• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು; ಜೆ. ಸಿ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ?

|

ಬೆಂಗಳೂರು, ಮೇ 12 : ಜಯಚಾಮರಾಜೇಂದ್ರ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ ಈ ಸುದ್ದಿ. ಬೆಂಗಳೂರು ನಗರದ ಹೃದಯ ಭಾಗದ ಈ ರಸ್ತೆ ಸದಾ ವಾಹನಗಳಿಂದ ತುಂಬಿರುತ್ತದೆ.

ಜಯಚಾಮರಾಜೇಂದ್ರ ರಸ್ತೆ ಎಂದರೆ ತಕ್ಷಣ ನೆನಪಿಗೆ ಬಾರದಿರಬಹುದು. ಆದರೆ, ಜೆ. ಸಿ. ರಸ್ತೆ ಎಂದರೆ ಬೆಂಗಳೂರಲ್ಲಿ ಸಂಚಾರ ನಡೆಸುವ ಜನರಿಗೆ ತಕ್ಷಣ ತಿಳಿಯುತ್ತದೆ. ಟೌನ್ ಹಾಲ್ ಬಳಿ ಎನ್. ಆರ್. ರಸ್ತೆಯನ್ನು ಸೇರುವ ಪ್ರಮುಖ ರಸ್ತೆಯೇ ಜೆ. ಸಿ. ರಸ್ತೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಕೊನೆಗೂ ಇಳಿಕೆ

ಸದಾ ವಾಹನದಿಂದ ತುಂಬಿರುವ ಜೆ. ಸಿ. ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಬಿಎಂಪಿ, ಬೆಂಗಳೂರು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಾರೆ. ವಾಹನಗಳ ಸುಗಮ ಸಂಚಾರಕ್ಕಾಗಿ ಬಿಬಿಎಂಪಿ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದೆ.

ಬೆಂಗಳೂರಿನ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್, ಎಲ್ಲೆಲ್ಲಿ?

ಜೆ. ಸಿ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಈ ಕುರಿತು ಸುಳಿವು ನೀಡಿದ್ದಾರೆ. ಪಾರ್ಕಿಂಗ್ ನಿಷೇಧಿಸಿ ವಾಹನಗಳು ಸುಗಮವಾಗಿ ಸಂಚಾರ ನಡೆಸಲು ಅನುಕೂಲ ಮಾಡಿಕೊಡುವ ಕುರಿತು ಚರ್ಚೆ ಆರಂಭವಾಗಿದೆ.

ಬ್ರಿಗೇಡ್, ಎಂಜಿ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ, ಅಂಗಡಿ ಮಾಲೀಕರ ಪರದಾಟ

ಮಂಗಳವಾರ ಜೆ. ಸಿ. ರಸ್ತೆಯಲ್ಲಿರುವ ಬಹುಹಂತದ ಕಾರುಗಳ ಪಾರ್ಕಿಂಗ್ ಸ್ಥಳಕ್ಕೆ ಬಿಬಿಎಂಪಿ ಆಯುಕ್ತರು, ಸಂಸದ ತೇಜಸ್ವಿ ಸೂರ್ಯ ಮತ್ತು ಚಿಕ್ಕಪೇಟೆ ಶಾಸಕ ಉದಯ ಬಿ. ಗರುಡಾಚಾರ್ ಭೇಟಿ ನೀಡಿದ್ದರು.

ಮಿನರ್ವ ವೃತ್ತದಿಂದ ಆರಂಭವಾಗುವ ಜೆ. ಸಿ. ರಸ್ತೆಯು ವಿಶಾಲವಾಗಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳು ಈ ರಸ್ತೆಯಲ್ಲಿವೆ. ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ, ಎಡಿಆರ್ ರಂಗಮಂದಿರ ಇದೇ ರಸ್ತೆಯಲ್ಲಿ ಇದೆ.

ಜೆ. ಸಿ. ರಸ್ತೆಯಲ್ಲಿ ಬಿಬಿಎಂಪಿಯ ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡವಿದೆ. ಆದರೆ, ಬೈಕ್, ಆಟೋ ಮುಂತಾದವುಗಳನ್ನು ಪಾರ್ಕಿಂಗ್ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಈಗ ಪಾರ್ಕಿಂಗ್ ಸಂಪೂರ್ಣ ನಿಷೇಧಿಸಿದರೆ ವಾಹನ ಸವಾರರಿಗೆ ತೊಂದರೆಯಾಗಲಿದೆ.

English summary
BBMP commissioner B. H. Anil Kumar hinted that parking on Jayachamarajendra road may ban for free movement of traffic. Jayachamarajendra road most commonly known as J.C.Road is a street in the heart of Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X