Bengaluru Tunnel Road: 20 ಕಿಮೀ ಸುರಂಗ ರಸ್ತೆ ಕಾರಿಡಾರ್ ವರದಿ ಸಿದ್ಧ: ಟೆಂಡರ್‌ಗೆ ಸೂಚನೆ
ಬೆಂಗಳೂರು, ಜೂನ್ 06: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಇದರ ತಡೆಗೆ ಕೇವಲ ಒಂದೆರಡು ಕಿಲೋ ಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣದಿಂದ ಪ್ರಯೋಜನವಿಲ್ಲ ಎಂದು ಬಿಬಿಎಂಪಿ ಅಭಿಪ್ರಾಯಪಟ್ಟಿದೆ. ಉದ್ದೇಶಿತ ಬೃಹತ್ ಸುರಂಗ ಕಾರಿಡಾರ್ ನಿರ್ಮಾಣಕ್ಕೆ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ.
ಈ ಕುರಿತು ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಬೆಂಗಳೂರಿನ ಟ್ರಾಫಿಕ್ ಇಳಿಕೆಗೆ ಕೇವಲ 2-3 ಕೀಲೋ ಮೀಟರ್ ಸುರಂಗ್ ಮಾರ್ಗ ನಿರ್ಮಿಸಿಸದರೆ ಸಾಲದು. ಹೀಗಾಗಿ ಉದ್ದೇಶಿತ ಸುರಂಗ ರಸ್ತೆ ಯೋಜನೆಯ ಭಾಗವಾಗಿ 18-20 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆ ಕಾರಿಡಾರ್‌ನ ವರದಿ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಒಟ್ಟು ಎರಡು ಸುರಂಗ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಆ ಕಂಪನಿ ವರದಿ ನೀಡಿದೆ. ಶೀಘ್ರವೇ ಸಲ್ಲಿಸಲಾಗುವುದು ಎಂದರು.
ಆರಂಭಿಕ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭ
ಇನ್ನೂ ಯೋಜನೆಗೆ ಬೇಕಾದ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಆದಷ್ಟು ಶೀಘ್ರವೇ ಸರ್ಕಾರದಿಂದ ಟೆಂಡರ್ ಆಹ್ವಾನಿಸಲಾಗುವುದು. ಹೀಗೆ ಒಂದೊಂದಾಗಿ ಆರಂಭಿಕ ಪ್ರಕ್ರಿಯೆ ಪೂರ್ಣಗೊಳಿಸಿ ಉದ್ದೇಶಿತ ಯೋಜನೆಯ ಕಾಮಗಾರಿಗೆ ಕೈ ಹಾಕಲಾಗುವುದು ಎಂದು ಅವರು ವಿವರಿಸಿದರು.
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ 18-20 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಿಮಾಣ ನಿಲ್ದಾಣದತ್ತ ಸಂಚಾರ ಸರಾಗ
ಬೆಂಗಳೂರಿನಿಂದ ಹೆಬ್ಬಾಳ, ದೇವನಹಳ್ಳಿ ಹಾಗೂ ವಿಮಾನ ನಿಲ್ದಾಣ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಕಡೆಗೆ ತೆರಳುವವರಿಗೆ ಸಂಚಾರ ದಟ್ಟಣೆ ಇಲ್ಲದೇ ಸರಾಗವಾಗಿ ತೆರಳುವಂತೆ ಮಾಡಲು ನಗರದ ದಕ್ಷಿಣ ಭಾಗದಲ್ಲಿ ಸುರಂಗ ರಸ್ತೆ ಯೋಜನೆ ರೂಪಿಸಲಾಗಿದೆ.
ದಕ್ಷಿಣ ಭಾಗದಲ್ಲಿ ಸುರಂಗ ರಸ್ತೆಗೆ ಹೆಬ್ಬಾಳದ ಎಸ್ಟಿಮ್ ಮಾಲ್, ಜಯನಗರದ ಅಶೋಕ್ ಪಿಲ್ಲರ್, ಸಿಲ್ಕ್ ಬೋರ್ಡ್ ಜಂಕ್ಷನ್, ಗಾಲ್ಫ್ ಕೋರ್ಸ್ ರಸ್ತೆ, ಅರಮನೆ ರಸ್ತೆಯಿಂದ ಪ್ರವೇಶ ಪಡೆಯುಬಹುದು ಎಂದು ತುಷಾರ್ ಗಿರಿನಾತ್ ಹೇಳಿದರು.
ಇನ್ನೂ ಈ ದಕ್ಷಿಣ-ಉತ್ತರ ಸುರಂಗ ಮಾರ್ಗದ ರಸ್ತೆಯು ಚಾಲುಕ್ಯ ವೃತ್ತ, ಕಬ್ಬನ್ ಉದ್ಯಾನ, ಕೆಎಚ್ ರಸ್ತೆ, ಜಯನಗರ, ರೇಷ್ಮೆ ಮಂಡಳಿ ಜಂಕ್ಷನ್, ಹೆಬ್ಬಾಳದ ಎಸ್ಟಿಮ್ ಮಾಲ್ ಮಾರ್ಗವಾಗಿ ಸಾಗಲಿದೆ.
ಈ ಮೂಲಕ ಬ್ರ್ಯಾಂಡ್ ಬೆಂಗಳೂರು ಯೋಜನೆಯ ಭಾಗವಾದ ಈ ಸುರಂಗ ಮಾರ್ಗ ಚಿಂತನೆಗೆ ವೇಗ ದೊರಕಿದೆ. ಡಿಕೆ ಶಿವಕುಮಾರ್ ಅವರು ಈ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಬ್ರ್ಯಾಂಡ್ ಬೆಂಗಳೂರು ಉಪಕ್ರಮಕ್ಕೆ ಬಂದ ಸಲಹೆಗಳ ಪೈಕಿ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು ಎಂಬುದು ಪ್ರಮುಖ ಸಲಹೆಯಾಗಿದೆ.












Click it and Unblock the Notifications