ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕಾರ್ಪೊರೇಟರ್ ಏಳುಮಲೈ ಆರೋಗ್ಯ ಸ್ಥಿತಿ ಗಂಭೀರ

|
Google Oneindia Kannada News

ಬೆಂಗಳೂರು, ನವೆಂಬರ್ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾರ್ಪೊರೇಟರ್ ಏಳುಮಲೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಗಳವಾರ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಪೊರೇಟರ್ ಏಳುಮಲೈ (40) ಆರೋಗ್ಯ ವಿಚಾರಿಸಿದರು. ಏಳುಮಲೈ ಅವರು ಕೋಮಾ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಗರಿಗೆದರಿದ ಚಟುವಟಿಕೆ:ಉಪ ಮೇಯರ್ ಆಯ್ಕೆಗೆ ಶೀಘ್ರ ದಿನಾಂಕಗರಿಗೆದರಿದ ಚಟುವಟಿಕೆ:ಉಪ ಮೇಯರ್ ಆಯ್ಕೆಗೆ ಶೀಘ್ರ ದಿನಾಂಕ

ಸಗಾಯಪುರಂ ವಾರ್ಡ್‌ (ನಂ.60)ರ ಪಕ್ಷೇತರ ಬಿಬಿಎಂಪಿ ಸದಸ್ಯ ಏಳುಮಲೈ ಅವರು ಮೂಗಿನ ಮೇಲೆ ಗುಳ್ಳೆ ಆಗಿದೆ ಎಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡುವಾಗ ಹೈ ಡೋಸ್ ಅನಸ್ತೇಷಿಯಾ ನೀಡಿದ್ದರಿಂದ ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂಬ ಆರೋಪವಿದೆ.

ಉಪಮೇಯರ್ ರಮೀಳಾ ವಿಧಿವಶ: ಗಣ್ಯರು ಏನಂದರು?ಉಪಮೇಯರ್ ರಮೀಳಾ ವಿಧಿವಶ: ಗಣ್ಯರು ಏನಂದರು?

BBMP corporator Elumalai health condition critical

ಸೋಮವಾರ ಕುಟುಂಬ ಸದಸ್ಯರು ಏಳುಮಲೈ ಅವರನ್ನು ಖಾಸಗಿ ಆಸ್ಪತ್ರೆಯಿಂದ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಅವರು ಕೋಮಾ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಮುಂದುವರೆದಿದೆ.

ಕಸ ಸಂಗ್ರಹಣೆ ದಿನಕ್ಕೆರಡು ಬಾರಿ ಮಾಡಿದರೆ ಹೇಗೆ: ಬಿಬಿಎಂಪಿ ಚಿಂತನೆಕಸ ಸಂಗ್ರಹಣೆ ದಿನಕ್ಕೆರಡು ಬಾರಿ ಮಾಡಿದರೆ ಹೇಗೆ: ಬಿಬಿಎಂಪಿ ಚಿಂತನೆ

ಮೇಯರ್ ಭೇಟಿ : ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. 'ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಏಳುಮಲೈ ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ' ಎಂದು ಮೇಯರ್ ಹೇಳಿದರು.

English summary
The Bruhat Bengaluru Mahanagara Palike (BBMP) ward no. 60 (Sagayapuram) corporator V.Elumalai (40) health condition critical. He is admitted to Vikram Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X