ಜೀವ ವೈವಿಧ್ಯತೆ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಬಿಬಿಎಂಪಿ

ಬೆಂಗಳೂರು, ಜನವರಿ 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೀವ ವೈವಿಧ್ಯತೆ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದ ಮಹಾನಗರ ಪಾಲಿಕೆಗಳ ಮಟ್ಟದಲ್ಲಿ ಮೊದಲ ಬಾರಿ ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಯನ್ನು ರಚನೆ ಮಾಡಿದೆ.

ಬಿಬಿಎಂಪಿ ಆಯುಕ್ತರು ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಮಹಾನಗರ ಪಾಲಿಕೆ ಮಟ್ಟದಲ್ಲಿ ಪರಿಸರದ ಜೀವ ವೈವಿಧ್ಯತೆ ಪ್ರಭೇಧ ಸ್ಥಳಗಳ ಸಂರಕ್ಷಣೆ ದೃಷ್ಠಿಯಿಂದ 5 ಸದಸ್ಯರ ಸಮಿತಿಯನ್ನು ರಚಿಸಿದೆ.

ಕಾನೂನಾತ್ಮಕವಾಗಿ ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಯನ್ನು ಬಿಬಿಎಂಪಿ ರಚನೆ ಮಾಡಿದೆ. ಬಿಬಿಎಂಪಿ ಮೇಯರ್ ಸಮಿತಿಯ ಅಧ್ಯಕ್ಷರು, ಬಿಬಿಎಂಪಿ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಜೈವಿಕ ವೈವಿಧ್ಯ ಅಧಿನಿಯಮ 2002 ಪರಿಚ್ಚೇಧ 41(1) ಜೈವಿಕ ವೈವಿಧ್ಯ ನಿಯಮಗಳು 2004 ನಿಯಮ 22 ಮತ್ತು ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು 2005 ನಿಯಮ 21ರ ಅಡಿ ಈ ಸಮಿತಿಯು ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಮಿತಿಯ ಸದಸ್ಯರು

ಸಮಿತಿಯ ಸದಸ್ಯರು

ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಗೆ ಭಾರ್ಗವ್ ವಿ. ಆರ್. (50), ಅಕ್ಷಯ್ ಹೆಬ್ಳೀಕರ್ (44), ವಿಜಯ್ ನಿಶಾಂತ್ ( 38), ಡಾ. ನಂದಿನಿ ಎನ್. (59), ಪ್ರೊ. ಉಷಾ ನಂದಿ (55) ಸದಸ್ಯರಾಗಿದ್ದಾರೆ. ಬಿಬಿಎಂಪಿ ಮೇಯರ್ ಅಧ್ಯಕ್ಷರಾಗಿ, ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಮೊದಲ ಬಾರಿಗೆ ಸಮಿತಿ ರಚನೆ

ಮೊದಲ ಬಾರಿಗೆ ಸಮಿತಿ ರಚನೆ

ಬಿಬಿಎಂಪಿ ಆಯುಕ್ತರಾದ ಬಿ. ಎಚ್. ಅನಿಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ಮಟ್ಟದಲ್ಲಿ ಪರಿಸರದ ಜೀವ ವೈವಿಧ್ಯ ಪ್ರಭೇಧಸ್ಥಳಗಳ ಸಂರಕ್ಷಣೆ ದೃಷ್ಟಿಯಿಂದ ಜೀವವೈವಿಧ್ಯ ನಿರ್ವಹಣಾ ಸಮಿತಿಯನ್ನು ರಚನೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

ಸಮಿತಿಯ ಕೆಲಸಗಳೇನು?

ಸಮಿತಿಯ ಕೆಲಸಗಳೇನು?

ನಗರದಲ್ಲಿ ಯಾವ ಪ್ರಭೇದದ ಸಸಿಗಳನ್ನು ಬೆಳೆಸಬಹುದು. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿ ಉಂಟಾಗದಂತೆ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಸಮಿತಿ ಚರ್ಚೆ ನಡೆಸಲಿದೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಯಲಿದ್ದು, ತಜ್ಞರು ಸಲಹೆಗಳನ್ನು ನೀಡಲಿದ್ದಾರೆ. ಈ ಸಮಿತಿ ಮೂರು ವರ್ಷಗಳ ಕಾಲ ಅಧಿಕಾರ ಹೊಂದಿರಲಿದೆ.

14 ಮಂದಿ ಅರ್ಜಿ ಹಾಕಿದ್ದರು

14 ಮಂದಿ ಅರ್ಜಿ ಹಾಕಿದ್ದರು

ಜೀವ ವೈವಿಧ್ಯತೆ ನಿರ್ವಹಣಾ ಸಮಿತಿ ಸದಸ್ಯರಾಗಲು 14 ಜನರು ಅರ್ಜಿಯನ್ನು ಸಲ್ಲಿಸಿದ್ದರು. ಮೀಸಲಾತಿ ಅನುಗುಣವಾಗಿ ಅರ್ಹ ತಜ್ಞರನ್ನು ಅವರ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+