ಮೇಯರ್ ಚುನಾವಣೆ : ಅಶೋಕ ಸಮರ್ಥಿಸಿಕೊಂಡ ಯಡಿಯೂರಪ್ಪ
Recommended Video

ಬೆಂಗಳೂರು, ಸೆಪ್ಟೆಂಬರ್ 30 : ಬಿಬಿಎಂಪಿಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸೋತರೂ ಪಕ್ಷದ ಮುಂದಾಳತ್ವ ವಹಿಸಿಕೊಂಡಿದ್ದ ಆರ್.ಅಶೋಕ್ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡರು.
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಯಡಿಯೂರಪ್ಪ, 'ಎಲ್ಲಾ ಕಡೆ ಬಿಜೆಪಿ ದೊಡ್ಡ ಪಕ್ಷವಾಗಿ ಬರುತ್ತದೆ. ಆದರೆ, ದೇವರ ಇಚ್ಛೆ ಇಲ್ಲದ ಕಾರಣ ಅಧಿಕಾರ ಸಿಕ್ಕಿಲ್ಲ' ಎಂದರು.
'ಪ್ರಜಾಪ್ರಭುತ್ವದಲ್ಲಿ 49 ಅಂದರೆ ಸೊನ್ನೆಗೆ ಸಮ. 51 ಬಂದರೆ ನೂರಕ್ಕೆ ಸಮ. ಅಧಿಕಾರ ಸಿಗದೆ ಇರೋದು ನಮ್ಮ ವೈಫಲ್ಯ. ಇದಕ್ಕಾಗಿ ಯಾರನ್ನು ದೂರುವ ಅಗತ್ಯವಿಲ್ಲ' ಎಂದು ಹೇಳಿದರು.

'ಆರ್.ಅಶೋಕ್ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ, ಕೊನೆ ಘಳಿಗೆಯಲ್ಲಿ ಅನಂತ್ ಕುಮಾರ್ ಮತ್ತು ನಿರ್ಮಲಾ ಸೀತಾರಾಮನ್ ಅವರು ಅನಿವಾರ್ಯ ಕಾರಣದಿಂದ ಬರುವುದಕ್ಕೆ ಆಗಲಿಲ್ಲ. ಅದು ನಮ್ಮ ಸೋಲಿಗೆ ಕಾರಣವಾಯಿತು' ಎಂದರು.
ಸೆ.28ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ ಸಿಕ್ಕಿತ್ತು. ಗಂಗಾಬಿಕೆ ಅವರು ಮೇಯರ್ ಆಗಿ, ರಮೀಳಾ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು.












Click it and Unblock the Notifications