ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking:ಬಿಬಿಎಂಪಿ ಚುನಾವಣೆ: ಪದ್ಮನಾಭನಗರದಲ್ಲಿ ಗೌರಿ ಗಣೇಶ ಹಬ್ಬದ ನೆಪ ಬಾಗೀನ, ಸೀರೆ ಬಳುವಳಿ!

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ಸೀರೆ ಮತ್ತು ಊಟದ ರಾಜಕೀಯ ಜೋರಾಗ ತೊಡಗಿದೆ. ಕಂದಾಯ ಸಚಿವ ಆರ್ ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪದ್ಮನಾಭನಗರ ವಾರ್ಡ್‌ನಲ್ಲಿ ಗೌರಿ ಗಣೇಶ ಹಬ್ಬದ ನೆಪದಲ್ಲಿ ಬಾಗೀನ ಕೊಟ್ಟು ಸೀರೆಯನ್ನು ಹಂಚಿ ಊಟವನ್ನು ಹಾಕಿಸಲಾಗಿದೆ.

ಬಿಬಿಎಂಪಿ ಚುನಾವಣೆಗೆ ಮುನ್ನವೇ ಅಭ್ಯರ್ಥಿಗಳು ಅಖಾಡಕ್ಕೆ ಧಮುಕಿದ್ದಾರೆ. ತಮ್ಮ ವಾರ್ಡ್‌ನ ಮತದಾರರನ್ನು ಒಲಿಸಿಕೊಳ್ಳುವ ದೂರದೃಷ್ಟಿಯಿಂದ ಸಮಾಜಮುಖಿ ಕೆಲಸದಂತೆ ಕಾರ್ಯದಂತೆ ಗೌರಿ ಗಣೇಶ ಹಬ್ಬಕ್ಕೆ ಸೀರಿ ಮತ್ತು ಬಾಗೀನ ಕೊಡುವ ಮೂಲಕ ಮತದಾರರನ್ನು ಒಲಿಸಿಕೊಳ್ಳವ ಯತ್ನಕ್ಕೆ ಕೈಹಾಕಿದ್ದಾರೆ.

ಬಿಬಿಎಂಪಿ ಚುನಾವಣೆ: ಸುಪ್ರೀಂಕೋರ್ಟ್‌ನಲ್ಲಿ ಕ್ಲೈಮ್ಯಾಕ್ಸ್ ಹಂತಬಿಬಿಎಂಪಿ ಚುನಾವಣೆ: ಸುಪ್ರೀಂಕೋರ್ಟ್‌ನಲ್ಲಿ ಕ್ಲೈಮ್ಯಾಕ್ಸ್ ಹಂತ

ಬಿಬಿಎಂಪಿ ಚುನಾವಣೆಯ ರಾಜಕೀಯ

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರ್‍‌. ಅಶೋಕ್ ಹೇಳಿದ ಅಭ್ಯರ್ಥಿಗೆ ಬಿಜೆಪಿಯ ಟಿಕೆಟ್ ಪಕ್ಕ ಆಗಿ ಬಿಡುತ್ತೆ. ಇದರಿಂದಾಗಿ ಆರ್ ಅಶೋಕ್ ತಮ್ಮ ಕ್ಷೇತ್ರವನ್ನು ಹಿಡಿತದಲ್ಲಿರಿಸಿಕೊಳ್ಳಲು ತಮ್ಮ ಹಿಂಬಾಲಕರಿಗೆ ಟಿಕೆಟ್ ಕೊಡಿಸುವುದು ಪಕ್ಕಾ ಆಗಿದೆ. ಪದ್ಮನಾಭನಗರ ವಾರ್ಡ್‌ನ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶೋಭಾ ಆಂಜಿನಪ್ಪ, ಮುಖಂಡರಾದ ಆಂಜಿನಪ್ಪ ನೇತೃತ್ವದಲ್ಲಿ ಖುದ್ದು ಆರ್ ಅಶೋಕ್ ರವರೇ ನೂರಾರು ಮಹಿಳೆಯರಿಗೆ ಸೀರೆ ಮತ್ತು ಬಾಗೀನವನ್ನು ವಿತರಿಸಿದರು.

BBMP Elections: Saree, Bagina gift to women on the pretext of festival in Padmanabhanagar

ಇದೇ ವೇಳೆಯಲ್ಲಿ ಆರ್ ಅಶೋಕ್ ಮಹಿಳಾ ಪೌರ ಕಾರ್ಮಿಕರಿಗೆ ಬಾಗೀನವನ್ನು ವಿತರಿಸಿದರು. ಬಾಗೀನದ ಜೊತೆಗೆ ಹೆಣ್ಣು ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಚುನಾವಣೆ ಕಾವು ಏರುವ ಮುನ್ನವೇ ಊಟದ ರಾಜಕೀಯವು ಶುರುವಾಗಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.

BBMP Elections: Saree, Bagina gift to women on the pretext of festival in Padmanabhanagar

ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶೋಭಾ ಆಂಜಿನಪ್ಪ, ಮುಖಂಡರಾದ ಆಂಜಿನಪ್ಪ, ನಾಗರಾಜ್, ಹೆಚ್ ಸುರೇಶ್, ಮಂಡಲ ಅಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ವಿಜಯ್ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

English summary
As the BBMP elections approach, the politics of Sarees and lunches are in full swing. In Padmanabhanagar ward of Padmanabhanagar Assembly Constituency represented by Revenue Minister R Ashok, bagina, Sarees were distributed and food was served on the pretext of Gauri Ganesha festival, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X