ಬಿಬಿಎಂಪಿ 8 ವಲಯದಲ್ಲಿ ಸಮೀಕ್ಷೆ, ಒಂದಿಂಚು ಕಬಳಿಸಿದ್ರೂ ತಪ್ಪದು ಶಿಕ್ಷೆ
ಬೆಂಗಳೂರು, ಜೂನ್ 13: ಬಿಬಿಎಂಪಿ ತನ್ನ ಎಂಟು ವಲಯದ ಬಿಬಿಎಂಪಿ ಆಸ್ತಿಗಳನ್ನು ಮತ್ತೊಮ್ಮೆ ಸರ್ವೆ ಮಾಡಲು ಮುಂದಾಗಿದೆ. ಬಿಬಿಎಂಪಿ ಜೋನ್‌ನಲ್ಲಿರುವ ಭೂಮಾಪಕ ಅಧಿಕಾರಿಗಳಿಂದ ಸರ್ವೆಯನ್ನು ಮಾಡಿಸಲಾಗುವುದು ಎನ್ನಲಾಗಿದೆ. ಬಿಬಿಎಂಪಿಗೆ ಬಿಡಿಎಯಿಂದ ಹಸ್ತಾಂತರವಾಗಿರುವ ಬಡಾವಣೆ ಮತ್ತು ಹಸ್ತಾಂತರ ಹಂತದಲ್ಲಿರುವ ಬಡಾವಣೆಯಲ್ಲಿ ಬಿಬಿಎಂಪಿ ಮತ್ತು ಬಿಡಿಎ ಜಂಟಿಯಾಗಿ ಆಸ್ತಿಯನ್ನು ಸರ್ವೆ ಮಾಡಲಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಯು ಒತ್ತುವರಿಯಾಗಿದೆ. ಬಿಬಿಎಂಪಿ ತನ್ನ ಎಂಟು ವಲಯದಲ್ಲಿ ಸರ್ವೆಯನ್ನು ಮಾಡಿದ ಬಳಿಕ ಯಾವ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಆಸ್ತಿಯನ್ನು ಯಾರು ಸಂಪೂರ್ಣವಾಗಿ ಕಬಳಿಸಿದ್ದಾರೆ ತಿಳಿದು ಬರಲಿದೆ. ಬಿಬಿಎಂಪಿ ಆಸ್ತಿಗಳನ್ನು ಸರ್ವೆಯಾದ ಬಳಿಕವಷ್ಟೇ ಬಿಬಿಎಂಪಿ ಆಸ್ತಿ ಒತ್ತುವರಿ ತೆರವು ಕಾರ್ಯವನ್ನು ಮಾಡಲಾಗುತ್ತದೆ.

ಏಳು ದಿನಗಳವಲ್ಲಿ ಕೋವಿಡ್ ಸಂಖ್ಯೆ
ಬೆಂಗಳೂರಿನಲ್ಲಿ ಕೋವಿಡ್ ಸಂಖ್ಯೆಯು ಹೆಚ್ಚಾಗಿದೆ. ಏಳು ದಿನಗಳವಲ್ಲಿ ಕೋವಿಡ್ ಸಂಖ್ಯೆ 400 ರಿಂದ 450ಕ್ಕೆ ಏರಿಕೆಯಾಗಿದೆ. ಪಾಸಿಟಿವ್ ದರ 2.6ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 16000 ಟೆಸ್ಟ್ ನಡೆಯುತ್ತಿದ್ದು 20000ಕ್ಕೆ ಟೆಸ್ಟ್‌ಗಳನ್ನು ಏರಿಸಲಾಗುತ್ತಿದೆ.

ಡೆಂಗ್ಯೂ ಜ್ವರ ಸಂಖ್ಯೆಯಲ್ಲೂ ಏರಿಕೆ
ಬೆಂಗಳೂರಿಲ್ಲಿ ಡೆಂಗ್ಯೂ ಜ್ವರ ಏರಿಕೆಯನ್ನು ಕಂಡಿದೆ. ಒಂದು ವಾರ ನಡೆದ ಸರ್ವೆಯಲ್ಲಿ 1855 ಜನರಿಗೆ ಡೆಂಗ್ಯೂ ಜ್ವರದ ಲಕ್ಷಣಗಳು ಗೋಚರಿಸಿದೆ. 659 ಜನರಿಗೆ ಡೆಂಗ್ಯೂ ಜ್ವರ ಬಂದಿರುವುದು ಖಚಿತವಾಗಿದೆ. ಡೆಂಗ್ಯೂ ಜ್ವರ ಬಂದರಿಗೆ ಸೂಕ್ತ ಚಿಕಿತ್ಸೆಯನ್ನ ನೀಡಲಾಗುತ್ತಿದೆ. 3954 ಸ್ಥಳಗಳಲ್ಲಿ ಲಾರ್ವಾ ಪತ್ತೆ ಆಗಿದೆ. ಕಳೆದ 10 ದಿನಗಳಲ್ಲಿ 38 ಕೇಸ್ ಪತ್ತೆಯಾಗಿವೆ, ದಾಸರಹಳ್ಳಿ ವಲಯದಲ್ಲಿ ಹೆಚ್ಚು ಲಾರ್ವಾ ಸೈಟ್ ಗುರುತಿಸುವ & ಮನೆ ಮನೆ ಸರ್ವೆ ಆರೋಗ್ಯ ಇಲಾಖೆಯಿಂದ ಆಗ್ತಾಯಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ ಜಂಟಿ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.

ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ
ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರತಿದಿನ ನಡೆಯುತ್ತಲೇ ಇದೆ. 13632 ರಸ್ತೆಗುಂಡಿಗಳ ಪೈಕಿ 12286 ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಗುಂಡಿಗಳನ್ನು ಗುರುತಿವುದು ಮತ್ತು ಮುಚ್ಚುವ ಕೆಲಸ ನಿರಂತರಾಗಿ ಸಾಗುತ್ತಿರುತ್ತದೆ. 2,03,403 ಮನೆಗಳ ಸರ್ವೆ ಆಗಿದ್ದೂ 2,98,962 ಸೈಟ್ ಗುರುತಿಸಿ ಪರಿಶೀಲನೆ ಮಾಡಲಾಗಿದೆ.

6,18,46, 941 ರೂ ವೆಚ್ಚದಲ್ಲಿ ಟೆಂಡರ್
ಬ್ಲಾಕ್ ಸ್ಪಾಟ್‌ಗಳನ್ನು ನಿತ್ಯ ಕ್ಲಿಯರ್ ಮಾಡುವ ಟೆಂಪರರಿ ಬ್ಲಾಕ್ ಸ್ಪಾಟ್ಸ್ 1479 ಆಗಿದ್ದೂ ಪರ್ಮನೆಂಟ್ ಬ್ಲಾಕ್ ಸ್ಪಾಟ್ - 118 ಇತ್ತು , ಸದ್ಯ 76 ಕ್ಕೆ ಇಳಿಕೆ ಆಗಿದೆ, ಬ್ಲಾಕ್ ಸ್ಪಾಟ್ ತೆರವು ಸಂಬಂಧ ಪಾಲಿಕೆಯಿಂದ ನೂತನ ಟೆಂಡರ್ ಕರೆಯಲಾಗಿದೆ.
ಪಾಲಿಕೆಯ ಬ್ಲಾಕ್ ಸ್ಪಾಟ್ ಸಂಪೂರ್ಣ ನಿರ್ಮೂಲನೆಗೆ ಟೆಂಡರ್ ಕರೆದಿದ್ದು. 6,18,46, 941 ರೂ ವೆಚ್ಚದಲ್ಲಿ ಟೆಂಡರ್ ಆಗಿದೆ ಪರ್ಮನೆಂಟ್ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಹಾಕದಂತೆ ನೋಡಿಕೊಳ್ಳಬೇಕು, ನಂತರ ಆ ಸ್ಥಳವನ್ನು ಬ್ಯೂಟಿಫಿಕೇಷನ್ ಮಾಡಬೇಕು. ಬೇರೆ ಟೆಕ್ನಾಲಜಿ ಅಥವಾ ಸಿಬ್ಬಂದಿ ನೇಮಕ ಮಾಡಿ ಬ್ಲಾಕ್ ಸ್ಪಾಟ್‌ನಲ್ಲಿ ಕಸ ಬೀಳದಂತೆ ನೋಡಿಕೊಳ್ಳಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಕಸ, ಹಾಗೂ ಬೀದಿ ಕಸ ತೆರವು ಗುತ್ತಿಗೆದಾರನದ್ದೆ ಆಗಿರುತ್ತದೆ. ಉದಯ ಶಿವಕುಮಾರ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್‌ಗೆ ಟೆಂಡರ್ ನೀಡಲಾಗಿದೆ. ಪಾಲಿಕೆ ಮುಂದಿನ ದಿನಗಳಲ್ಲಿ ನಗರದಲ್ಲಿ ಬ್ಲಾಕ್ ಸ್ಪಾಟ್ ಇಲ್ಲದ ಹಾಗೆ ಮಾಡುವ ಗುರಿಯನ್ನು ಹೊಂದಿದೆ ಎಂದು ಜಂಟಿ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications