ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಚಿಕನ್-ಮಟನ್ ಬೆಲೆ ಏರಿಕೆ ಮಾಡಿದ್ರೆ ಕ್ರಮ

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಾರ್ವಜನಿಕರಿಗೆ ವಿನಾಯಿತಿ ನೀಡಲಾಗಿದೆ. ಹೀಗಾಗಿ, ಚಿಕನ್ ಮತ್ತು ಮಟನ್ ಅಂಗಡಿಗಳಿಗೂ ವಿನಾಯಿತಿ ನೀಡಲಾಗಿದೆ.

ಆದರೆ, ಕೆಲವು ಕಡೆ ಲಾಕ್‌ಡೌನ್ ದುರ್ಬಳಕೆ ಮಾಡಿಕೊಳ್ಳುತ್ತಿರುವ ಚಿಕನ್ ಮತ್ತು ಮಟನ್ ಮಳಿಗೆಗಳು ಬೆಲೆ ಏರಿಕೆ ಮಾಡಿದ್ದಾರೆ. ಮನಸ್ಸಿಗೆ ಬಂದಂತೆ ಬೆಲೆ ಹೆಚ್ಚಿಸಿದ್ದು, ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.

ದೇಶದ ಅತಿ ಚಿಕ್ಕ ರಾಜ್ಯ ಗೋವಾದಲ್ಲಿ ಎಷ್ಟಿದೆ ಕೊರೊನಾ ಕೇಸ್?ದೇಶದ ಅತಿ ಚಿಕ್ಕ ರಾಜ್ಯ ಗೋವಾದಲ್ಲಿ ಎಷ್ಟಿದೆ ಕೊರೊನಾ ಕೇಸ್?

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಅನಿಲ್ ಕುಮಾರ್ ಮಾಂಸ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ''ಲಾಕ್‌ಡೌನ್ ನಿಂದ ಬೆಂಗಳೂರಿನಲ್ಲಿ ಚಿಕನ್, ಮಟನ್ ಅಗತ್ಯಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಗ್ರಾಹಕ ರಕ್ಷಣಾ ಕಾಯ್ದೆಯ ಅಡಿ ಇದು ಅಪರಾಧ. ನಿಗದಿ ಬೆಲೆಗಿಂತ ಹೆಚ್ಚು ಬೆಲೆ ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುತ್ತೆ'' ಎಂದು ಆದೇಶ ಹೊರಡಿಸಿದ್ದಾರೆ.

BBMP Ordered To Chicken And Mutton Price Not Be Rise

ಇದೇ ವಿಚಾರದ ಬಗ್ಗೆ ಬಿಬಿಎಂಪಿ ಮೇಯರ್ ಕೂಡ ಪ್ರತಿಕ್ರಿಯಿಸಿದ್ದು 'ಮಳಿಗೆಗಳಲ್ಲಿ ದುಬಾರಿ ದರದಲ್ಲಿ ಮಾಂಸವನ್ನು ಮಾರಾಟ ಮಾಡದಿರಲು ತಿಳಿಸಲಾಗಿದ್ದು, ಪಾಲಿಕೆ ನಿಗದಿಪಡಿಸಿದ ದರದಲ್ಲಿ ಮಾಂಸ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಹೆಚ್ಚಿನ ದರದಲ್ಲಿ ಮಾಂಸ ಮಾರಾಟ ಮಾಡುತ್ತಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು' ಎಂದಿದ್ದಾರೆ.

2 ಲಕ್ಷ Rapid ಟೆಸ್ಟ್ ಕಿಟ್ ಖರೀದಿ, ತಬ್ಲಿಘಿ ಜನರ ಟ್ರೇಸಿಂಗ್ ಪೂರ್ಣ: ಡಿಸಿಎಂ2 ಲಕ್ಷ Rapid ಟೆಸ್ಟ್ ಕಿಟ್ ಖರೀದಿ, ತಬ್ಲಿಘಿ ಜನರ ಟ್ರೇಸಿಂಗ್ ಪೂರ್ಣ: ಡಿಸಿಎಂ

ಬೆಂಗಳೂರಿನಲ್ಲಿ ಬಿಬಿಎಂಪಿ ನಿಗದಿ ಮಾಡಿರುವ ಬೆಲೆ ಇಂತಿದೆ.

ಚಿಕನ್ ಕೆ.ಜಿ 160 ರೂ

ಸ್ಕಿನ್ ಔಟ್ ಚಿಕನ್ ಕೆ.ಜಿ 180 ರೂ

ಕೋಳಿ ಕೆ.ಜಿ 125 ರೂ

ಹಾಗೂ ಕುರಿ ಮತ್ತು ಮೇಕೆ ಮಾಸ ಕೆ.ಜಿ 700 ರೂ ಎಂದು ಆದೇಶ ನೀಡಿದೆ.

English summary
BBMP commissioner has ordered to chicken and mutton price not be rise amid coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X