ವೆಬ್ ಲೋಕಕ್ಕೆ ಕಾಲಿಟ್ಟ ಬಸವನಗುಡಿ ಸತೀಶ್ ಸ್ಟೋರ್ಸ್

ಬೆಂಗಳೂರು, ಜ.14: ಹಬ್ಬದ ಸಂದರ್ಭದಲ್ಲಿ ಡಿವಿಜಿ ರಸ್ತೆಯಲ್ಲಿ ಕಾಲಿಡಲು ಆಗುವುದಿಲ್ಲ ಎಂದು ಗೊಣಗಾಡುತ್ತಾ ಶಾಪಿಂಗ್ ಮಾಡುವ ಬೆಂಗಳೂರಿಗರಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ. ಬಸವನಗುಡಿಯ ಜನಪ್ರಿಯ ಮಳಿಗೆ ಸತೀಶ್ ಸ್ಟೋರ್ಸ್ ಈಗ ಆನ್ ಲೈನ್ ಪ್ರಪಂಚಕ್ಕೆ ಕಾಲಿಟ್ಟಿದೆ.

ಗಾಂಧಿ ಬಜಾರ್ ಸರ್ಕಲ್ ನಿಂದ ಅನತಿ ದೂರದಲ್ಲಿರುವ ಡಿವಿಜಿ ರಸ್ತೆಯ #2ನೇ ಅಂಗಡಿಯೇ ಸತೀಶ್ ಸ್ಟೋರ್. ಅರಿಶಿನ, ಕುಂಕುಮ, ಕ್ಯಾಲೆಂಡರ್, ಹೂ ಬತ್ತಿ, ಪೂಜಾ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಇಡೀ ಅಂಗಡಿಯ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. [ಆನ್ ಲೈನ್ ಶಾಪಿಂಗು ಎಂಬ ಮೋಹ, ದಾಹ]

ಮದುವೆ, ಹುಟ್ಟುಹಬ್ಬ ಮುಂತಾದ ಶುಭ ಸಂದರ್ಭಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ತಂಜಾವೂರು ಶೈಲಿ ಚಿತ್ರಕಲೆ, ರುದ್ರಾಕ್ಷಿಗಳು, ಜಾತಕ ಸೇರಿದಂತೆ ಎಲ್ಲವನ್ನು ಆನ್ ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಅಂಗಡಿ ಮಾಲೀಕರು ಹೇಳಿದರು.

Basavanagudi Satish Stores goes online

ಇ-ಶಾಪಿಂಗ್: ಆನ್ ಲೈನ್ ನಲ್ಲಿ ತಮ್ಮ ಮಳಿಗೆಯ ಉತ್ಪನ್ನಗಳ ಬಗ್ಗೆ ಮಾಹಿತಿಯಷ್ಟೇ ನೀಡಿಲ್ಲ. ಗ್ರಾಹಕರು ಇ ಶಾಪಿಂಗ್ ಕೂಡಾ ಮಾಡಬಹುದು. ನೀವು ಆನ್ ಲೈನ್ ಮೂಲಕ ಖರೀದಿಸಿ ವಸ್ತುಗಳು ನಿಮ್ಮ ಮನೆಗೆ ತಲುಪಿಸುತ್ತಾರೆ. ಸದ್ಯಕ್ಕೆ ಹೋಂ ಡೆಲಿವರಿ ಸೌಲಭ್ಯ ಸ್ವಲ್ಪ ವಿಳಂಬವಾಗಿದ್ದು 2 ದಿನದೊಳಗೆ ನಿಮ್ಮ ವಸ್ತು ನಿಮ್ಮ ಕೈ ಸೇರಲಿದೆ. [ಭಾರತದ ಇ ಕಾಮರ್ಸ್ ಕ್ಷೇತ್ರಕ್ಕೆ ಬೃಹತ್ ಬಂಡವಾಳ]

ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಪೂಜಾ ವಸ್ತುಗಳು ಇನ್ನಿತರ ವಸ್ತುಗಳನ್ನು ಆನ್ ಲೈನ್ ಮೂಲಕ ಖರೀದಿಸಬಹುದು. ಎಳ್ಳು ಬೆಲ್ಲ ರೆಡಿಮೇಟ್ ಮಿಸ್ಕ್ ಬೆಲೆ ಕೆಜಿಗೆ 250 ರು ಇದೆ ರೇಟ್ ಸ್ವಲ್ಪ ಜಾಸ್ತಿ ಎನಿಸಿದರೂ ಮನೆಯಲ್ಲೇ ಕುಳಿತು ಆರ್ಡರ್ ಮಾಡಿ ಪಡೆದುಕೊಳ್ಳಬಹುದು.

Satish Stores

ವೆಬ್ ಸೈಟ್ ವಿಳಾಸ: http://satishstores.com/ ಹಾಗೂ http://satishstoresonline.com/online/
ವಿಳಾಸ: ಸತೀಶ್ ಸ್ಟೋರ್ಸ್ (ಫೇಸ್ ಬುಕ್ ಪುಟ ಇಲ್ಲಿದೆ)
#2, ಡಿ.ವಿ.ಜಿ ರಸ್ತೆ
ಗಾಂಧಿ ಬಜಾರ್
ಬೆಂಗಳೂರು-560 004
ಸಂಪರ್ಕ ಸಂಖ್ಯೆ: 90085 55999
ಹೋಂ ಡೆಲಿವರಿ : +91-80-2660 0405

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+