ಮಕ್ಕಳಿಗೆ ಕೊರೊನಾ ಲಸಿಕೆ; ಬಿಬಿಎಂಪಿಯಿಂದ ಸಿದ್ಧತಾ ಕಾರ್ಯ ಆರಂಭ

ಬೆಂಗಳೂರು, ಅಕ್ಟೋಬರ್ 03: ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಮಕ್ಕಳಿಗೆ ಕೊರೊನಾ ಲಸಿಕೆ ಬಿಡುಗಡೆ ಮಾಡುವ ಸಾಧ್ಯತೆಯ ಸುದ್ದಿಗಳ ನಡುವೆ ಬಿಬಿಎಂಪಿ ನಗರದಾದ್ಯಂತ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ಆರಂಭಿಸಿದೆ. ನಗರದಲ್ಲಿ 12-18 ವರ್ಷದ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವ ಕೆಲಸವನ್ನು ಈಗಾಗಲೇ ಬಿಬಿಎಂಪಿ ಆರಂಭಿಸಿದೆ.

'ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕುರಿತು ನಮಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಆದರೆ ಕೊರೊನಾ ಲಸಿಕೆಗೆ ಅಗತ್ಯ ಅನುಮೋದನೆ ದೊರಕಿರುವುದರಿಂದ ಈ ಸಂಬಂಧ ಮಾರ್ಗಸೂಚಿಗಳು ಶೀಘ್ರದಲ್ಲೇ ಹೊರಬೀಳುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಮತ್ತು ಸಿದ್ಧತೆಗಳನ್ನು ಆರಂಭಿಸಿದ್ದೇವೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಪ್ರತ್ಯೇಕ ಶಿಬಿರಗಳ ಅಗತ್ಯವಿದೆಯೇ ಇಲ್ಲವೇ ಈಗಿರುವ ಶಿಬಿರಗಳು ಹಾಗೂ ಮೂಲಸೌಕರ್ಯವನ್ನೇ ಬಳಸಿಕೊಳ್ಳಬಹುದೇ ಎಂಬುದನ್ನು ಬಿಬಿಎಂಪಿ ಇನ್ನೂ ನಿರ್ಧರಿಸಿಲ್ಲ.

BBMP Begins Preparations To Vaccinate Children Against Coronavirus

'ಮೊದಲ ಹಂತದಲ್ಲಿ 12-18 ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಸರ್ಕಾರದಿಂದ ಸೂಕ್ತ ನಿರ್ದೇಶನ, ಮಾರ್ಗಸೂಚಿಗಳು ಬಂದ ನಂತರ ನಾವು ಲಸಿಕಾ ಅಭಿಯಾನವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಬೇಕೇ ಇಲ್ಲ, ವಾರ್ಡ್ ಮಟ್ಟದ ಶಿಬಿರಗಳಲ್ಲಿ ನಡೆಸಬೇಕೇ ಎಂಬುದನ್ನು ನಿರ್ಧರಿಸುತ್ತೇವೆ. ಮಕ್ಕಳಿಗೆ ಅವರ ಶಾಲೆಗಳಲ್ಲಿಯೇ ಲಸಿಕೆ ಹಾಕುವ ಆಯ್ಕೆಯ ಕುರಿತು ಕೂಡ ನಾವು ಯೋಚಿಸುತ್ತಿದ್ದೇವೆ' ಎಂದು ಗುಪ್ತಾ ತಿಳಿಸಿದ್ದಾರೆ.

ಉದ್ದೇಶಿತ ಜನಸಂಖ್ಯೆಯ ಮಾಹಿತಿಯು ಲಸಿಕೆ ನೀಡುವಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ನೆರವಾಗಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಹೇಳಿದ್ದಾರೆ.

'ಸದ್ಯ ನಾವು ಮಾಹಿತಿಯನ್ನು ಒಟ್ಟುಗೂಡಿಸುತ್ತಿದ್ದೇವೆ. ಉದ್ದೇಶಿತ ಜನಸಂಖ್ಯೆಯನ್ನು ಗುರುತಿಸುವ, ಮಾಹಿತಿ ಸಂಗ್ರಹಿಸುವ ಮೂಲಕ ಸಣ್ಣ ಮಟ್ಟದ ಯೋಜನೆಗೆ ಸಿದ್ಧತೆ ನಡೆಸಿದ್ದೇವೆ. ಸಂಪೂರ್ಣ ಮಾರ್ಗಸೂಚಿಯನ್ನು ಪಡೆದ ನಂತರವಷ್ಟೇ ನಾವು ಕಾರ್ಯಾಚರಣೆಯ ಅಂಶಗಳ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗುವುದು' ಎಂದು ಹೇಳಿದ್ದಾರೆ.

BBMP Begins Preparations To Vaccinate Children Against Coronavirus

ನಗರದ 54 ವಾರ್ಡ್‌ಗಳಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ಮೂಲಕ ಸಂಗ್ರಹಿಸಿರುವ ಮಾಹಿತಿಯನ್ನು ಬಳಸಿಕೊಳ್ಳಲು ಬಿಬಿಎಂಪಿ ಆಲೋಚಿಸುತ್ತಿದೆ. 'ಇದು ಪ್ರತ್ಯೇಕ ವಯಸ್ಸಿನ ಗುಂಪಿನ ಪ್ರಕಾರ ಮಕ್ಕಳನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ. ಅಲ್ಲದೇ ಲಸಿಕೆ ಹಾಕುವವರು ಬ್ಲಾಕ್/ಲೇನ್ ಮಟ್ಟದಲ್ಲಿ ಲಸಿಕೆ ನೀಡಲು ಆರಂಭಿಸಲಿದ್ದು, ಬ್ಲಾಕ್‌ ಮ್ಯಾಪ್‌ನಲ್ಲಿ ಮಕ್ಕಳಿರುವ ಮನೆಗಳನ್ನು ಗುರುತಿಸಲು ಸೂಚಿಸಲಾಗಿದೆ. ಇದು ನಮಗೆ ಉದ್ದೇಶಿತ ಜನಸಂಖ್ಯೆಯ ಮಾಹಿತಿಯನ್ನು ನೀಡಲಿದೆ' ಎಂದು ರಣದೀಪ್ ಹೇಳಿದರು.

ದೇಶದಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಅಧಿಕ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಈ ಎಚ್ಚರಿಕೆ ಬೆನ್ನಲ್ಲೇ ಮಕ್ಕಳಿಗಾಗಿ ಲಸಿಕೆ ಅಭಿವೃದ್ಧಿಗೊಳಿಸಲಾಗಿದೆ.

ದೇಶದಲ್ಲಿ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಲಸಿಕೆಯನ್ನು 12-17 ವರ್ಷದ ಮಕ್ಕಳಿಗೆ ನೀಡಲು ಅನುಮೋದನೆ ನೀಡಲಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಈ ಲಸಿಕೆಯನ್ನು ನೀಡುವ ಸಂಬಂಧ ಸರ್ಕಾರ ಮಾರ್ಗಸೂಚಿ ಹೊರಡಿಸುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು:
ಕರ್ನಾಟಕದಲ್ಲಿ ಶನಿವಾರ 636 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 245 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2977225ಕ್ಕೆ ಏರಿಕೆಯಾಗಿದ್ದು, ಶನಿವಾರ 4 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 37811ಕ್ಕೆ ಏರಿಕೆಯಾಗಿದ್ದು, ಇದುವರೆಗೂ 2977225 ಮಂದಿ ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ 5,68,97,778 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಮಕ್ಕಳಿಗೆ ವಿಶೇಷ ಆಸ್ಪತ್ರೆಗಳ ವ್ಯವಸ್ಥೆ ಮಾಡಿಕೊಳ್ಳಲು ಆರೋಗ್ಯ ಸಚಿವ ಕೆ ಸುಧಾಕರ್ ಎಲ್ಲಾ ಜಿಲ್ಲೆಗಳಿಗೆ ಸೂಚಿಸಿದ್ದಾರೆ.

ಇದರೊಂದಿಗೆ, ವಾರ್ಡ್‌ವಾರು ಲಸಿಕಾ ಶಿಬಿರಗಳು ಹಾಗೂ ವಿಶೇಷ ಅಭಿಯಾನಗಳ ಮೂಲಕ ಬೆಂಗಳೂರು ನಗರದ ಎಲ್ಲಾ 198 ವಾರ್ಡ್‌ಗಳಲ್ಲಿ ಸುಮಾರು 84% ಜನಸಂಖ್ಯೆಗೆ ಬಿಬಿಎಂಪಿ ಕೊರೊನಾ ಲಸಿಕೆ ಹಾಕಿದ್ದು, ಇದೀಗ ಲಸಿಕೆ ಪಡೆದುಕೊಳ್ಳದವರಿಗೆ ಲಸಿಕೆ ನೀಡಲು ಮನೆ ಬಾಗಿಲಿಗೇ ಲಸಿಕೆ ನೀಡುವತ್ತ ಬಿಬಿಎಂಪಿ ಮುಂದಿನ ಯೋಜನೆ ರೂಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+