ರೌಡಿ ಶೀಟರ್‌ ಹತ್ಯೆ: ಆರೋಪಿಯನ್ನು ಬಂಧಿಸಿದ ಆನೇಕಲ್‌ ಪೊಲೀಸರು

ಬೆಂಗಳೂರು ಜುಲೈ31: ನಗರದಲ್ಲಿ ರೌಡಿ ಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆನೇಕಲ್‌ನ ಮಾಯಸಂದ್ರ ಲೇಔಟ್‌ ಬಳಿ ರೌಡಿಶೀಟರ್ ಜಯಂತ್‌ನನ್ನು ಅಪಹರಿಸಿ ಬಿಯರ್‌ ಬಾಟಲಿಯಿಂದ ಸುಮಾರು 50 ಕಡೆ ಚುಚ್ಚಿ ಹತ್ಯೆ ಮಾಡಲಾಗಿತ್ತು.

ಸುನಿಲ್‌ ಆರೋಪಿ, ತಲೆ ಮರೆಸಿಕೊಂಡಿದ್ದನು, ನಂತರ ಅತ್ತಿಬೆಲೆ ಪೊಲೀಸರು 29 ದಿನಗಳ ನಂತರ ಹೊಸಕೋಟೆ ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜುಲೈ 1 ರಂದು ಜಯಂತ್ ನನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಹಳ್ಳಿ ಬಳಿಯ ಲೇಔಟ್ ನಲ್ಲಿ ಈ ಹತ್ಯೆ ಮಾಡಲಾಗಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೆರಟಿಗನಬೆಲೆಯ ನೀಲಗಿರಿ ತೋಪಿನಲ್ಲಿ ಜಯಂತ್ ಮೃತ ದೇಹವನ್ನು ಎಸೆದು ಹೋಗಿದ್ದರು.

Bangaluru rural police arrest accused of rowdy sheeter murder case

ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳಾದ ಲೋಕೇಶ್ ಹಾಗೂ ಪ್ರವೀಣ್ ನನ್ನು ಕೆಲದಿನಗಳ ಹಿಂದಷ್ಟೇ ಬಂಧಿಸಿಲಾಗಿದೆ. ಈ ಪ್ರಕರಣದಲ್ಲಿ ಇನ್ನು ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯು ರೌಡಿಶೀಟರ್ ಆಗಿದ್ದು, ರೌಡಿಸಂನಲ್ಲಿ ಗುರುತಿಸಿಕೊಳ್ಳಲು ಹಾಗೂ ರಿಯಲ್ ಎಸ್ಟೇಟಿನಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸುವ ಸಲುವಾಗಿ ಕೊಲೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಶಿವಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+