ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರಲ್ಲಿ ಮಳೆ ಎಚ್ಚರಿಕೆ ಕೊಟ್ಟು ಸಹಾಯವಾಣಿ ನೆನಪಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜೂನ್ 11: ಬೆಂಗಳೂರಲ್ಲಿ ಮಳೆ ಬರುವ ಎಚ್ಚರಿಕೆ ಕೊಟ್ಟು ಮತ್ತೊಮ್ಮೆ ಸಹಾಯವಾಣಿ ಕೇಂದ್ರಗಳ ನಂಬರ್‌ ಅನ್ನು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ನೆನಪಿಸಿದ್ದಾರೆ.

Recommended Video

DK Shivakumar finally gets good news from BS Yediyurappa | Oneindia Kannada

ಮುಂದಿನ ಕೆಲ ದಿನಗಳಲ್ಲಿ ಬೆಂಗಳೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವುದೇ ತೊಂದರೆಗಳಿದ್ದಲ್ಲಿ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಟವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಮಳೆಯಿಂದ ನಿಮ್ಮ ಏರಿಯಾದಲ್ಲೂ ತೊಂದರೆಯಾಗಿದೆಯೇ? : ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಮಳೆಯಿಂದ ನಿಮ್ಮ ಏರಿಯಾದಲ್ಲೂ ತೊಂದರೆಯಾಗಿದೆಯೇ? : ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ

ರಸ್ತೆ, ಕಸ, ಮಳೆ ನೀರು ಸಂಗ್ರಹ, ಬೀದಿನಾಯಿಗಳ ಹಾವಳಿ ಸೇರಿದಂತೆ ಸಾರ್ವಜನಿಕರು ವಿವಿಧ ವಿಚಾರಗಳ ಕುರಿತು ದೂರು ನೀಡಬಹುದಾಗಿದೆ. ಮೊದಲು ತಮ್ಮ ಬಿಬಿಎಂಪಿ ವಲಯಗಳನ್ನು ಜನರು ತಿಳಿದುಕೊಳ್ಳಬೇಕು.

ವಲಯವಾರು ಸಹಾಯವಾಣಿ ಕೇಂದ್ರಗಳನ್ನು ಬಿಬಿಎಂಪಿ ಸ್ಥಾಪನೆ ಮಾಡಿದೆ. ದೂರುಗಳು ಬರುತ್ತಿದ್ದಂತೆ ಅದನ್ನು ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ವಲಯವಾರು ಕರೆಗಳನ್ನು ಸ್ವೀಕಾರ ಮಾಡುವುದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.

BBMP Sets Up 8 Zonal Control Rooms To Address Rain Woes

ಜನರಿಗೆ ಮಳೆಯಿಂದ ಯಾವುದೇ ತೊಂದರೆ ಆದಲ್ಲಿ ಈ ನಂಬರ್‌ಗಳಿಗೆ ಕರೆ ಮಾಡಬಹುದಾಗಿದೆ. ಇನ್ನೇನು ಮುಂಗಾರು ಹತ್ತಿರವಾಗುತ್ತಿದೆ. ಬಿಬಿಎಂಪಿಯು ಮಳೆಗಾಲದಲ್ಲಿ ತೊಂದರೆ ಉಂಟು ಮಾಡಬಲ್ಲ ಮರದ ರೆಂಬೆಗಳನ್ನು ಕಡಿಯುವ ನಿಟ್ಟಿನಲ್ಲಿ ಆಲೋಚಿಸುತ್ತಿದೆ. ಮಳೆಗಾಲ ಎದುರಿಸಲು ಬೇಕಾಗಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಒಟ್ಟು ಎಂಟು ವಲಯಗಳಲ್ಲಿ ಬಿಬಿಎಂಪಿ ಕಂಟ್ರೋಲ್‌ ರೂಮ್‌ಗಳನ್ನು ಸ್ಥಾಪನೆ ಮಾಡಿದೆ. ಮುಂಗಾರನ್ನು ಎದುರಿಸಲು ಬೇಕಾದ ಸಿದ್ಧತೆಯಲ್ಲಿ ಬಿಬಿಎಂಪಿ ತೊಡಗಿದೆ.

English summary
BBMP Commissioner BH Anil Kumar reminded the number of BBMP's 8 Zonal Control Rooms and warning of rain in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X