ಬೆಂಗಳೂರನ್ನು ಕನ್ನಡ ರಾಜಧಾನಿ ಮಾಡುವ ವಾಟಾಳ್ ಪ್ರಣಾಳಿಕೆ
ಬೆಂಗಳೂರು, ಆಗಸ್ಟ್ 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗಾಂಧಿನಗರ, ಹನುಮಂತನಗರ, ನಂದಿನಿ ಬಡಾವಣೆ ವಾರ್ಡ್‌ಗಳಿಂದ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕನ್ನಡದ ಅಭಿವೃದ್ಧಿಗೆ ಕೆಲಸ ಮಾಡುವ 30 ಪಕ್ಷೇತರ ಅಭ್ಯರ್ಥಿಗಳಿಗೆ ಪಕ್ಷ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಪ್ರಣಾಳಿಕೆಗಳು: ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಲೋಕಸತ್ತಾ

ಗಾಂಧಿನಗರ ವಾರ್ಡ್‌ನಿಂದ ಕನ್ನಡ ಕೃಷ್ಣ, ಹನುಮಂತನಗರ ವಾರ್ಡ್‌ನಿಂದ ಎಂ. ಗಾಳಪ್ಪ, ನಂದಿನಿ ಬಡಾವಣೆ ವಾರ್ಡ್‌ನಿಂದ ಬಸವರಾಜ್ ಅವರು ಪಕ್ಷದ ಅಭ್ಯರ್ಥಿಯಗಳಾಗಿ ಕಣಕ್ಕಿಳಿದಿದ್ದು, ಮಂಗಳವಾರದಿಂದ ವಾಟಾಳ್ ನಾಗರಾಜ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು
* ಬಡ ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ ಚಪ್ಪಲಿ ವಿತರಣೆ
* ಬೆಂಗಳೂರನ್ನು ಕನ್ನಡ ರಾಜಧಾನಿಯನ್ನಾಗಿ ಮಾಡುವುದು
* ಸುಸಜ್ಜಿತ ಸ್ಮಶಾನಗಳ ನಿರ್ಮಾಣ
* 1 ಸಾವಿರ ಜಾಗಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ
* ನಗರದ ವಿವಿಧ ಭಾಗಗಳಲ್ಲಿ 5 ಸಾವಿರ ಶೌಚಾಲಯ ನಿರ್ಮಾಣ
* ಸಿನಿಮಾ ಟಿಕೆಟ್ ದರ ಕಡಿತಗೊಳಿಸುವುದು
* ಬಡವರಿಗಾಗಿ ಉಚಿತ ಕಲ್ಯಾಣ ಮಂಟಪ ಸ್ಥಾಪನೆ












Click it and Unblock the Notifications