ಬಿಬಿಎಂಪಿ ಮೇಯರ್ ಬಿಎನ್ ಮಂಜುನಾಥ್ ರೆಡ್ಡಿ ವ್ಯಕ್ತಿ ಚಿತ್ರ
ಬೆಂಗಳೂರು, ಸೆ. 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಶುಕ್ರವಾರ ಚುನಾವಣೆ ನಡೆಸಲಾಯಿತು.
ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಮಡಿವಾಳ ವಾರ್ಡ್ ನ ಬಿಬಿಎಂಪಿ ಸದಸ್ಯ ಬಿ.ಎನ್ ಮಂಜುನಾಥ ರೆಡ್ಡಿ ಅವರು ನೂತನ ಮೇಯರ್ ಆಗಿ ಆಯ್ಕೆಯಾದರೆ, ವೃಷಭಾವತಿ ನಗರ ವಾರ್ಡ್ ನ ಜೆಡಿಎಸ್ ಪಕ್ಷದ ಹೇಮಲತಾ ಅವರು ಉಪ ಮಹಾಪೌರರಾಗಿ ಚುನಾಯಿತರಾಗಿದ್ದಾರೆ.
ಬಿಬಿಎಂಪಿ ಮೇಯರ್, ಉಪ ಮೇಯರ್ ಅಲ್ಲದೆ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಚುನಾವಣೆಯನ್ನು ಕೂಡಾ ನಗರ ಪ್ರಾದೇಶಿಕ ಆಯುಕ್ತರಾದ ಎಂವಿ ಜಯಂತಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಸಲಾಯಿತು.[ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ]
ಚುನಾವಣೆಗೂ ಮುನ್ನ ಹಂಚಿಕೆಯಾದಂತೆ ಮೇಯರ್ ಸ್ಥಾನ ಸ್ಥಾನ ಕಾಂಗ್ರೆಸ್ಗೆ, ಉಪ ಮೇಯರ್ ಸ್ಥಾನ ಜೆಡಿಎಸ್ಗೆ ಹಂಚಿಕೆಯಾದರೆ, 12 ಸ್ಥಾಯಿ ಸಮಿತಿಗಳಲ್ಲಿ 7 ಸ್ಥಾನ ಪಕ್ಷೇತರರಿಗೆ ಸಿಗಲಿದೆ. ಉಳಿದ 5ರಲ್ಲಿ ಕಾಂಗ್ರೆಸ್ಗೆ 3, ಜೆಡಿಎಸ್ಗೆ 2 ಸ್ಥಾನ ಸಿಕ್ಕಿದೆ.
ಬೆಂಗಳೂರು ಉಸ್ತುವರಿ ಸಚಿವ ರಾಮಲಿಂಗಾರೆಡ್ಡಿ ಅವರ ಅತ್ಯಾಪ್ತರಾದ ಬಿಎನ್ ಮಂಜುನಾಥ್ ರೆಡ್ಡಿ ಅವರ ಪರಿಚಯ ಇಲ್ಲಿದೆ
* ಬಿ .ನಾರಾಯಣ ರೆಡ್ಡಿ ಮಂಜುನಾಥ ರೆಡ್ಡಿ (52 ವರ್ಷ)ಅವರು ಮಡಿವಾಳದ ನಿವಾಸಿ.
* ಮನೆ ವಿಳಾಸ : ಸಂಖ್ಯೆ 84/19, 1ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ, ಮಾರುತಿ ನಗರ, ಮಡಿವಾಳ, ಬೆಂಗಳೂರು - 560 068.

ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ
* ಈ ಹಿಂದೆ ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ, ಮಡಿವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 3 ಬಾರಿ ಆಯ್ಕೆಯಾಗಿದ್ದಾರೆ. 1991ರಿಂದ ಬಿಬಿಎಂಪಿ ಬೆಂಗಳೂರಿನ ವಾರ್ಡ್ ಗಳ ಪರಿಚಯವಿದೆ. ಅನುಭವಿ ಬೆಂಗಳೂರು ನಾಗರಿಕ.
* ಕಳೆದ ಅವಧಿ(2013)ಯಲ್ಲಿ ಬಿಬಿಎಂಪಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿದ್ದರು
* ಮಂಜುನಾಥ್ ರೆಡ್ಡಿ ಬಿಎ ಪದವಿಧರ.
* 1983ರಲ್ಲಿ ಎನ್‍ಎಸ್‍ಯುಐ ಸದಸ್ಯರಾಗಿ ಎಂಟ್ರಿ ನೀಡಿದ ಇವರು ಜಯನಗರ ಯೂತ್ ಬ್ಲಾಕ್ ಅಧ್ಯಕ್ಷರಾಗಿದ್ದರು.
* 1996ರಲ್ಲಿ ಮೊದಲ ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದರು.

ರಾಮಲಿಂಗಾರೆಡ್ಡಿ ಅವರ ಆತ್ಯಾಪ್ತರು
* 2001ರಲ್ಲಿ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು.
* 2015ರಲ್ಲಿ ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ(172)ದ ಮಡಿವಾಳ ವಾರ್ಡ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
1996, 2010 ಮತ್ತು 2015ರಲ್ಲಿ ಸೇರಿ ಒಟ್ಟು ಮೂರು ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿರುವ ಇವರ ಹೆಸರನ್ನು ಮೇಯರ್ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರೇ ಸೂಚಿಸಿದ್ದರು.

131 ಮತಗಳನ್ನು ಪಡೆದ ಮಂಜುನಾಥ ರೆಡ್ಡಿ
ಬಿಬಿಎಂಪಿ ಪಾಲಿಕೆ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 131 ಮತಗಳನ್ನು ಪಡೆದ ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾದರು. ಬಿಜೆಪಿ ಪರವಾಗಿ ಕಾಡು ಮಲ್ಲೇಶ್ವರ ವಾರ್ಡ್ ಬಿಜೆಪಿ ಸದಸ್ಯ ಮಂಜುನಾಥ ರಾಜು ಅವರು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications