ಬಿಬಿಎಂಪಿ ಬಜೆಟ್ ಗಾತ್ರ 15 ಸಾವಿರ ಕೋಟಿ: ಬಜೆಟ್ ಯಾವಾಗ?
ಬೆಂಗಳೂರು, ಫೆಬ್ರವರಿ 1: ರಾಜ್ಯ ಸರ್ಕಾರದ 2019-20ನೇ ಸಾಲಿನ ಬಜೆಟ್ ಮಂಡನೆಯಾದ ಬಳಿಕ ಬಿಬಿಎಂಪಿ ಬಜೆಟ್ ಮಂಡನೆಯೂ ನಡೆಯಲಿದೆ.
ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇರುವುದರಿಂದ ನೀತಿ ಸಂಹಿತೆ ಜಾರಿಯಾಗುವುದರೊಳಗೆ ಬಜೆಟ್ ಮಂಡನೆ ಮಾಡುವ ಉದ್ದೇಶ ಬಿಬಿಎಂಪಿ ಹೊಂದಿದೆ.
Interim Union Budget 2019 LIVE: ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆ ಆರಂಭ
ಫೆ.15ರಂದು ಬಜೆಟ್ ಮಂಡಿಸಿ ತಿಂಗಳೊಳಗೆ ರಾಜ್ಯ ಸರ್ಕಾರದಿಂದ ಬಜೆಟ್‌ಗೆ ಅನುಮೋದನೆ ಪಡೆಯಲು ಚಿಂತನೆ ನಡೆದಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಗಾತ್ರ 15ಸಾವಿರ ಕೋಟಿ ದಾಟಬಹುದು ಎನ್ನಲಾಗುತ್ತಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೇಮಲತಾ ಗೋಪಾಲಯ್ಯ, ಆಡಳಿತ ಪಕ್ಷದ ನಾಯಕ ಎಂ. ಶಿವರಾಜ್ ಅವರು ವಾಸ್ತವದ ಬಜೆಟ್ ಮಂಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಫೆ.15 ರಂದು ಬಹುತೇಕ ಬಜೆಟ್ ನಿಗದಿಯಾಗಿದೆ.

ಪಾಲಿಕೆ ಬಜೆಟ್‌ನಲ್ಲಿಯೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ನಿಧಿಯಾಗಿ 250 ಕೋಟಿ ಮೀಸಲಿಡಲು ತೀರ್ಮಾನಿಸಲಾಗಿದೆ. ಜೊತೆಗೆ ಮೇಯರ್‌ಗೆ 150 ಕೋಟಿ ರೂ, ಉಪಮೃಯರ್‌ಗೆ 100 ಕೋಟಿ ಮೀಸಲಿಡಲು ನಿರ್ಧರಿಸಲಾಗಿದೆ.












Click it and Unblock the Notifications