ಬಿಬಿಎಂಪಿ ಚುನಾವಣೆ 2015, ಲೋಕಸತ್ತಾ ಪಕ್ಷದ ಪ್ರಣಾಳಿಕೆ

ಬೆಂಗಳೂರು, ಆಗಸ್ಟ್ 14 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಲೋಕಾಸತ್ತಾ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 198 ವಾರ್ಡ್‌ಗಳ ಪೈಕಿ 17 ವಾರ್ಡ್‌ಗಳಲ್ಲಿ ಪಕ್ಷ ಸ್ಪರ್ಧಿಸುತ್ತಿದೆ.

ಪ್ರಣಾಳಿಕೆಗಳು: ಬಿಜೆಪಿ | ವಾಟಾಳ್ ಪಕ್ಷ | ಕಾಂಗ್ರೆಸ್ | ಜೆಡಿಎಸ್

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌.ಎಸ್.ಮುಕುಂದ ಅವರು ಗುರುವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. 'ಸ್ವಚ್ಛ, ಸುಂದರ, ಸದೃಢ, ಸಮೃದ್ಧ ಹಾಗೂ ಸ್ಮಾರ್ಟ್‌ ಆಗಿರುವ ಭರವಸೆಯ ಭವ್ಯ ಬೆಂಗಳೂರು ನಿರ್ಮಾಣ ಮಾಡಲಾಗುವುದು' ಎಂದು ಅವರು ಹೇಳಿದ್ದಾರೆ.

Lok Satta

ಚೌಡೇಶ್ವರಿ ನಗರ, ಜಕ್ಕೂರು, ಮನೋರಾಯನಪಾಳ್ಯ, ಮಲ್ಲೇಶ್ವರಂ, ಕಾಡು ಮಲ್ಲೇಶ್ವರ, ವಸಂತನಗರ, ಸಿದ್ದಾಪುರ, ಬಸವನಗುಡಿ, ಕತ್ರಿಗುಪ್ಪೆ, ಕರಿಸಂದ್ರ, ಪಟ್ಟಾಭಿರಾಮನಗರ, ಜಯನಗರ ಪೂರ್ವ, ಎಚ್‌ಎಸ್‌ಆರ್‌ ಲೇಔಟ್, ಬಿಟಿಎಂ ಲೇಔಟ್, ಕುಮಾರಸ್ವಾಮಿ ಲೇಔಟ್, ಯಲಚೇನಹಳ್ಳಿ, ಜರಗನಹಳ್ಳಿಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಪ್ರಣಾಳಿಕೆಯ ಪ್ರಮುಖ ಅಂಶಗಳು

* ನಗರದಲ್ಲಿ ಮಳೆ ನೀರು ಸಂಗ್ರ ವ್ಯವಸ್ಥೆ ಜಾರಿ
* ಶೂನ್ಯ ತ್ಯಾಜ್ಯ ಉತ್ಪತ್ತಿ ಸಂಸ್ಕೃತಿ ಹಾಗೂ ವ್ಯವಸ್ಥೆ ಜಾರಿ
* ಸರ್ಕಾರಿ ಭೂಮಿ ಒತ್ತುವರಿ ತೆರವು
* ಬಸ್‌ ದರ ಕೈಗೆಟಕುವಂತೆ ಮಾಡಲು 200 ಕೋಟಿಯ ಸಹಾಯಧನ
* ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ನೀತಿ ಹಾರಿ
* ಪ್ರತಿಯೊಂದು ಬಡಾವಣೆಗೂ ಮಾರುಕಟ್ಟೆ ಸೌಲಭ್ಯ
* ನಗರಕ್ಕೆ 'ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆ' ಕಲ್ಪಿಸಲಾಗುತ್ತದೆ
* ನಗರದ ಹೊರವಲಯಗಳಲ್ಲಿ ಸೂಕ್ತ ಭೂಗರ್ಭ ಒಳಚರಂಡಿ ಜಾಲ ನಿರ್ಮಾಣ
* ವಾರ್ಡ್ ಹಾಗೂ ನಗರ ಹಂತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ
* ಮೂಲದಲ್ಲಿಯೇ ಕಸ ವಿಂಗಡನೆ ಮಾಡಲಾಗುತ್ತದೆ
* ಪೊಲೀಸರ ಸಮನ್ವಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+