ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಗುಂಡಿ ದುರಸ್ತಿ: ಮತ್ತೊಂದು ಡೆಡ್‌ಲೈನ್ ಮಿಸ್‌ ಮಾಡಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜನವರಿ 11: ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಗೆ ನೀಡಲಾಗಿದ್ದ ಮತ್ತೊಂದು ಗಡುವನ್ನು ಮಿಸ್‌ಮಾಡಿಕೊಂಡಿದೆ.

ಕಳೆದ ಎರಡು ವಾರಗಳ ಹಿಂದೆ ಅಡ್ಮಿನಿಸ್ಟ್ರೇಟರ್ ಗೌರವ್ ಗುಪ್ತಾ ರಸ್ತೆಗುಂಡಿಗಳನ್ನು ಮುಚ್ಚಲು ಹತ್ತು ದಿನಗಳ ಡೆಡ್‌ಲೈನ್ ನೀಡಿದ್ದರು.

ಜನವರಿ ತಿಂಗಳಿನಲ್ಲಿ ಮಳೆ ಬಂದಿದ್ದರಿಂದ ಗಡುವಿಗೆ ತಕ್ಕಂತೆ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ, ರಸ್ತೆಗುಂಡಿಗಳನ್ನು ಮುಚ್ಚಲಾಗಿಲ್ಲ ಎಂದು ಎಂಜಿನಿಯರ್‌ಗಳು ಕಾರಣಕೊಟ್ಟಿದ್ದಾರೆ.

BBMP Misses Another Deadline To Fix Potholes

ಹಾಟ್ ಮಿಕ್ಸ್ ಕೈಕೊಟ್ಟಿದ್ದರಿಂದ ಕಾಮಗಾರಿ ತಡವಾಗಿದೆ, ಹಾಟ್‌ ಮಿಕ್ಸ್‌ನ್ನು ನಗರದ ವಿವಿಧೆಡೆ ಕಳುಹಿಸಿಕೊಡಲಾಗುತ್ತಿತ್ತು.

ಬೊಮ್ಮನಹಳ್ಳಿ, ಯಲಹಂಕ ಸುತ್ತಮುತ್ತಲಿನ ಪ್ರದೇಶದಲ್ಲಿ ಇದುವರೆಗೂ ಕಾಮಗಾರಿಯೇ ಆರಂಭವಾಗಿಲ್ಲ. ಬೆಂಗಳೂರಿನಲ್ಲಿ ಸುಮಾರು 15 ಸಾವಿರ ಕಿ.ಮೀ ಉದ್ದ ರಸ್ತೆಯಲ್ಲಿ ಸದಾ ವಾಹನಗಳು ತುಂಬಿರುತ್ತವೆ. ಒಂದೇ ದಿನದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಸಾಧ್ಯವಿಲ್ಲ.

ಬೆಂಗಳೂರನ್ನು ರಸ್ತೆಗುಂಡಿಗಳಿಂದ ಮುಕ್ತವಾಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಎಂಜಿನಿಯರ್ ಬಿಎಸ್ ಪ್ರಹ್ಲಾದ್ ಹೇಳಿದ್ದಾರೆ.

ಸಾಕಷ್ಟು ಕಡೆ ಸ್ಮಾರ್ಟ್ ಸಿಟಿ ಯೋಜನೆಗಳು ಆರಂಭವಾಗಿದೆ, ಜಲ ಮಂಡಳಿಯವರು ರಸ್ತೆಯನ್ನು ಅಗೆದಿದ್ದಾರೆ, ಒಳಚರಂಡಿ ಕಾರ್ಯ ನಡೆಯುತ್ತಿದೆ, ಇನ್ನೂ ಕೆಲವೆಡೆ ರಸ್ತೆ ಕಾಮಗಾರಿಯೂ ನಡೆಯುತ್ತಿದೆ.

Recommended Video

ಸಾಡೇಸಾತಿ ಶನಿ ಇದು ನಿಮ್ಮ ರಾಶಿಯಲ್ಲಿದ್ದರೆ ದೋಷವೋ ಫಲವೋ? | Effects of Sade Sati On Signs | Oneindia Kannada

ಇನ್ನು ಕತ್ರಿಗುಪ್ಪೆ ಸಮೀಪ ಸಾಕಷ್ಟು ಕಡೆ ರಸ್ತೆಗುಂಡಿಗಳಿದ್ದು, ಗುಂಡಿಗಳಲ್ಲಿರುವ ಕಲ್ಲುಗಳು ದ್ವಿಚಕ್ರವಾಹನ ಸವಾರರಿಗೆ ಸಾವನ್ನು ತಂದೊಡ್ಡಬಹುದು ಎಂದು ವಾಹನ ಸವಾರರು ಹೇಳಿದ್ದಾರೆ.

English summary
The Bruhat Bengaluru Mahanagara Palike has missed yet another deadline for filling potholes in the city, nearly two weeks after Administrator Gaurav Gupta had issued a 10-day deadline to engineers to do the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X