ಬಿಬಿಎಂಪಿ ಚುನಾವಣೆ: ಬಿಜೆಪಿ ಸಭೆಯಲ್ಲಿ ಆಮ್ ಆದ್ಮಿ, KRS ಪಕ್ಷದ ಬಗ್ಗೆ ಬಿಸಿ ಬಿಸಿ ಚರ್ಚೆ!

ಬೆಂಗಳೂರು, ಆ.1: ಬಿಬಿಎಂಪಿ ಚುನಾವಣೆಯ ಸಲುವಾಗಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು, ನಗರದ ಶಾಸಕರು, ಸಂಸದರು, ಪದಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಬಿಬಿಎಂಪಿ ಚುನಾವಣೆಗೆ ಸರ್ವ ಸನ್ನದ್ಧ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಚುನಾವಣೆಯ ಮೀಸಲಾತಿಯನ್ನು ಪಟ್ಟಿಯನ್ನು ನೀಡುವಂತೆ ಸುಪ್ರೀಂ ನ್ಯಾಯಾಲಯ ಆದೇಶವನ್ನು ನೀಡಿದೆ. ಇದರಿಂದಾಗಿ ಬಿಜೆಪಿ ನೇತೃತ್ವದ ಸರಕಾರ ಹೇಗಾದರು ಮಾಡಿ ಚನಾವಣೆಯನ್ನು ಮುಂದೂಡಬೇಕು ಎಂಬ ಆಸೆಗೆ ಎಳ್ಳು ನೀರನ್ನು ಬಿಟ್ಟಂತೆ ಕಾಣ್ತಿದೆ. ಚುನಾವಣೆಗೆ ಮೀಸಲಾತಿಯನ್ನು ಪ್ರಕಟಿಸಿ ನಾವು ಚುನಾವಣೆ ಎದುರಿಸಲು ಸನ್ನದ್ದವಾಗಿದ್ದೇವೆ ಎಂಬ ಸಂದೇಶ ಕಳುಹಿಸಲು ಮುಂದಾಗಿದೆ.

ಇದಕ್ಕಾಗಿಯೇ ಬಿಜೆಪಿ ನಮ್ಮೆಲ್ಲಾ ಶಾಸಕರು, ಪದಾಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈಗಾಗಲೇ ಕೋರ್ಟ್ ಕೂಡ ಸೂಚನೆ ನೀಡಿದೆ. ಚುನಾವಣೆ ತಯಾರಿ ಪ್ರಾರಂಭವಾಗಿದೆ. ಓಟರ್ ಲಿಸ್ಟ್ ಗೆ ಸೇರಿಸೋದು, ಬೂತ್ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ ಎಂದು ಆರ್ ಅಶೋಕ್ ತಿಳಿಸಿದ್ದಾರೆ.

ಬಿಜೆಪಿ ಪರವಾಗಿ ವಾತಾವರಣ ಇದೆ. ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ, ಅಲ್ಲಿ ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಉಸ್ತುವಾರಿ ನೀಡಲಾಗುವುದು.

 ಆಮ್ ಆದ್ಮಿ ಅಬ್ಬರಕ್ಕೆ ಬೆದರಿದ್ಯಾ ಬಿಜೆಪಿ

ಆಮ್ ಆದ್ಮಿ ಅಬ್ಬರಕ್ಕೆ ಬೆದರಿದ್ಯಾ ಬಿಜೆಪಿ

ಬೆಂಗಳೂರನ್ನು ಕೇಂದ್ರೀಕರಿಸಿ ಆಮ್ ಆದ್ಮಿ, ಕೆಆರ್‍ಎಸ್ ನಂತಹ ಪಕ್ಷಗಳು ಅಬ್ಬರವನ್ನು ಮಾಡ್ತಿದೆ. ಮನೆಮನೆಗೆ ತೆರಳಿ ದೆಹಲಿ ಆಮ್ ಆದ್ಮಿ ಸರ್ಕಾರದಂತೆ ಉಚಿತ ನೀರು, ವಿದ್ಯುತ್ , ಉತ್ತಮ ಶಿಕ್ಷಣದ ವಾಗ್ದಾನವನ್ನು ಮಾಡುತ್ತಿದೆ. ಇದರಿಂದಾಗಿ ಬಿಜೆಪಿ ಸಣ್ಣಗೆ ಬೆವರಿದಂತೆ ಕಾಣುತ್ತಿದೆ. ಲೆಕ್ಕಕ್ಕಿಲ್ಲ ಲೆಕ್ಕಕ್ಕಿಲ್ಲ ಎನ್ನುತ್ತಲೇ ತನ್ನ ಭಯವನ್ನು ಸಭೆಯಲ್ಲಿ ಹೊರಹಾಕಿದೆ. ಇದರಿಂದಾಗಿಯೇ ಸಚಿವ ಆರ್ ಅಶೋಕ್ "ಆಮ್ ಆದ್ಮಿ, KRS,FDI,KFD, ಈ ರೀತಿ ಪಕ್ಷಗಳ ಬಗ್ಗೆ ಕೂಡ ಚರ್ಚೆ ಆಗಿದೆ. ಬಿಜೆಪಿ ಪಕ್ಷ ಗೆಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲ. ಮೀಸಲಾತಿ ನಿಗದಿ ಪಡಿಸುವದನ್ನು ಸಿಎಂ ಹಾಗೂ ಅಧಿಕಾರಿಗಳು ಮಾಡುತ್ತಾರೆ. ಅದು ಸರ್ಕಾರದ ಕೆಲಸ, ಪಕ್ಷದ್ದಲ್ಲ. ಯಾವುದೇ ಚುನಾವಣೆ ಬಂದರೂ ಅದು ಯುದ್ದವೇ. ಚುನಾವಣೆ ಘೋಷಣೆ ಆದ ಬಳಿಕ ಯುದ್ದ ಆರಂಭ. ನಮ್ಮದೇ ಸರ್ಕಾರವಿದೆ, ನಮ್ಮ ಕಾರ್ಯ ಯೋಜನೆ ರೂಪಿಸುತ್ತೇವೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆಮ್ ಆದ್ಮಿ ಉತ್ತರ ಭಾರತದಲ್ಲಿ ಪ್ರಭಾವ ಬೀರಬಹುದು. ಇಲ್ಲಿ ಅದಕ್ಕೆ ಅಸ್ತಿತ್ವ ಇಲ್ಲ. ಒಂದು ವಾರದಲ್ಲಿ ಮೀಸಲಾತಿ ನಿಗದಿಪಡಿಸುವಂತೆ ಕೋರ್ಟ್ ಸೂಚಿಸಿದೆ" ಎಂದು ತಿಳಿಸಿದೆ.

 ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರದ್ದು

ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರದ್ದು

ಬಿಜೆಪಿಯು ಆರೋಪಿಸುವುದು ಸದಾ ಮುಸ್ಲಿಂ ಸಂಘಟನೆಗಳನ್ನು ಅದರಂತೆ ರಾಜ್ಯದಲ್ಲಿ ಕೊಲೆಗಳ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್ಐ ಮೇಲೆ ಕೈವಾಡದ ಆರೋಪವನ್ನು ಮಾಡುತ್ತಿದೆ. ಆರ್ ಅಶೋಕ್ ಈ ಕುರಿತು "SDPI,PFI ಇಂತ‌ಹ‌ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ಕುರಿತು ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. ಸಿಎಂ ಜೊತೆಯೂ ಚರ್ಚಿಸುತ್ತೇನೆ. ಬ್ಯಾನ್ ಮಾಡೋದು ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು" ಎಂದು ಹೇಳಿದ್ದಾರೆ.

 ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್ ಸೂಚಿಸಲಿದೆ

ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್ ಸೂಚಿಸಲಿದೆ

''ಕಾಂಗ್ರೆಸ್‌ನಲ್ಲಿ ಇರೋ ತರ ಸಿಎಂ ಗಾದಿಗೆ ಅಥವಾ ಇತರೆ ಹುದ್ದೆಗೆ ನಮ್ಮಲ್ಲಿ ಜಗಳ ಇಲ್ಲ. ನಾವು ಪಕ್ಷದ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ವ್ಯಕ್ತಿ ‌ಕೇಂದ್ರಿತವಾಗಿ ಅಲ್ಲ. ಎಲ್ಲ ಮುಖಂಡರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮದು ವ್ಯಕ್ತಿ ಆಧಾರಿತ ಪಕ್ಷವಲ್ಲ. ಸುಪ್ರೀಂ ಕೋರ್ಟ್ ಏಳು ದಿನ ಗಡುವು ನೀಡಿದೆ. ಯಾವಾಗ ಚುನಾವಣೆ ಆಗಬೇಕು ಅಂತ ಕೋರ್ಟ್ ಸೂಚಿಸಲಿದೆ'' ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

 ಚುನಾವಣೆಯಲ್ಲಿ ಎದುರಿಸಲು ಸೂಕ್ತಸಮಯವಲ್ಲ ಎಂಬ ಚರ್ಚೆ

ಚುನಾವಣೆಯಲ್ಲಿ ಎದುರಿಸಲು ಸೂಕ್ತಸಮಯವಲ್ಲ ಎಂಬ ಚರ್ಚೆ

ಬಿಬಿಎಂಪಿ ಚುನಾವಣೆಯ ಸಂಬಂಧ ನಡೆದ ಸಭೆಯಲ್ಲಿ ಪದಾಧಿಕಾರಿಗಳು ಚುನಾವಣೆಯನ್ನು ಎದುರಿಸಲು ಇದು ಸೂಕ್ತ ಸಮಯವಲ್ಲ. ನಮ್ಮವರೇ ನಮ್ಮ ವಿರುದ್ದ ತಿರುಗಿ ಬಿದ್ದಿದ್ದಾರೆ. ಆಡಳಿತ ವಿರೋಧಿ ಅಲೆಯ ಪರಿಣಾಮ ಎದುರಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದರೊಂದಿಗೆ ಆಮ್ ಆದ್ಮಿ, ಕೆಆರ್‍ಎಸ್ ನಂತಹ ಪಕ್ಷಗಳ ಪರವಾಗಿಯೂ ಜನರ ಮೂಡ್ ಬದಲಾಗುತ್ತಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಬಿಜೆಪಿ ನಾಯಕರು ಮೊದಲು ನ್ಯಾಯಾಲಯದ ಆದೇಶದಂತೆ ಮೀಸಲಾತಿಯನ್ನು ಪ್ರಕಟಿಸೋಣ ಆಮೇಲೆ ಏನು ಮಾಡಬೇಕು ಎಂದು ಚಿಂತಿಸೋಣ ಎಂದಿದ್ದಾರೆ ಎನ್ನಲಾಗಿತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+