ವರದಕ್ಷಿಣೆ ಕಿರುಕುಳಕ್ಕೆ ಬಿಬಿಎಂಪಿ ಆಸ್ಪತ್ರೆ ಡಾಕ್ಟರ್ ಅಶ್ವಿನಿ ಬಲಿ?

ಬೆಂಗಳೂರು, ಆಕ್ಟೋಬರ್ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ಪತ್ರೆಯ ವೈದ್ಯೆಯೊಬ್ಬರು ನೇಣುಬಿಗಿದುಕೊಂಡು ಮೃತಪಟ್ಟಿರುವ ಘಟನೆ ಮಂಗಳವಾರದಂದು ನಡೆದಿದೆ. ಮೃತರನ್ನು 32 ವರ್ಷ ವಯಸ್ಸಿನ ಡಾ. ಅಶ್ವಿನಿ ಎಂದು ಗುರುತಿಸಲಾಗಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಕೃಷ್ಣಾನಂದನಗರದ ಬಿಬಿಎಂಪಿ ಆಸ್ಪತ್ರೆಯಲ್ಲಿ ಈಕೆ ವೈದ್ಯೆಯಾಗಿದ್ದರು. ಡಾ. ಅಶ್ವಿನಿ ಅವರು ಸಾಕಮ್ಮ ಗಾರ್ಡನ್ ನಲ್ಲಿರುವ ತಮ್ಮ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ವರದಕ್ಷಿಣೆ ಕಿರುಕುಳ ಶಂಕೆ: ತಮ್ಮ ಪುತ್ರಿ ಡಾ. ಅಶ್ವಿನಿ ಸಾವಿಗೆ ಆಕೆ ಪತಿ ಡಾ. ಲೋಹಿತ್ ಕಾರಣ ಎಂದು ಅಶ್ವಿನಿ ಅವರ ಕುಟುಂಬದವರು ಆರೋಪಿಸಿದ್ದಾರೆ.

BBMP Hospital doctor Ashwini commits suicide

ಡಾ ಲೋಹಿತ್ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಅಶ್ವಿನಿ ಹಾಗೂ ಲೋಹಿತ್ ಅವರಿಗೂ ಮದುವೆಯಾಗಿತ್ತು. ಲೋಹಿತ್ ಅವರ ಮನೆಯವರು ಅಶ್ವಿನಿ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ.

ಇದರಿಂದ ಮನನೊಂದ ಅಶ್ವಿನಿ, ಇತ್ತೀಚೆಗೆ ಲೋಹಿತ್ ಅವರ ಮನೆ ತೊರೆದು ತವರು ಮನೆಗೆ ಬಂದಿದ್ದರು. ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಅಶ್ವಿನಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ನಂದಿನಿ ಲೇಔಟ್ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+