Get Updates
Get notified of breaking news, exclusive insights, and must-see stories!

Benglauru News: ಅನಧಿಕೃತ OFC ಕೇಬಲ್ ಅಳವಡಿಕೆ ವಿರುದ್ಧ ಸಮರ, ಹೊಸ ಪಾದಾಚಾರಿ ನಿರ್ಮಾಣ

ಬೆಂಗಳೂರು: ಮೇ. 15: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಓಎಫ್‌ಸಿ ಕೇಬಲ್ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ಅದೆಷ್ಟೋ ಬಾರಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಆಗಿದೆ. ಕೆಲವು ಸಲ ರಸ್ತೆ ಅಪಘಾತಗಳಿಗೂ ಕಾರಣವಾಗಿದೆ. ಈ ಸಂಬಂಧ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಮರ ಸಾರಿಗೆ ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ ಕೇಬಲ್ ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯಲ್ಲಿ ಗುಟ್ಟಹಳ್ಳಿ ಮೇಲ್ಸೆತುವೆ ಬಳಿಯಿಂದ ಗುರುವಾರ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಓಎಫ್‌ಸಿ ಕೇಬಲ್‌ಗಳು ನೇತಾಡುತ್ತಿರುವುದನ್ನು ಕಂಡು ಅದನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದರು.

BBMP News Crackdown on Unauthorized OFC Cables and New Pedestrian Infrastructure

ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ ಮಾಡಿರುವ ರಸ್ತೆಗಳಲ್ಲಿ ಕೇಬಲ್ ಗಳನ್ನು ನೆಲದಡಿ ಅಳವಡಿಸಲು ಡಕ್ಟ್ ಗಳ ವ್ಯವಸ್ಥೆ ಮಾಡಲಾಗಿದೆ. ಆಗಿದ್ದರೂ ಕೂಡಾ ಕೆಲ ಸಂಸ್ಥೆಗಳು ರಸ್ತೆ ಬದಿ, ಪಾದಚಾರಿ ಮಾರ್ಗ, ವಿದ್ಯುತ್ ಕಂಬಗಳು ಹಾಗೂ ಮರಗಳಲ್ಲಿ ನೇತಾಡುವ ರೀತಿಯಲ್ಲಿದ್ದು, ಅದರಿಂದ ನಾಗರಿಕರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಡಕ್ಟ್ ಗಳನ್ನು ಅಳವಡಿಸಿರುವ ಕಡೆ ಯಾವುದೇ ರೀತಿಯ ಅನಧಿಕೃತ ಓಎಫ್‌ಸಿ ಕೇಬಲ್ ಗಳನ್ನು ಅಳವಡಿಸಿದಂತೆ ಕ್ರಮವಹಿಸಿ ಎಂದರು.

ಸಾರ್ವಜನಿಕ ಉಪಯೋಗಕ್ಕೆ ಖಾಲಿ ಜಾಗ

ಪಾಲಿಕೆಯ ಒಡೆತನದ ಖಾಲಿ ಜಾಗಗಳು ಸಾಕಷ್ಟು ಕಡೆ ಬಳಕೆ ಮಾಡದೆ ಸ್ವಚ್ಛತೆ ಇಲ್ಲದಂತಾಗಿರುತ್ತದೆ. ಆದ್ದರಿಂದ, ಅಂತಹ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು. ಸದ್ಯ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ವ್ಯಾಪಾರ ವಲಯಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಪಾಲಿಕೆ ಒಡೆತನದ ವಿಶಾಲ ಜಾಗಗಳನ್ನು ಗುರುತಿಸುವಂತೆ ನಿರ್ದೇಶಿಸಿದರು.

BBMP News Crackdown on Unauthorized OFC Cables and New Pedestrian Infrastructure

ಟ್ರಾನ್ಸಫಾರ್ಮರ್ಸ್ ಬಳಿ ಸ್ವಚ್ಛತೆ ನೋಡಿಕೊಳ್ಳಿ

ರಸ್ತೆ ಬದಿ ಪಾದಚಾರಿ ಮಾರ್ಗಗಳಲ್ಲಿರುವ ಟ್ರಾನ್ಸಫಾರ್ಮರ್ ಗಳ ಬಳಿ ಸ್ವಚ್ಛತೆ ಇಲ್ಲದೆ ಓಡಾಡದಂತಹ ಸ್ಥಿತಿ ನಿರ್ಮಾಣ ಆಗಿರುತ್ತದೆ. ಈ ನಿಟ್ಟಿನಲ್ಲಿ ಟ್ರಾನ್ಸಫಾರ್ಮರ್ಸ್ ಇರುವ ಕಡೆ ಫೆನ್ಸಿಂಗ್ ಅಳವಡಿಸಿ ಫೆನ್ಸಿಂಗ್ ಮಾಡಬೇಕು. ಜೊತೆಗೆ ಅಲ್ಲಿ ಸದಾ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಬೆಸ್ಕಾಂ ಅಧಿಕಾರಿಗಳ ವಹಿಸಿದರು.

ಹೊಸದಾಗಿ ಪಾದಚಾರಿ ಮಾರ್ಗ ನಿರ್ಮಾಣ

ನಗರದ ಅರಮನೆ ರಸ್ತೆ, ವಸಂತನಗರದ 12ನೇ ಮುಖ್ಯ ರಸ್ತೆ ಹಾಗೂ ಕಂಟೋನ್ಮೆಂಟ್ ರೈಲ್ವೇ ಹಳಿ ಬಳಿ ಪಾದಚಾರಿ ಮಾರ್ಗ ನಿರ್ಮಾಣ ಮಾಡದಿರುವುದನ್ನು ಗಮನಿಸಿ, ಕೂಡಲೆ ಪರಿಶೀಲಿಸಿ ಎಲ್ಲೆಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಬೇಕಿದೆ ಹಾಗೂ ವಿಸ್ತರಿಸಬೇಕಿದೆ ಎಂಬುದನ್ನು ಗುರುತಿಸಿ ಹೊಸದಾಗಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲು ಅವರು ಸೂಚಿಸಿದರು.

ಅರಮನೆ ರಸ್ತೆ ಹಾಗೂ ಇನ್ನಿತರೆ ಕಡೆ ಗೋಡೆ, ಬ್ಯಾರಿಕೇಡ್ ಗಳಿಗೆ ಬಿತ್ತಿ ಪತ್ರಗನ್ನು ಅಂಟಿಸಿಸಲಾಗಿದೆ. ಅದರಿಂದ ನಗರ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ. ಈ ಸಂಬಂಧ ಎಲ್ಲೆಲ್ಲಿ ಬಿತ್ತಿಪತ್ರಗಳನ್ನು ಅಂಟಿಸಲಾಗಿದೆ ಎಂಬುದನ್ನು ಗುರುತಿಸಿ ಅದನ್ನು ತೆರವುಗೊಳಿಸಬೇಕು. ಅದಲ್ಲದೆ ರಸ್ತೆ ಬದಿ ಖಾಸಗಿ ಸಂಸ್ಥೆ, ಶಾಲಾ-ಕಾಲೇಜುಗಳ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ದಂಡ ವಿಧಿಸಬೇಕು ಎಂದು ಹೇಳಿದರು.

ಮಿಲ್ಲರ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳಗಿನ ಉಪಹಾರಕ್ಕೆ ಸಿದ್ದಪಡಿಸಿದ್ದ ಇಡ್ಲಿ ಹಾಗೂ ವೆಜಿಟೆಬಲ್ ಪಲಾವ್ ಅನ್ನು ಸೇವಿಸುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಉಪಹಾರದ ರುಚಿ ಚೆನ್ನಾಗಿದ್ದು, ಆಹಾರದ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ಶುಚಿತ್ವ ಕಾಪಾಡಲು ಸಿಬ್ಬಂದಿಗೆ ಸೂಚನೆ ನೀಡಿದರು.

ಮೋರಿಯಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಿ

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಹಳಿ ಬಳಿಯಿರುವ ಮೋರಿಯಲ್ಲಿ ಹೂಳು ತುಂಬಿದ್ದು, ಅದರಿಂದ ನೀರಿನ ಹರಿವು ನಿಧಾನಗತಿಯಲ್ಲಿದೆ. ಆದ್ದರಿಂದ ಮೋರಿಯಲ್ಲಿ ತುಂಬಿರುವ ಹೂಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು.

ಪೂರ್ವ ವಲಯ ವ್ಯಾಪ್ತಿಯಲ್ಲಿ ಗುಟ್ಟಹಳ್ಳಿ ಮೇಲ್ಸೆತುವೆ ಬಳಿಯಿಂದ ಪರಿಶೀಲನೆ ಪ್ರಾರಂಭಿಸಿ, ಅರಮನೆ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ಮುಂಭಾಗದ ರಸ್ತೆ, ಕನ್ನಿಂಗ್ಯಾಮ್ ರಸ್ತೆ, ಮಿಲ್ಲರ್ ರಸ್ತೆಯ ಮೂಲಕ ಕಂಟೋನ್ಮೆಂಟ್ ರೈಲ್ವೆ ಹಳಿಯವರೆಗೆ 2.5 ಕಿ.ಮೀ ರಸ್ತೆ ಪರಿಶೀಲನೆ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+