲ್ಲಿ ಕಸ ಚೆಲ್ಲುವವರ ಮೇಲೆ ಕಣ್ಣಿಡಲು ಬಿಬಿಎಂಪಿ ಚಾರ್ಲಿ ಎಂಬ ಸಿಬ್ಬಂದಿಗಳನ್ನು ನಿಯೋಜಿಸಿದೆ. ಕಸ ಸೂಕ್ತವಾಗಿ ವಿಂಗಡಣೆ ಮಾಡದೇ ಮನಸ್ಸಿಗೆ ಬಂದಲ್ಲಿ ಕಸ ಚೆಲ್ಲಿದರೇ ತಕ್ಷಣವೇ ಚಾರ್ಲಿಗಳು ಬಂದು ಕಸ ಚೆಲ್ಲುವವರಿಗೆ ಸ್ಥಳದಲ್ಲೇ ಕನಿಷ್ಠ ೫೦೦ ರುಪಾಯಿ ದಂಡ ವಿಧಿಸಲಿದ್ದಾರೆ. ಇದಕ್ಕಾಗಿ ಅನೇಕ ಕಡೆ ಬಿಬಿಎಂಪಿ ಸಿಸಿಟಿವಿಗಳನ್ನು ಅಳವಡಿಸುತ್ತಿದೆ.

ಬೆಂಗಳೂರು ಚಿತ್ರಸಂತೆಯಲ್ಲಿ ಮಾರಾಟವಾದ ಕಲಾಕೃತಿಗಳು ಎಷ್ಟು ಗೊತ್ತಾ?ಬೆಂಗಳೂರು ಚಿತ್ರಸಂತೆಯಲ್ಲಿ ಮಾರಾಟವಾದ ಕಲಾಕೃತಿಗಳು ಎಷ್ಟು ಗೊತ್ತಾ?

ಏನಿದು 'ಸ್ವಚ್ಚ ಸರ್ವೇಕ್ಷಣೆ'?

ಏನಿದು 'ಸ್ವಚ್ಚ ಸರ್ವೇಕ್ಷಣೆ'?

'ಸ್ವಚ್ಚ ಭಾರತ್' ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಇದಕ್ಕೆ ಪೂರಕವಾಗಿ 2016 ರಲ್ಲಿ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಯೋಜನಾ ಸಚಿವಾಲಯ 'ಸ್ವಚ್ಚ ಸರ್ವೇಕ್ಷಣೆ' ಆರಂಭಿಸಿತು. ಸಚಿವಾಲಯ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಯಾವ ನಗರ ಅತಿ ಹೆಚ್ಚು ಸ್ವಚ್ಚತೆ ಹಾಗೂ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿದೆ ಎಂಬುದನ್ನು ಸರ್ವೇಯಲ್ಲಿ ಕಂಡುಕೊಂಡು ಅಂಕಗಳನ್ನು ನೀಡುತ್ತದೆ. ಅತಿ ಹೆಚ್ಚು ಅಂಕಗಳನ್ನು ಪಡೆದ ಟಾಪ್ 20 ನಗರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತದೆ.

2019 ರ ಸ್ವಚ್ಚ ಸರ್ವೇಕ್ಷಣೆ ಬಗ್ಗೆ

2019 ರ ಸ್ವಚ್ಚ ಸರ್ವೇಕ್ಷಣೆ ಬಗ್ಗೆ

2019 ರಲ್ಲೂ ಸ್ವಚ್ಚ ಸರ್ವೇಕ್ಷಣೆ ನಡೆದಿತ್ತು. ಆಗ ಇದರಲ್ಲಿ 400 ಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿದ್ದವು. ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 20 ನಗರಗಳನ್ನು ದೇಶದ ಸ್ವಚ್ಚ ನಗರಗಳು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಮಧ್ಯಪ್ರದೇಶದ ಇಂದೋರ್ 2019 ರ ದೇಶದ ನಂಬರ್ 1 ಸ್ವಚ್ಚ ನಗರವಾಗಿತ್ತು. ಅಂಬಿಕಾಪುರ ಎರಡನೇ ಸ್ಥಾನ ಪಡೆದಿದ್ದರೇ, ಕರ್ನಾಟಕದ ಮೈಸೂರು ಮೂರನೇ ಸ್ಥಾನ ಪಡೆದಿತ್ತು. ಬೆಂಗಳೂರು 194 ನೇ ಸ್ಥಾನ ಪಡೆದು ಸ್ವಚ್ಚತೆಯಲ್ಲಿ ಹಿಂದೆ ಬಿದ್ದಿದೆ ಎಂಬುದು ಬಹಿರಂಗವಾಗಿತ್ತು.

English summary
BBMP Takes New Step For Swachh Survekshan 2020 In Bengaluru. BBMPs Charlis takes immediate action against waste throwers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X