91 ಸಾಧಕರಿಗೆ 2015ರ ಕೆಂಪೇಗೌಡ ಪ್ರಶಸ್ತಿ
ಬೆಂಗಳೂರು, ಏ. 3 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಏ.4ರ ಶನಿವಾರ ಹಮ್ಮಿಕೊಂಡಿದೆ. ಈ ಬಾರಿಯ ಕೆಂಪೇಗೌಡ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು 91 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಎರಡು ದಿನಗಳ ಕಾಲ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಪಾಲಿಕೆ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಒಂದು ದಿನಕ್ಕೆ ಇಳಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ವಾರ್ಡ್ ಮಟ್ಟದಲ್ಲಿ ಕೆಂಪೇಗೌಡ ಜಯಂತಿ ಆಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಮೇಯರ್ ಎನ್.ಶಾಂತಕುಮಾರಿ ಅವರು ಶನಿವಾರ ಬೆಳಗ್ಗೆ 8 ಗಂಟೆಗೆ ಎನ್.ಆರ್.ಚೌಕದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ
ಸಾಹಿತ್ಯ ಕ್ಷೇತ್ರ : ಎಸ್.ಜಿ. ಮಾಲತಿ ಶೆಟ್ಟಿ, ಡಾ. ಸಾ.ಶಿ. ಮರುಳಯ್ಯ, ಜಿ.ಎಸ್. ಸಿದ್ದಲಿಂಗಯ್ಯ
ಸಂಗೀತ ಕ್ಷೇತ್ರ : ವೇದ ವಿ. ಭಟ್, ಕೆ. ಚೆನ್ನಯ್ಯ, ಟಿ. ರಾಜಾರಾಮ್, ಡಾ. ವಸುಧಾ ಶ್ರೀನಿವಾಸ್, ಕುಮಾರಿ ಸ್ಫೂರ್ತಿ, ಆನಂದ ಮೂದಲಗೆರೆ, ಶ್ರೀಕಾಂತ ನಾಗೇಂದ್ರ ಶಾಸ್ತ್ರಿ.
ಸಮಾಜ ಸೇವೆ : ಹೆಚ್.ಬಿ. ರಾಜೇಗೌಡ, ಬಿ.ಎಂ. ನಾರಾಯಣ ಸ್ವಾಮಿ, ಡಿ. ದಾಸಪ್ಪ ಗೌಡ, ಭಾರ್ಗವಿ. ಎಂ.ಎಸ್. ರೇಣುಕಾಪ್ರಸಾದ್, ಡಾ. ರಿತಿಕಾ ಮಂಜುಳಾ, ಎ.ಬಿ. ಶಿವಕುಮಾರ್, ಎಂ. ಸಿದ್ದಪ್ಪ ನೇಗಲಾಲ, ಶ್ರೀನಿವಾಸನ್, ವಿ. ನಾಗರಾಜ.ರಂಗಭೂಮಿ : ಕೆ.ಜಿ. ವೆಂಕಟೇಶ್, ಭಾಗ್ಯಶ್ರೀ, ಟಿ.ವಿ. ಗುರುಮೂರ್ತಿ, ವೆಂಕಟೇಶಯ್ಯ, ಲಕ್ಷ್ಮೀ ಶ್ರೀನಿವಾಸ್, ಟಿ.ಎಲ್. ರಮೇಶ್, ಎಸ್. ಗಂಗಪ್ಪ, ಪಿ. ಹುಚ್ಚಪ್ಪ, ವಿಜಯ್ ಕುಮಾರ್ ಜೀತೂರಿ.
ಚಲನಚಿತ್ರ : ನಟ, ನಿರ್ಮಾಪಕ ರವಿಶಂಕರ್, ನಾಗತಿಹಳ್ಳಿ ರಮೇಶ್, ಕೆ.ಎಸ್. ಶ್ರೀನಿವಾಸ ಕುಮಾರ್, ಆರ್.ಟಿ. ರಮಾ
ನೃತ್ಯ ಕ್ಷೇತ್ರ : ಎಸ್.ಆರ್. ಗೀತಾರಾಣಿ, ಶರವಣ ಧನ್‌ಪಾಲ್, ಡಾ. ಮಾಲಿನಿ ರವಿಶಂಕರ್, ಶುಭ ಧನಂಜಯ.
ಶಿಕ್ಷಣ ಕ್ಷೇತ್ರ : ಎ.ಎಫ್. ಕುದ್ರೋಳಿ, ಎಸ್.ಎಲ್. ವೇಣುಗೋಪಾಲ್
ಮಾಧ್ಯಮ ಕ್ಷೇತ್ರ : ಶಿವಕುಮಾರ ಬೆಳ್ಳಿ ತಟ್ಟೆ, ವೈ.ಎಸ್.ಎಲ್. ಸ್ವಾಮಿ, ರಮೇಶ್ ಹಿರೇಜಂಬೂರು, ಶ್ರೀನಿವಾಸ್, ಜಗದೀಶ್ ಮಣಿಯಾಣಿ, ಮೊಹಮ್ಮದ್ ಸೈಯದ್ ಸಿದ್ದಿಕಿ ಅಲ್ದೂರಿ
ಕನ್ನಡ ಸೇವಾ ಕ್ಷೇತ್ರ : ಮಂಜುಳಾ ಮೋಹನ್, ಎಸ್. ಕೃಷ್ಣ,
ಚಿತ್ರಕಲಾ ಕ್ಷೇತ್ರ : ಡಿ.ವಿ. ವೆಂಕಟೇಶ್, ರಾಜೇಂದ್ರ ಚಂದ್ರಶೇಖರ್ ಅಷ್ಠಗಿ, ಯಶವಂತ್ ವಿಭಾರ
ಸಾಂಸ್ಕೃತಿಕ ಕ್ಷೇತ್ರ : ಬೇಗಾರ್ ಶಿವಕುಮಾರ್, ವೈ. ಕಲಾವತಿ, ಟಿ. ಮಹೇಶ್ ಕುಮಾರ್, ಭದ್ರಯ್ಯ
ಯೋಗ ಕ್ಷೇತ್ರ : ಗುರೂಜಿ ಪ್ರಕಾಶ್‌ಯೋಗಿ, ಆರ್. ನಂದಕುಮಾರ್, ಎಂ.ಸಿ. ರಾಜಶೇಖರ್, ಡಾ. ನಿರಂಜನಮೂರ್ತಿ
ಕ್ರೀಡಾ ಕ್ಷೇತ್ರ : ಎಂ. ಮಂಜುಳಾ, ರಾಜೇಶ್. ಆರ್, ಎಂ. ಹರಿನಾಥ್, ಎಂ. ಮಂಜುನಾಥ್, ಪ್ರದೀಪ್ ಕುಮಾರ್ ಡಿ.ಎನ್, ಅನುಪ. ಡಿ. ಕೊಸ್ಟಾ, ಸುಜಿತ್ ಸೋಮಸುಂದರ್, ವೈ.ಜಿ. ಕೃಷ್ಣಮೂರ್ತಿ, ರವೀಂದ್ರಶೆಟ್ಟಿ, ಜಿ. ಆಕಾಶ್ ರೋಹಿತ್, ರೇಣುಕಾದೇವಿ ದೇಶಪಾಂಡೆ, ವಿ. ಜಯರಾಮ್, ಶ್ರೀ ಚೇತನ್ ಬಿ. ಆರಾಧ್ಯ, ಕುಮಾರಿ ಮೃದುಲಾ. ವಿ, ಪ್ರಮೀಳಾ. ಬಿ.ಆರ್, ಬಿ. ಅಶೋಕ್ ಕುಮಾರ್ ನಾಯ್ಡು, ಇ. ರಾಮಕೃಷ್ಣ ರಾವ್, ಜಿ. ರಾಜೇಂದ್ರನ್, ಜಿ. ಮಂಜುನಾಥ್, ಶ್ಯಾಮಲ ಶೆಟ್ಟಿ, ಕು. ಮೇಘನಾ ಬಿ.ಜೆ., ಟಿ. ಲಕ್ಷ್ಮಿ ನಾರಾಯಣ.
ಛಾಯಾಗ್ರಾಹಕ ಕ್ಷೇತ್ರ : ಸುಧೀರ್ ಶೆಟ್ಟಿ
ವಿವಿಧ ಕ್ಷೇತ್ರ :ಪುಟ್ಟ ರಂಗಯ್ಯ, ಬಾಬು ಕೃಷ್ಣಮೂರ್ತಿ.
ಕಾನೂನು ಕ್ಷೇತ್ರ : ಕೆ.ಡಿ. ದೇಶಪಾಂಡೆ ಕಾನೂನು ಕೋಶ ಮುಖ್ಯಸ್ಥರು, ಮಾರಿಯೋ ಪೀರೀಸ್
ವೈದ್ಯಕೀಯ ಕ್ಷೇತ್ರ : ಡಾ. ಶಶಿಧರ್ ಬುಗ್ಗಿ, ಡಾ. ವಿಜಯಲಕ್ಷ್ಮಿ ದೇಶಮಾನೆ, ಡಾ. ಕೆ. ರಾಜಗೋಪಾಲ ಹೊಳ್ಳ, ಡಾ. ಲಕ್ಷ್ಮಣ, ಡಾ. ಚಂದ್ರೇಗೌಡರು.












Click it and Unblock the Notifications