ಬೆಂಗಳೂರು; ಎಸ್‌ಪಿ ರೋಡ್ ಕಂಟೈನ್ಮೆಂಟ್ ಝೋಜ್, ಅಂಗಡಿಗಳು ಬಂದ್
ಬೆಂಗಳೂರು, ಜೂನ್ 05 : ವ್ಯಾಪಾರ ವಹಿವಾಟಿಗಾಗಿ ಬಾಗಿಲು ತೆರೆದಿದ್ದ ಬೆಂಗಳೂರಿನ ಎಸ್‌ಪಿ ರೋಡ್ ಮತ್ತೆ ಬಂದ್ ಆಗಿದೆ. ಕೋವಿಡ್ - 19 ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ, ಅಂಗಡಿಗಳನ್ನು ಮುಚ್ಚಲಾಗಿದೆ.
Recommended Video
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಲ್ವರ್ ಜ್ಯೂಬಿಲಿ ಪಾರ್ಕ್ ರೋಡ್ (ಎಸ್‌ಪಿ ರೋಡ್) ಮತ್ತು ನಗರ್ತನಪೇಟೆಯನ್ನು ಸೀಲ್ ಡೌನ್ ಮಾಡಿದೆ. ಲಾಕ್ ಡೌನ್ ಪರಿಣಾಮ ಬಾಗಿಲು ಮುಚ್ಚಿದ್ದ ಎಸ್‌ಪಿ ರೋಡ್ ಕೆಲವು ದಿನದ ಹಿಂದೆ ಪುನಃ ಬಾಗಿಲು ತೆರೆದಿತ್ತು.
ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಎಸ್‌ಪಿ ರೋಡ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗಾಗಿ ಪ್ರಸಿದ್ಧಿ ಪಡೆದಿದೆ. ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಆಗಮಿಸಲಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ.

ಬಿಬಿಎಂಪಿಯ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿನ ಕೋವಿಡ್ - 19 ಪ್ರಕರಣಗಳ ಸಂಖ್ಯೆ 328. ಇದುವರೆಗೂ ನಗರದಲ್ಲಿ 10 ಜನರು ಮೃತಪಟ್ಟಿದ್ದಾರೆ. ನಗರದಲ್ಲಿನ ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 40. ಸಕ್ರಿಯ ಪ್ರಕರಣಗಳ ಸಂಖ್ಯೆ 151.
ಕರ್ನಾಟಕ ಸರ್ಕಾರ ಕಂಟೈನ್ಮೆಂಟ್ ಝೋನ್‌ನ ವ್ಯಾಪ್ತಿಯನ್ನು ಮರುಪರಿಶೀಲನೆ ಮಾಡಲು ಮುಂದಾಗಿದೆ. ಯಾವ ಕಟ್ಟಡದಲ್ಲಿ ಕೋವಿಡ್ - 19 ಪ್ರಕರಣ ದಾಖಲಾಗಿದೆಯೋ ಅದನ್ನು ಮಾತ್ರ ಸೀಲ್ ಡೌನ್ ಮಾಡುವ ಚಿಂತನೆಯಲ್ಲಿದೆ.
ಒಂದು ವೇಳೆ ಇಂತಹ ತೀರ್ಮಾನವನ್ನು ಕೈಗೊಂಡರೆ ಎಸ್‌ಪಿ ರಸ್ತೆಯಲ್ಲಿರುವ ಅಂಗಡಿಗಳು ಬಾಗಿಲು ತೆರೆಯಲಿವೆ. ಬೆಂಗಳೂರಿನ ವಿ. ವಿ. ಪುರಂನಲ್ಲಿ ಸೋಂಕು ಕಾಣಿಸಿಕೊಂಡ ಮನೆ ಇರುವ ಅಪಾರ್ಟ್‌ಮೆಂಟ್ ಅನ್ನು ಮಾತ್ರ ಸೀಲ್ ಡೌನ್ ಮಾಡಲಾಗಿದೆ.












Click it and Unblock the Notifications