BBMP fire accident: ಗಂಭೀರವಾಗಿ ಗಾಯಗೊಂಡಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್‌ ಚಿಕಿತ್ಸೆ ಫಲಿಸದೇ ವಿಧಿವಶ

ಬೆಂಗಳೂರು, ಆಗಸ್ಟ್‌, 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಗುಣ ನಿತಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಇ ಶಿವಕುಮಾರ್ ಅವರು ಶೇಷಾದ್ರಿಪುರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ‌.

bbmp-fire-accident

ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಅಗ್ನಿ ಅವಘಡ ಮುಖ್ಯ ಇಂಜಿನಿಯರ್ ಶಿವಕುಮಾರ್ ಪ್ರಾಣ ಕಸಿದು ಕೊಂಡಿದೆ. ಒಂದು ಕಡೆ ಇನ್ನೋರ್ವ ಗಾಯಾಳು ಜ್ಯೋತಿಯ ಬದುಕನ್ನೇ ಕತ್ತಲು ಮಾಡಿದೆ. ಹೀಗೆ ಅವಘಡದ ಬೆಂಕಿಯಲ್ಲಿ ಬೆಂದಾಕೆಯ ಬದುಕಿನಲ್ಲಿ ಹೊಸ ಬೆಳಕು ಮೂಡಿಸಲು ಬಿಬಿಎಂಪಿ ಮುಂದಾಗಿತ್ತು. ಆದರೆ ಈಗ ಆಕೆಯ ಬದುಕು ಸೆಟಲ್ ಮಾಡುವ ಮಧ್ಯೆ ಮುಖ್ಯ ಇಂಜಿನಿಯರ್ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಆಗಸ್ಟ್ 11ರಂದು ನಡೆದ ಅವಘಡದಲ್ಲಿ, ಲ್ಯಾಬ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿ ಗಂಭೀರ ಗಾಯಗೊಂಡಿದ್ದರು. ಜ್ಯೋತಿಯ ಮುಖ ಹಾಗೂ ಎದೆ ಭಾಗಗಳಿಗೆ ಸುಟ್ಟಗಾಯವಾಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಬಿಬಿಎಂಪಿ ಕ್ಯಾಲಿಟಿ ಕಂಟ್ರೋಲ್ ರೂಂಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ಗಾಯಗೊಂಡಿದ ಮುಖ್ಯ ಎಂಜಿನಿಯರ್ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಮುಖ್ಯ ಇಂಜಿನಿಯರ್ ಶಿವಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ವಿಕ್ಟೋರಿಯಾದಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆರೋಗ್ಯ ಸುಧಾರಿಸದ ಹಿನ್ನೆಲೆ ಕೃತಕ ಉಸಿರಾಟದ ಜೊತೆಗೆ ಶಿವಕುಮಾರ್ ಅನ್ನು ಹೆಚ್ಚಿನ ಚಿಕಿತ್ಸೆಗೆ ಶಿಫ್ಟ್‌ ಮಾಲಾಗಿತ್ತು.

ಬೆಂಕಿ ಅವಘಡದಲ್ಲಿ ಶಿವಕುಮಾರ್‌ಗೆ 25 ಪರ್ಸೆಂಟ್ ಸುಟ್ಟ ಗಾಯವಾಗಿತ್ತು, ಇಂದು ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 45 ವರ್ಷ ವಯಸ್ಸಿನ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಅದಕ್ಕೂ ಮುಂಚೆ ಇಂದು ಆಸ್ಪತ್ರೆಗೆ ಬೇಟಿ ನೀಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಗ್ಯ ವಿಚಾರಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಿವಕುಮಾರ್ ಸಾವನ್ನಪ್ಪಿದ್ದಾರೆ.

ಇನ್ನೂ ಮೃತ ಶಿವಕುಮಾರ್ ಮೂಲತಹ ನಂಜನಗೂಡಿನವರಾಗಿದ್ದಾರೆ. ಶಿವಕುಮಾರ್‌ಗೆ ಚಿಕ್ಕ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ತಂದೆ ಬರುವ ದಾರಿ ಕಾದು ಆ ಮಕ್ಕಳು ಕುಳಿತಿದ್ದರು. ಆದರೆ ಅಗ್ನಿ ಅವಘಡದಲ್ಲಿ ಆದ ಈ ಅವಾಂತರ ಮಕ್ಕಳಿಗೆ ತಂದೆಯ ಪ್ರೀತಿ ಕಿತ್ತು ಕೊಳ್ಳುವಲ್ಲಿ ಕಾರಣ ಆಗಿದೆ. ಶಿವಕುಮಾರ್ ಪಾಲಿಕೆಯಲ್ಲಿ ಕಳೆದ 16 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಆದತರೆ ಈ ಬಿಬಿಎಂಪಿ ಅಗ್ನಿ ಅವಘಡದಲ್ಲಿ ಉಸಿರಾಟ ನಿಲ್ಲಿಸಿದ್ದಾರೆ.

ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಎಂಜಿನಿಯರ್‌ಗಳು ರಾಸಾಯನಿಕ ಬಳಸಿ ಡಾಂಬರು ಮಿಶ್ರಣದ ಬಿಟುಮಿನ್‌ನ ಗುಣಮಟ್ಟ ಪರಿಶೀಲಿಸಬೇಕಿತ್ತು. ಆದರೆ, ನೌಕರ ಓರ್ವ ಬೆಂಜಿನ್‌ ಎಂಬ ರಾಸಾಯನಿಕ ಬಳಸಿ ಬಸವನಗುಡಿ ರಸ್ತೆಗೆ ಹಾಕಿದ್ದ. ಡಾಂಬರು ಮಿಶ್ರಣದ ಬಿಟುಮಿನ್‌ನ ಗುಣಮಟ್ಟ ಪರಿಶೀಲಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ.

ಇದರಿಂದ ಎಂದಿನಂತೆ ಕೆಲಸ ಮಾಡಿಕೊಂಡು ನಾರ್ಮಲ್ ಆಗಿ ಇರಬೇಕಿದ್ದ ಗಾಯಾಳುಗಳು ಆಸ್ಪತ್ರೆಗೆ ದಾಖಲು ಆಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬಂದಿದೆ. ಕೆಲವರ ಬದುಕು ದಿಕ್ಕಾ ಪಾಲಾಗಿದೆ. ಮುಖ್ಯ ಇಂಜಿನಿಯರ್ ಪ್ರಾಣ ಪಕ್ಷಿ ಹಾರಿ ಹೋಗಿ ಕುಟುಂಬದ ರೋದನೆ ಹೇಳತೀರದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+