• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಟೋ-ಕ್ಯಾಬ್ ಚಾಲಕರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಿದ ಬಿಬಿಎಂಪಿ

|

ಬೆಂಗಳೂರು, ಮಾರ್ಚ್ 23: ಕೊರೊನಾ ಸೋಂಕು ಹರಡುತ್ತಿದ್ದರು ಜನಸಾಮಾನ್ಯರು ಈ ಕುರಿತು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮತ್ತೊಂದೆಡೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಇಲಾಖೆಯಿಂದ ಕೊರೊನಾ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿಂದು ಬಿ.ಬಿ.ಎಂ.ಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಬಿ.ಬಿ.ಎಂ.ಪಿ ಕೇಂದ್ರ ಕಛೇರಿಯಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಉಚಿತವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್ ಗ್ಲೌಸ್ ವಿತರಣಾ ಮಾಡಿ ಜನಜಾಗೃತಿ ಮೂಡಿಸಲಾಯಿತು.

ಕೊರೊನಾ: ರಾಜ್ಯ ಸರಕಾರ ಎಡವುತ್ತಿರುವುದು ಈ 3 ವಿಚಾರದಲ್ಲಿ, ತುರ್ತಾಗಿ ಗಮನಕೂಡಬೇಕಿದೆ

ಇಂದು ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ವಿಶೇಷ ಆಯುಕ್ತರಾದ ರಂದೀಪ್, ಅಧ್ಯಕ್ಷರಾದ ಅಮೃತ್ ರಾಜ್, ಪದಾಧಿಕಾರಿಗಳಾದ ನಂಜಪ್ಪ, ಎಸ್.ಜಿ.ಸುರೇಶ್, ಕೆ.ಮಂಜೇಗೌಡರು, ರಾಮಚಂದ್ರ, ಸಂತೋಷ್ ಕುಮಾರ್ ನಾಯಕ್, ಕೆ.ಜಿ.ರವಿ, ವಿಭಾ, ನರಸಿಂಹ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಆಯುಕ್ತ ಅನಿಲ್ ಕುಮಾರ್ 'ಕೊರೋನಾ ವೈರಸ್ ಮಹಾಮಾರಿ ವಿರುದ್ದ ಹೋರಾಡಲು ಬಿಬಿಎಂಪಿ ಸರ್ವ ಸನ್ನದ್ದವಾಗಿದೆ. ಸಾರ್ವಜನಿಕರು ಬಿ.ಬಿ.ಎಂ.ಪಿ ಜೊತೆಯಲ್ಲಿ ಸಹಕಾರ, ಬೆಂಬಲ ನೀಡಬೇಕು. ಕೊರೋನಾ ವೈರಸ್ ಬರದಂತೆ ತಡೆಯಲು ಸ್ವಚ್ಚತೆ ಮುಖ್ಯ ಮತ್ತು ಕೈಗಳನ್ನು ಹೆಚ್ಚಾಗಿ ಸ್ವಚ್ಚಗೊಳಿಸಿಕೊಳ್ಳಿ ಮತ್ತು ಒಬ್ಬರಿಂದ, ಒಬ್ಬರು ಅಂತರ ಕಾಯ್ದುಕೊಳ್ಳಿ. ನೆಗಡಿ, ಕೆಮ್ಮು ಜ್ವರ ಲಕ್ಷಣಗಳು ಕೊಡಲೆ ವೈದ್ಯರನ್ನ ಸಂಪರ್ಕ ಮಾಡಿ ಮತ್ತು ಹೆಲ್ಪ್ ಲೈನ್ ಗೆ ಕರೆ ಮಾಡಬಹುದು. ಬಿ.ಬಿ.ಎಂ.ಪಿ.ಕೊರೋನಾ ವೈರಸ್ ತಡೆಗಟ್ಟಲು ವಾರ್ ರೂಂ ತೆರಯಲಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸಲು ಜೈಲು ಕೈದಿಗಳು ನೆರವು

ಇನ್ನು ಬಿ.ಬಿ.ಎಂ.ಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್ 'ಕೊರೋನಾ ವೈರಸ್ ನಿಂದ ರಕ್ಷಣೆ ಪಡೆಯಲು ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದೆ. ಕೊರೋನಾ ವೈರಸ್ ಸಾಂಕ್ರಮಿಕ ರೋಗದ ವಿರುದ್ಧ ಸಮರಕ್ಕೆ ಸಾರ್ವಜನಿಕರ ಜೊತೆಯಲ್ಲಿ ಬಿ.ಬಿ.ಎಂ.ಪಿ ಅಧಿಕಾರಿ ಮತ್ತು ಸಿಬ್ಬಂದಿಗಳು ಕೈಜೋಡಿಸಲ್ಲಿದ್ದಾರೆ' ಎಂದು ಹೇಳಿದರು.

English summary
Bbmp officers and employees welfare association gave free sanitizer mask and gloves to auto and Cab drivers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X