E-Khata: ಡಿಜಿಟಲ್ ಖಾತಾ ವಿತರಣೆ ಅಪ್ಡೇಟ್: ಆಸ್ತಿ ಮಾಲೀಕರಿಗೆ ಬಿಬಿಎಂಪಿ ಮಹತ್ವದ ಸೂಚನೆ

ಬೆಂಗಳೂರು, ಮಾರ್ಚ್ 20: ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ಇ-ಖಾತೆ ಪ್ರಕ್ರಿಯೆಯು ರಾಜ್ಯದ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆ ಆಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಹತ್ವದ ಉದ್ದೇಶದಿಂದ ಈ ಉಪಕ್ರಮ ಜಾರಿಗೆ ತಂದಿದೆ. ಸದ್ಯ ಅರ್ಜಿ ಸಲ್ಲಿಸಿದವರು ಪಾಲಿಕೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಸಂಬಂಧ ಕಂದಾಯ ವಿಭಾಗದ ಮುಖ್ಯ ಆಯುಕ್ತರು ಮಹತ್ವದ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಆಸ್ತಿಗಳಲ್ಲಿ ಸುಮಾರು 12ಲಕ್ಷ ದಾಖಲೆಗಳು ಡಿಜಿಟಲೀಕರಣಗೊಂಡಿವೆ. ನಂತರ ಡಿಜಿಟಲ್ ಖಾತಾಗಾಗಿ (ಇ-ಖಾತಾ) ಅರ್ಹರಿಂದ ಅರ್ಜಿ ಸ್ವೀಕರಿಸಿ ಅವುಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ವಿಳಂಬವಾಗುತ್ತಿದೆ ಎಂದು ನಾಗರಿಕರು ಬಿಬಿಎಂಪಿ ಮತ್ತು ಉಪನೋಂದಣಿ ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಹೀಗೆ ಮಾಡಬೇಡಿ ಎಂದು ಪ್ರಸ್ತುತ ಸನ್ನಿವೇಶವನ್ನು ಕಂದಾಯ ವಿಭಾಗದ ಮುಖ್ಯ ಆಯುಕ್ತರು ಮುನೀಶ್ ಮೌದ್ಗಿಲ್ ಅವರು ವಿವರಿಸಿದ್ದಾರೆ. ಅಂತಿಮ ಇ-ಖಾತೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

BBMP E-Khata Applications Apply Online and Avoid Office Visits for Quick Disposal

ತ್ವರಿತ ವಿತರಣೆಗೆ: ಅರ್ಜಿ ಹಾಕಿ ಕಾಯಬೇಕು

ಅಧಿಕಾರಿಗಳು ನಿತ್ಯ ನಾಗರಿಕರ ಇ-ಖಾತಾ ಅರ್ಜಿಗಳನ್ನು ನಿತ್ಯವು ವಿಲೇವಾರಿ ಮಾಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿನ ನಿತ್ಯದ ಗುರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸ್ವೀಕೃತಿಗಳ ವಿಲೇವಾಡಿ ಮಾಡಲಾಗುತ್ತಿದೆ. ಹೀಗಿದ್ದರೂ ಕೊಂಚ ವಿಳಂಬ, ವಿತರಣೆ ಬಾಕಿ ಇದೆ. ಇದನ್ನು ಶೀಘ್ರವೇ ಸರಿಪಡಿಸುತ್ತಿವೆ. ಇ ಖಾತೆಗಳನ್ನು ನಿಮಗೆ ತ್ವರಿತವಾಗಿ ತಲುಪಿಸುತ್ತೇವೆ. ನೀವು ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡಬೇಡಿ ಎಂದಿದ್ದಾರೆ.

Take a Poll

ಅರ್ಜಿ ಸಲ್ಲಿಸಿದ ಸಾರ್ವಜನಿಕರು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ https://BBMPeAasthi.karnataka.gov.in ನಲ್ಲಿ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿ ಕಾಯುವಂತೆ ಬಿಬಿಎಂಪಿ ಅವರು ತಿಳಿಸಿದ್ದಾರೆ.

ದೈನಂದಿನ ಅರ್ಜಿ ವಿಲೇವಾರಿ ಪರಿಶೀಲನೆ

ಪ್ರತಿದಿನ ಬೆಳಿಗ್ಗೆ 9 9.30 ಕ್ಕೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ 8 ವಲಯಗಳು ಮತ್ತು ಎಲ್ಲಾ 64 ಸಹಾಯ ಕಂದಾಯ ಅಧಿಕಾರಿಗಳು (ARO) ಗಳ ಕಾರ್ಯಗಳನ್ನು, ಅರ್ಜಿ ವಿಲೇವಾರಿ ಸೇರಿದಂತೆ ದೈನಂದಿನ ಪ್ರಗತಿಯನ್ನು ಮುಖ್ಯ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ಪರಿಶೀಲಿಸುತ್ತಾರೆ. ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾರೆ. ಇ-ಖಾತಾ ಅರ್ಜಿಗಳ ವಿಲೆವಾರಿಗೆ ಸಂಬಂಧಿಸಿದಂತೆ ಎಲ್ಲಾ 8 ವಲಯಗಳು ಮತ್ತು ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳ ಜೊತೆ ಪ್ರತಿನಿತ್ಯ ವರ್ಚ್ಯುವಲ್(VC) ಮೂಲಕ ಸಭೆ ನಡೆಸಿ ಮಾಹಿತಿ ಪಡೆಯಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇ-ಕಾತಾ ವಿತರಣೆ ಕುರಿತು ಗೊಂದಲ ಮಾಡಿಕೊಳ್ಳದೆ ತಾಳ್ಮೆಯಿಂದ ಕಾಯುವಂತೆ ಅವರು ಕೋರಿದ್ದಾರೆ.

BBMP E-Khata Applications Apply Online and Avoid Office Visits for Quick Disposal

ಹೀಗೆ ಪರಿಶೀಲನೆ ವೇಳೆ ಎಲ್ಲ ಸಹಾಯ ಕಂದಾಯ ಅಧಿಕಾರಿಗಳು (ARO) ನಾಗರಿಕ ಈ ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಕೊಂಚ ಕಾಯಬೇಕು ಎಂದು ತಿಳಿಸಿದ್ದಾರೆ. ಸರಾಸರಿ ಬಾಕಿ ಇರುವ ನಾಗರಿಕ ಅರ್ಜಿಗಳ ವಿವರ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಖಾತಾ ನೀಡಲು ಪಾಲಿಕೆ ನಿರ್ಧರಿಸಿದೆ.

ಯಾರೆಲ್ಲ ಅರ್ಜಿ ಸಲ್ಲಿಸಿದ್ಧಿರಿ. ಅವರು ಕೆಲವು ದಿನ ಕಾಯಬೇಕು. ಬಿಬಿಎಂಪಿ ಕಚೇರಿಗಳನ್ನು ಭೇಟಿ ಮಾಡಬಾರದು. ಮಾಡಿದರೆ ಮತ್ತಷ್ಟು ವಿಳಂಬವಾಗಬಹುದು. ಡಿಜಿಟಲ್ ಖಾತಾ ವಿತರಣೆಗೆ ಸಹಕರಿಸಬೇಕು. ತಾಳ್ಮೆಯಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ.

ಇ-ಖಾತೆಗೆ 4000 ರೂ.ಕೊಡಬೇಕಾ?

ಡಿಜಿಟಲ್ ಖಾತಾ ಪಡೆಯಲು ಅರ್ಹ ನಾಗರಿಕರು ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇಲ್ಲವೇ ಬಿಬಿಎಂಪಿ ಕಚೇರಿ, ಬೆಂಗಳೂರು ಒನ್‌ನಲ್ಲೂ ಅರ್ಜಿ ಸಲ್ಲಿಸಬಹುದು. ಅರ್ಜಿಗೆ 125 ರೂಪಾಯಿ ಮಾತ್ರ ನೀಡಬೇಕು. ಹೆಚ್ಚುವರಿಯಾಗಿ ಸರ್ವೀಸ್ ಶುಲ್ಕ 45 ರೂಪಾಯಿ ಇರುತ್ತದೆ. ಇದರ ಹೊರತು ಹೆಚ್ಚಿನ ಶುಲ್ಕ ಪಾವತಿಸುವಂತಿಲ್ಲ ಎಂದು ಬೆಲೆ ನಿಗದಿ ಮಾಡಲಾಗಿದೆ.

ಅದರೆ ಪಾಲಿಕೆ ಕಂದಾಯ ಅಧಿಕಾರಿಗಳೇ ಇ-ಖಾತೆಗೆ 4000 ರೂ. ನೀಡಿದರೆ ವಾರದಲ್ಲಿ ನಿಮ್ಮ ಮನೆಗೆ ಡಿಜಿಟಲ್ ಖಾತಾ ನೀಡಲಾಗುವುದು ಎಂದಿದ್ದಾರೆ. ಜೊತೆಗೆ ವಸತಿ ಸಮುಚ್ಚಯದಲ್ಲಿ ಇ-ಖಾತಾ ಮೇಳ ಆಯೋಜಿಸಲು ಸಹ ಹೆಚ್ಚಿನ ದುಡ್ಡು ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಮುನೀಶ್ ಮೌದ್ಗಿಲ್ ಅವರು ಹೇಳಿದರು.

ಬಿಬಿಎಂಪಿಯಿಂದ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 25 ಲಕ್ಷ ಕರಡು ಇ-ಖಾತಗಳು ಆನ್‌ ಲೈನ್‌ನಲ್ಲಿ ಲಭ್ಯವಿದೆ ಮತ್ತು ನಾಗರಿಕರು 2.87 ಲಕ್ಷ ಅಂತಿಮ ಇ-ಖಾತಗಳಿಗೆ ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ 2.71 ಲಕ್ಷ ಅಂತಿಮ ಇ-ಖಾತಗಳನ್ನು ಈಗಾಗಲೇ ನೀಡಲಾಗಿದೆ. ನಾಗರಿಕರು ಅರ್ಜಿ ಸಲ್ಲಿಸಿದ 2 ದಿನಗಳಲ್ಲಿ ಸರಾಸರಿ ಅಂತಿಮ ಇ-ಖಾತವನ್ನು ನೀಡಲಾಗುತ್ತದೆ. ಆದ್ದರಿಂದ ನಾಗರಿಕರು ತಕ್ಷಣ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.

ವಲಯವಾರು ಇ ಖಾತಾ ವಿತರಣೆಗೆ ಕ್ರಮ

ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರಿಂದ ಬರುವ ಇ-ಖಾತಾ ಅರ್ಜಿಗಳ ದೈನಂದಿನ ವಿಲೇವಾರಿಯು, ದಿನನಿತ್ಯದ ಸ್ವೀಕೃತಿಗಿಂತ ಹೆಚ್ಚಾಗಿ ಮಾಡಲಾಗುತ್ತಿದೆ. ಜೊತೆಗೆ ಈಗಾಗಲೇ ವಿತರಣೆ ಮಾಡಿರುವ ಅಂತಿಮ ಇ-ಖಾತಾಗಳ 08 ವಲಯವಾರು ಮಾಹಿತಿ ಸಹ ಬಿಬಿಎಂಪಿ ನೀಡಿದೆ.

ಎಲ್ಲಾ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳು ನಾಗರಿಕ ಇ-ಖಾತ ಅರ್ಜಿಗಳನ್ನು ವಿಲೇವಾರಿ ಮಾಡಲು ಸಮರ್ಥವಾಗಿವೆ. ಸರಾಸರಿ ಬಾಕಿ ಇರುವ ನಾಗರಿಕ ಅರ್ಜಿಗಳನ್ನು ಒಂದು ದಿನದಲ್ಲಿ ವಿಲೇವಾರಿ ಮಾಡಲಿದೆ. ಆದ ಕಾರಣ ಅರ್ಜಿ ಸಲ್ಲಿಸಿದ ನಂತರ ಕಾದರೆ ಶೀಘ್ರದಲ್ಲೇ ಇ-ಖಾತಾ ಪಡೆಯಬಹುದು ಎಂದರು.

ಅಂತಿಮ ಇ ಖಾತಾ ಹಂಚಿಕೆಯಲ್ಲಿ ಎಂಟು ವಲಯಗಳಲ್ಲಿ ರಾಜರಾಜೇಶ್ವರಿ ನಗರ ಮತ್ತು ಬೊಮ್ಮನಹಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ಮಾಡಲಾಗಿದೆ. ಯಾವೆಲ್ಲ ವಲಯಗಳಲ್ಲಿ ಎಷ್ಟೆಷ್ಟು ಅಂತಿಕ ಖಾತೆಗಳು ವಿತರಣೆ ಆಗಿವೆ ಎಂಬುದರ ಪಟ್ಟಿ ಇಲ್ಲಿದೆ.

ವಲಯ ವಾರು ಅಂತಿಮ ಇ-ಖಾತಾಗಳ ಪಟ್ಟಿ ವಿವರ

ಮಹದೇವಪುರ - 37793
ದಕ್ಷಿಣ - 37738
ಪಶ್ಚಿಮ - 27020
ಬೊಮ್ಮನಹಳ್ಳಿ - 46025
ದಾಸರಹಳ್ಳಿ - 16818
ಪೂರ್ವ - 25848
ಯಲಹಂಕ - 38494
ರಾಜರಾಜೇಶ್ವರಿ ನಗರ - 42191
ಒಟ್ಟು - 2,71,927

ಒಟ್ಟು 25 ಲಕ್ಷ ಕರಡು ಇಖಾತಾಗಳು ಲಭ್ಯವಿವೆ. ಆದ್ದರಿಂ ಆಸ್ತಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಪಡೆಯಲು ಮುಂದಾಗಬೇಕು. ಈಗಾಗಲೇ ಪಾಲಿಕೆ ಸಾಕಷ್ಟು ಕಡೆಗಳಲ್ಲಿ ಈ ಬಗ್ಗೆ ಅಭಿಯಾನ ನಡೆಸಿದ್ದು, ಅದರ ಕಾರಣದಿಂದ 2.71ಲಕ್ಷ ಇಖಾತೆ ವಿತರಣೆ ಮಾಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+