ಬಜೆಟ್‌ಗೆ ಅನುಮೋದನೆಯಿಲ್ಲದೆ ಅನುಷ್ಠಾನವಾಗದ ಯೋಜನೆಗಳು

ಬೆಂಗಳೂರು, ಮೇ 18: ಪ್ರಸ್ತುತ ಸಾಲಿನ ಬಿಬಿಎಂಪಿ ಬಜೆಟ್‌ ಮಂಡನೆಯಾಗಿ ಎರಡೂವರೆ ತಿಂಗಳಾದರೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳು ಶೇ.50 ಅನುಷ್ಠಾನಕ್ಕೆ ಬರುವುದು ಅನುಮಾನ ಎನ್ನುವಂತಾಗಿದೆ.

ಬಜೆಟ್‌ನಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಯ ಆಡಳಿತ ನಗರದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರನ್ನು ಮುಖ್ಯವಾಗಿರಸಿಕೊಂಡು ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಿಸಿತ್ತು.

ಆದರೆ ಬಜೆಟ್‌ ಘೋಷಣೆಯಾದ ನಂತರ ಅದನ್ನು ಶೀಘ್ರದಲ್ಲಿ ಸರ್ಕಾರದಲ್ಲಿ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯದೆ ಕಾಲಹರಣ ಮಾಡಿತ್ತು. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಬಜೆಟ್‌ಗೆ ಸರ್ಕಾರದಿಂದ ಅನುಮೋದನೆ ನೀಡುವ ಅಧಿಕಾರವಿಲ್ಲದಂತಾಯಿತು.

BBMP budget yet to approve by the state govt

ಅಲ್ಲದೆ, ಪ್ರಸ್ತುತ ಸರ್ಕಾರ ರಚನೆ ಕುರಿತಂತೆ ಗೊಂದಲ ಏರ್ಪಟ್ಟಿರುವುದಾಗಿ ಬಜೆಟ್‌ಗೆ ಸದ್ಯಕ್ಕೆ ಅನುಮೋದನೆ ದೊರೆಯುವುದಿಲ್ಲ. ಅದರಿಂದಾಗಿ ಬೆಂಗಳೂರಿನಲ್ಲಿ ಜಾರಿಯಾಗಬೇಕಿದ್ದ ಹಲವು ಅಭಿವೃದ್ಧಿ ಕಾರ್ಯಗಳು ಜಾರಿಯಾಗದಂತಾಗಿದೆ.

ಬಜೆಟ್‌ಗೆ ಅನುಮೋದನೆ ದೊರೆಯದಿದ್ದರೂ ಪಾಲಿಕೆಯ ದಿನ ನಿತ್ಯ ಕಾರ್ಯಗಳಿಗೆ ಯಾವುದೇ ಅಡ್ಡಿಯಿಲ್ಲ. ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ವೇತನ ಹಾಗೂ ಇತರೆ ಕೆಲಸಗಳಿಗೆ ಲೇಖಾನುನುದಾನದ ಮೂಲಕ ಮೊತ್ತ ಬಳಸಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+