ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ: ವಾರ್ಡ್ ಸಮಿತಿ ಬಲಪಡಿಸಿ, ಎಲ್ಲ ಪಕ್ಷಗಳಿಗೆ ಮನವಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ನಾಗರಿಕರ ವಾರ್ಡ್ ಸಮಿತಿಗಳನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಶಿಫಾರಸು ಮಾಡಿರುವ ಅಂಶಗಳನ್ನು ಎಲ್ಲ ರಾಜಕೀಯ ಪಕ್ಷಗಳು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು 'ಬೆಂಗಳೂರು ವಾರ್ಡ್ ಸಮಿತಿ ಬಳಗ' ಆಗ್ರಹಿಸಿದೆ.

ಭಾನುವಾರ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ವಾರ್ಡ್ ಸಮಿತಿ ಬಳಗದ ಎರಡನೇ ಸಮಾವೇಶದಲ್ಲಿ 200ಕ್ಕೂ ಅಧಿಕ ನಾಗರಿಕರು ಹಾಗೂ 67ನೋಂದಾಯಿತ ನಾಗರಿಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಪಾಲ್ಗೊಂಡಿದ್ದವು. ಅವರೆಲ್ಲರು ತಮ್ಮ ವಾರ್ಡ್‌ನ ಸಮಸ್ಯೆ, ಬಲಪಡಿಸುವ ಅಂಶಗಳ ಕುರಿತು ಚರ್ಚಿಸಿ ತಂದ ಅಂಶಗಳನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಬೇಕು ಎಂದು ಕೋರಿದರು.

Breaking: ಬೆಂಗಳೂರಿನಾದ್ಯಂತ ಭಾನುವಾರ ಸಂಜೆ ಗುಡುಗು ಸಹಿತ ಮಳೆBreaking: ಬೆಂಗಳೂರಿನಾದ್ಯಂತ ಭಾನುವಾರ ಸಂಜೆ ಗುಡುಗು ಸಹಿತ ಮಳೆ

ಸಮಾವೇಶದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗವಹಿಸಿದ್ದರು ಅವರೊಂದಿಗೆ ಎಲ್ಲ ನಾಗರಿಕರು, ಸಂಘಗಳ ಸದಸದ್ಯರು ವಾರ್ಡ್ ಸಮಿತಿಯ ಸಭೆಗಳ ಸ್ಥಿತಿಗತಿ ವರದಿ, ನಿಯಮಿತವಾಗಿ ಭಾಗವಹಿಸುವ ನಾಗರಿಕರ ಅನುಭವ, ವಾರ್ಡ್ ಸಮಿತಿಯ ಸುಧಾರಣೆ, 'ನನ್ನ ನಗರ ನನ್ನ ಬಜೆಟ್', ಪ್ರಮುಖ ಸಮಸ್ಯೆಗಳು, ಬಿಬಿಎಂಪಿ ಚುನಾವಣೆಯಲ್ಲಿ ಬಳಗದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಿದರು. ಬಳಿಕ ತಮ್ಮ ಬೇಡಿಕೆಗಳನ್ನು ಮುಖ್ಯ ಆಯುಕ್ತರ ಗಮನಕ್ಕೆ ತಂದರು.

ಹತಾಶರಾದ ಬಿಬಿಎಂಪಿ ಅಧಿಕಾರಿಗಳು!: ತುಷಾರ್

ಹತಾಶರಾದ ಬಿಬಿಎಂಪಿ ಅಧಿಕಾರಿಗಳು!: ತುಷಾರ್

ಈ ವೇಳೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ವಾರ್ಡ್‌ನ ಎಲ್ಲ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳು ಪಾಲಿಕೆಯ ಗಮನಕ್ಕೆ ಇದೆ. ನಿರಾಶರಾಗಿರುವ ಬಿಬಿಎಂಪಿ ಅಧಿಕಾರಿಗಳು ಸಕಾರಾತ್ಮಕ ಚಿಂತನೆಗಳಿಗೆ ಅಡ್ಡಿಯಾಗದಂತೆ ಅವರೆಲ್ಲರು ಉತ್ತಮ ಮನೋಭಾವನೆಯಿಂದ ಹೊಂದಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

Breaking: ಬಿಬಿಎಂಪಿ: ಅ.31ರೊಳಗೆ ವಿವಿಧ ರಸ್ತೆ ಯೋಜನೆ ಪೂರ್ಣಗೊಳಿಸಿBreaking: ಬಿಬಿಎಂಪಿ: ಅ.31ರೊಳಗೆ ವಿವಿಧ ರಸ್ತೆ ಯೋಜನೆ ಪೂರ್ಣಗೊಳಿಸಿ

ವಲಯ ಆಯುಕ್ತರು ಮಧ್ಯಾಹ್ನ ಕಚೇರಿಯಲ್ಲಿರಲಿ

ವಲಯ ಆಯುಕ್ತರು ಮಧ್ಯಾಹ್ನ ಕಚೇರಿಯಲ್ಲಿರಲಿ

ಉತ್ಪತ್ತಿಯಾಗುವ ತ್ಯಾಜ್ಯಗಳ ವಿಂಗಡಣೆ, ಪೌರಕಾರ್ಮಿಕರ ಕಲ್ಯಾಣ, ಬೀದಿ ದೀಪಗಳು ಹಾಗೂ ಉದ್ಯಾನವನಗಳ ಮೇಲೆ ನಿಗಾ ಇಡಬೇಕು. ಹೀಗೆ ವಾರ್ಡ್‌ಮಟ್ಟದಲ್ಲೂ ನಿರ್ವಹಣೆ ಮೇಲ್ವಿಚಾರಣೆ ಮೂಲಕ ಕಾರ್ಯ ನಡೆಸಿದರೆ ಮಾತ್ರ ಸಮಸ್ಯೆ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ.
ಇನ್ನೂ ಎಲ್ಲ ವಲಯ ಆಯುಕ್ತರು ಮಧ್ಯಾಹ್ನದ ಸಂದರ್ಭದಲ್ಲಿ ಕಚೇರಿಯಲ್ಲಿರಬೇಕು. ನಾಗರಿಕರು ಸಮಸ್ಯೆ ಹೇಳಿಕೊಂಡು ಬಂದಲ್ಲಿ ಅವರ ಭೇಟಿಗೆ ಅವಕಾಶ ಮಾಡಿಕೊಡಬೇಕು. ಸಮಸ್ಯೆಗಳ ಪರಿಹಾರ ಬಗ್ಗೆ ವಿಭಾಗೀಯ ಮಟ್ಟದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಕಾಯೋನ್ಮುಖರಾಗಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದರು.

ವಾರ್ಡ್ ಸಮಸ್ಯೆಗಳ ಸುಧಾರಣೆ ಶ್ರಮಿಸಬೇಕು

ವಾರ್ಡ್ ಸಮಸ್ಯೆಗಳ ಸುಧಾರಣೆ ಶ್ರಮಿಸಬೇಕು

ಬಿ.ಕ್ಲಿಪ್ ಸಂಸ್ಥೆಯ ಸದಸ್ಯ ರಾಘವೇಂದ್ರ ಎಚ್.ಎಸ್ ಅವರು ಮಾತನಾಡಿ, ನಾಗರಿಕರ ವಾರ್ಡ್ ಸಮಿತಿಗಳನ್ನು ಬಲಪಡಿಸುವ ಮತ್ತು ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ ಇಂದು ಹಲವಾರು ನಾಗರಿಕ ಸಂಘಟನೆಗಳು ಒಗ್ಗೂಡಿವೆ. ಇದೇ ನಿಟ್ಟಿನಲ್ಲಿ ಎಲ್ಲರು ಮುಂದುವರೆದು ವಾರ್ಡ್ ಸಮಸ್ಯೆಗಳನ್ನು ಸುಧಾರಿಸಲು ಶ್ರಮಿಸಬೇಕಿದೆ. ಪ್ರತಿಯೊಬ್ಬ ನಾಗರಿಕರು ವಾರ್ಡ್ ಸಮಿತಿಗಳಿಗೆ ಉಪಸ್ಥಿತರಿರುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸ ಮಾಡಬೇಕೆಂದು ಅವರು ಕೋರಿದರು.

ಸಭೆಯಲ್ಲಿ ನಾಗರಿಕರು ಹಾಗೂ ಸಂಘಟನೆಗಳು ಒಟ್ಟು 8 ನೀರ್ಣಯಗಳನ್ನು ಕೈಗೊಂಡರು. ಅವುಗಳನ್ನು ಮುಂಬರಲಿರುವ ಬಿಬಿಎಂಪಿ ಚುನಾವಣೆ ವೇಳೆ ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜನಾಗ್ರಹ, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ, ಸೆನ್ಸಿಂಗ್ ಲೊಕಲ್ , ಚೇಂಜ್ ಮೇಕರ್ಸ್, ಕನಕಪುರ , ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್, ವೈಟ್‌ಫಿಲ್ಡ್‌ರೈಸಿಂಗ್, ಸಿಟಿಜನ್ಸ್ ಫಾರ್ ಬೆಂಗಳೂರು ಸೇರಿದಂತೆ ಹಲವಾರು ನಾಗರಿಕ ಸಂಘ ಸಂಸ್ಥೆಗಳು , ಸರ್ಕಾರೇತರ ಸಂಸ್ಥೆಗಳು, ನಿವಾಸಿಗಳು ಪಾಲ್ಗೊಂಡಿದ್ದರು.

8 ಶಿಫಾರಸುಗಳು ಈ ಕೆಳಗಿನಂತಿವೆ.

8 ಶಿಫಾರಸುಗಳು ಈ ಕೆಳಗಿನಂತಿವೆ.

* ಚುನಾವಣೆ ನಡೆದ 3 ತಿಂಗಳೊಳಗೆ ವಾರ್ಡ್ ಸಮಿತಿಗಳನ್ನು ರಚಿಸಬೇಕು.
* ಸಮಿತಿ ರಚನೆ ಪ್ರಕ್ರಿಯೆಯು ನ್ಯಾಯಯು ಮತ್ತು ಪಾರದಶರ್ಕವಾಗಿರಬೇಕು. ಸಕ್ರಿಯ ನಾಗರಿಕರನ್ನು ಪ್ರೋತ್ಸಾಹಿಸಬೇಕು. ಕಾರ್ಪೋರೇಟರ್ ನಾಮನಿರ್ದೇಶನ ಬದಲಿಗೆ ಸಾಟೇಷನ್ ವಿಧಾನವನ್ನು ಬಳಸಬೇಕು. ವಾರ್ಡ್ ಸಮಿತಿಯ ನಿಯಮಗಳ ಪ್ರಕಾರ ವಾರ್ಡ್ ಸಮಿತಿ ಕಾರ್ಯ ನಿರ್ವಹಣೆ ಅನುಷ್ಠಾನಕ್ಕೆ ತರಬೇಕು.
* ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ವಹಣೆ, ಪಾದಾಚಾರಿ ಮಾರ್ಗಗಳು, ಬೀದಿ ದೀಪಗಳು, ಕೆರೆಗಳ ಮೇಲೆ ನಿಗಾ ಇಡಲು ಸಮಿತಿಯ ಸಲಹೆಗಳನ್ನು ಬಿಬಿಎಂಪಿ ಪಾಲಿಸಬೇಕು.
* ನಗರದ ಬಜೆಟ್‌ ಅನ್ನು ನಾಗರಿಕರ ಭಾಗವಹಿಸುವಿಕೆಯಿಂದ ಮಾಡಬೇಕು. ವಾರ್ಡ್ ಮಟ್ಟದ ಬಜೆಟ್ ಹಂಚಿಕೆಗಳನ್ನು ಹಾಗೂ ವೆಚ್ಚದ ಬಗ್ಗೆ ವಿವರಗಳನ್ನು ರಚಿಸಬೇಕು.
* ವಾರ್ಡ್ ಸಮಿತಿಗಳ ನೀರ್ಣಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
* ಪ್ರಮಾಣಿತ ಕಾರ್ಯಸೂಚಿ ಮತ್ತು ತೆಗೆದುಕೊಂಡ ಕ್ರಮಗಳೊಂದಿಗೆ ಸಂಬಂಧಿತ ಎಲ್ಲ ಇಲಾಖೆಗಳೊಂದಿಗೆ ಪ್ರತಿ ತಿಂಗಳ ತಪ್ಪದೇ ಸಭೆ ನಡೆಸಬೇಕು.
* ಪ್ರತಿ ತಿಂಗಳ ಮೊದಲ ಶನಿವಾರದಂದು ಪ್ರತಿ ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ನಡೆಸಬೇಕು.
* ಚುನಾಯಿತ ಕಾರ್ಪೋರೇಟರ್ ಮಾತ್ರವೇ ವಾರ್ಡ್ ಸಮಿತಿಯ ಅಧ್ಯಕ್ಷತೆ ವಹಿಸಬೇಕು.

English summary
BBMP Election 2022. Strengthen Ward Committee appeal to all Political parties by Senior citizens and several association members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X