ಆರ್‌ಬಿಐಗೆ ನಕಲಿ ನೋಟು ತುಂಬಿದ ಬ್ಯಾಂಕುಗಳು, ಅಧಿಕಾರಿಗಳು ತಬ್ಬಿಬ್ಬು!

ಬೆಂಗಳೂರು, ಆಗಸ್ಟ್ 24: ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸುಮಾರು ಎಂಟು ಲಕ್ಷ ನಕಲಿ ನೋಟುಗಳನ್ನು ಜಮಾ ಆಗಿರುವ ಕುರಿತು ಹಲಸೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಒಂದು ಸಾವಿರ ರೂ. ನೋಟುಗಳು ಹಾಗೂ ಐನೂರು ರೂ ಮುಖಬೆಲೆ 8,54,500 ರೂ ಮೌಲ್ಯದ ನಕಲಿ ನೋಟುಗಳು ಜಮಾ ಆಗಿದೆ. ಆರ್‌ಬಿಐ ವಿತರಣೆ ವಿಭಾಗದ ವ್ಯವಸ್ಥಾಪಕರು ಆ.22ರಂದು ಪ್ರಕರಣ ದಾಖಲಿಸಿದ್ದಾರೆ.

2017ರ ಅ.1ರಿಂದ 2017ರ ಡಿ.31ರವರೆಗೆ ಬ್ಯಾಂಕ್‌ ಆಫ್‌ ಬರೋಡಾ ಹಾಗೂ ಇತರೆ ಇಪ್ಪತ್ತೈದು ಬ್ಯಾಂಕ್ ಗಳ ಕರೆನ್ಸಿ ಚೆಸ್ಟ್ ಶಾಖೆಗಳಿಂದ ಆರ್ ಬಿಐಗೆ ಜಮಾ ಆಗಿರುವ ರದ್ದಾದ ಹಳೇ ಒಟ್ಟು ನೋಟುಗಳ ಪೈಕಿ ಒಂದು ಸಾವಿರ ರೂ ಮುಖಬೆಲೆಯ 467 ಖೋಟಾ ನೋಟುಗಳು ಹಾಗೂ ಐದುನೂರು ರೂ.ಮುಖಬೆಲೆಯ 775 ಖೋಟಾ ನೋಟುಗಳು ಒಟ್ಟು 8,54,500 ರೂ ಮೌಲ್ಯದ 1242 ಖೋಟಾ ನೋಟುಗಳು ಪತ್ತೆಯಾಗಿವೆ.

Banks remitted fake currency in RBI

ಈ ನೋಟುಗಳನ್ನು ತಯಾರಿಸಿರುವ ಮತ್ತು ಚಲಾವಣೆ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸುವಂತೆ ವ್ಯವಸ್ಥಾಪಕರಾದ ಉಷಾ ನಂಬೀಷನ್ ದೂರಿನಲ್ಲಿ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಇದೇ ರೀತಿ ಲಕ್ಷಾಂತರ ರೂ, ಮೌಲ್ಯದ ನೋಟುಗಳು ಜಮಾ ಆಗಿರುವ ಕುರಿತು ಆರ್‌ಬಿಐ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2017ರಲ್ಲಿ ಜಮಾ ಆಗಿರುವ ನೋಟುಗಳ ಬಗ್ಗೆ ಈಗ ದೂರು ನೀಡಿರಲು ಕಾರಣವೇನು ಎನ್ನುವುದರ ಕುರಿತು ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+