ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ: ಪ್ರಮುಖ 10 ಬೆಳವಣಿಗೆಗಳು

|
Google Oneindia Kannada News

ಬೆಂಗಳೂರು, ಆಗಸ್ಟ್, 25: ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕಮಲ ಅರಳಿದೆ. ಆಡಳಿತ ಪಕ್ಷದ ಪ್ರಭಾವದ ನೆರಳಿನಲ್ಲೂ ಬಿಜೆಪಿ ಬಿಬಿಎಂಪಿ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಮತ್ತೆ ಆಡಳಿತ ಚುಕ್ಕಾಣಿ ಹಿಡಿಯುವುದು ನಿಶ್ಚಿತ. 100 ವಾರ್ಡ್ ಗಳಲ್ಲಿ ಬಿಜೆಪಿ ಗೆದ್ದಿದ್ದು ಮುಂದಿನ ರಾಜಕೀಯ ಬೆಳವಣಿಗೆಗಳು ಸಸೂತ್ರವಾಗಿ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದ 10 ಬೆಳವಣಿಗೆಗಳ ಮೇಲೊಂದು ನೋಟ....[ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ 10 ಕಾರಣಗಳು]

bbmp

1. ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳನ್ನು ಗಳಿಸಿಕೊಂಡಿದೆ.
2. ಈ ತಿಂಗಳಿನಲ್ಲಿ ಬಿಜೆಪಿಗೆ ಇದು ಮೂರನೇ ಅತಿದೊಡ್ಡ ಜಯ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು.[ಬಿಬಿಎಂಪಿ ಫಲಿತಾಂಶದ ಸಂಪೂರ್ಣ ಮಾಹಿತಿ]
3. ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಗೆಲುವಿನ ನಂತರ ಬಿಬಿಎಂಪಿಯಲ್ಲೂ ಜಯ ಸಿಕ್ಕಿದ್ದು ಬಿಜೆಪಿಗೆ ಹ್ಯಾಟ್ರಿಕ್ ಖುಷಿ. ಇದು ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಸಂದ ಜಯ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
4. 2010 ರ ಚುನಾವಣೆಯಲ್ಲಿ ಬಿಜೆಪಿ 111 ಸ್ಥಾನ ಗಳಿಸಿದ್ದರೆ ಕಾಂಗ್ರೆಸ್ 66 ಸ್ಥಾನ ಗಳಿಸಿತ್ತು.
5. 2013ರ ವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಬಿವಿಎಂಪಿಯಲ್ಲೂ ಬಿಜೆಪಿಯಿತ್ತು. ಆದರೆ ಇದೀಗ ಪರಿಸ್ಥಿತಿ ಉಲ್ಟಾ ಆಗಿದೆ.
6. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಶೇ.50 ಸೀಟು ಮೀಸಲಿಡಲಾಗಿತ್ತು
7. ಶೇ. 50 ಕ್ಕಿಂತ ಕಡಿಮೆ ಮತದಾನವಾದದ್ದು ಒಂದು ಬಗೆಯ ದಾಖಲೆಯೇ. ಶನಿವಾರ ಚುನಾವಣೆ ಇದ್ದ ಕಾರಣ ಇಂಥ ಪರಿಸ್ಥಿತಿ ಉಂಟಾಯಿತು ಎಂದು ವಿಶ್ಲೇಷಣೆ ಮಾಡಲಾಗಿದೆ.
8. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು ವಿಶೇಷ.
9. ಚುನಾವಣೆಯನ್ನು ಮುಂದಕ್ಕೆ ಹಾಕಬೇಕು ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳಿಕೊಂಡು ಬಂದಿತ್ತು. ಅದರಂತೆ ಬಿಬಿಎಂಪಿ ವಿಭಜನೆ ಚೆಂಡು ಸದ್ಯ ರಾಷ್ಟ್ರಪತಿ ಅವರ ಬಳಿ ಹೋಗಿ ನಿಂತಿದೆ.
10. ಅಂತಿಮವಾಗಿ ನ್ಯಾಯಾಲಯ ನಿರ್ದಿಷ್ಟ ದಿನಾಂಕದೊಳಗೆ ಚುನಾವಣೆ ನಡೆಸಬೇಕು ಎಂದು ತೀರ್ಮಾನ ನೀಡಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಚುನಾವಣಾ ಫಲಿತಾಂಶ ಇದೀಗ ಹೊರಬಿದ್ದಿದ್ದು ಆಡಳಿತಾರೂಢ ಕಾಂಗ್ರೆಸ್ ಗೆ ಹಿನ್ನಡೆ ಆಗಿರುವುದನ್ನು ಒಪ್ಪಿಕೊಳ್ಳಲೇಬೇಕು.

English summary
Bengaluru: Ruling Congress in Karnataka losing the prestigious BBMP elections. Bengaluru has picked the BJP again to fix its chronic civic problems, handing the party a majority in the Bruhat Bengaluru Mahanagara Palike. Here is the top 10 developments of the BBMP Elections 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X