ಶಿವಾಜಿನಗರವನ್ನು ಪ್ಲಾಸ್ಟಿಕ್ ಹಾಗೂ ತ್ಯಾಜ್ಯಮುಕ್ತವಾಗಿಸಲು ಬಿಬಿಎಂಪಿಯಿಂದ ಯೋಜನೆ
ಬೆಂಗಳೂರು,ಜನವರಿ 28: ಶಿವಾಜಿನಗರವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ತ್ಯಾಜ್ಯಮುಕ್ತವನ್ನಾಗಿಸಲು ಯೋಜನೆ ರೂಪಿಸುವುದಾಗಿ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಶಿವಾಜಿನಗರದಲ್ಲಿ ದಿನಕ್ಕೆ ನೂರಾರು ಕೋಟಿ ರೂ. ವ್ಯಾಪಾರ ವಹಿವಾಟು ನಡೆಯುತ್ತಿದೆ. ಜತೆಗೆ ಅಲ್ಲಿಯೇ ಹೆಚ್ಚಾಗಿ ಗ್ರಾಹಕರು, ಸಾರ್ವಜನಿಕರು ಓಡಾಟ ನಡೆಸುತ್ತಾರೆ.
ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಲು ಹೊಸಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ತ್ಯಾಜ್ಯಮುಕ್ತ ಪ್ರದೇಶವನ್ನಾಗಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಈ ಭಾಗದ ವ್ಯಾಪ್ತಿಯಲ್ಲಿ ಜವಳಿ ಮಳಿಗೆಗಳು ಮಾತ್ರವಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಮಾಂಸದಂಗಡಿ, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಬಗೆಯ ಅಂಗಡಿಗಳಿವೆ. ಈ ಕಾರಣಕ್ಕಾಗಿ ನಿತ್ಯ ರಸ್ತೆಗಳಲ್ಲಿ ತ್ಯಾಜ್ಯ ಕಂಡುಬರುತ್ತದೆ.
ಆದರೆ ಮೈಕ್ರೋ ಪ್ಲ್ಯಾನ್ ಜಾರಿಯಾದಲ್ಲಿ ಕಸಮುಕ್ತ ರಸ್ತೆ, ಪರಿಸರ ನಿರ್ಮಿಸಬಹುದಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿಮೈಕ್ರೋ ಯೋಜನೆಯಲ್ಲಿ ಕಸದ ಬುಟ್ಟಿ,ಅಂಗಡಿ ಮಾಲಿಕರೊಂದಿಗೆ ಸಂವಾದ, ಕಸದ ನಿಯಮ ಉಲ್ಲಂಘಿಸಿದರೆ ಶುಲ್ಕ ವಿಧಿಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮುಖ್ಯವಾಗಿ ಈ ಯೋಜನೆ ಯಶಸ್ಸು ಕಾಣಲು ಸಾರ್ವಜನಿಕರ ಸಹಕಾರವೂ ಕೂಡ ಅತ್ಯಗತ್ಯ ಎಂದು ಹೇಳಿದರು.












Click it and Unblock the Notifications