ಬೆಂಗಳೂರು ಟ್ರಾಫಿಕ್ ನ ವಿರಾಟ ರೂಪ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಬೆಂಗಳೂರು, ನವೆಂಬರ್ 04: ಗೂಗಲ್ ಮ್ಯಾಪ್ ನ ನೀಲಿ ಗೆರೆ ಇದ್ದಕ್ಕಿದ್ದಂತೆ ಕೆಂಪಾಗಿ ಹನುಮಂತನ ಬಾಲದಂತೆ ಮುಂದುವರಿಯುತ್ತಲೇ ಇದ್ದರೆ ಸಂಧಿಗೊಂದಿಗಳ ದಾರಿ ಹುಡುಕಿಕೊಂಡು ಹೋಗಬೇಕಾದ ತಲೆಬಿಸಿ ವಾಹನ ಚಾಲಕರಿಗೆ. ಆದರೆ ಮುಖ್ಯ ರಸ್ತೆಯಲ್ಲಿ ವಾಹನಗಳು ಕೊನೆಯೇ ಇಲ್ಲದಂತೆ ಸಾಲುಗಟ್ಟಿ ನಿಂತಿರುವಾಗ ಅಡ್ಡ ದಾರಿ ಹುಡುಕಿಕೊಂಡು ಹೋಗುವುದಾದರೂ ಎಲ್ಲಿಗೆ? ಗಂಟೆಗಟ್ಟಲೆ ರಸ್ತೆಪಾಲಾಗಿ ನಿಂತಲ್ಲೇ ನಿಲ್ಲಿವ ಈ ಸ್ಥಿತಿ ಬೆಂಗಳೂರು ಟ್ರಾಫಿಕ್ ನ ವಿರಾಟ ರೂಪ!

ನವೆಂಬರ್ 01, ಶ್ರುಕ್ರವಾರ ಸರ್ಕಾರಿ ರಜಾ, ಕೆಲವು ಕಂಪೆನಿಗಳಿಗೆ ಶನಿವಾರ, ಭಾನುವಾರ ಎರಡೂ ದಿನ ರಜೆ ಇದ್ದಿದ್ದರಿಂದ ಸೋಮವಾರ ಬೆಳಿಗ್ಗೆ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳು ಟ್ರಾಫಿಕ್ ನ ವಿರಾಟರೂಪ ದರ್ಶನ ಪಡೆದವು!

ಟ್ರಾಫಿಕ್ ನಲ್ಲಿ ಗಂಟೆಗಟ್ಟಲೆ ನಿಮತಿದ್ದ ಜನರು ಕಾಲಹರಣಕ್ಕೆ ದಾರಿ ಕಾಣದೆ ಟ್ವಿಟ್ಟರ್ ನಲ್ಲಿ ಟ್ರಾಫಿಕ್ ಅನ್ನೇ ಹಾಸ್ಯಕ್ಕೆಳೆದರು. ಆ ಕಾರಣದಿಂದಲೇ ಬೆಂಗಳೂರು ಟ್ರಾಫಿಕ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಯಿತು.

ಕಾರಿನಲ್ಲಿ 44 ನಿಮಿಷ, ನಡೆದು ಹೋದರೆ 42 ನಿಮಿಷ

ಬ್ರಿಗೆಡ್ ಮೆಟ್ರೊಪೊಲಿಸ್ ನಿಂದ ಕೆ ಆರ್ ಪುರಂ ರೈಲ್ವೇ ಸ್ಟೇಶನ್ನಿಗೆ ತಲುಪಲು ಗೂಗಲ್ ಮ್ಯಾಪ್ಸ್ಸ ತೋರಿಸುತ್ತಿರುವ ಸಮಯ ಕಾರಿನಲ್ಲಿ ಹೋದರೆ 44 ನಿಮಿಷ, ನಡೆದು ಹೋದರೆ 42 ನಿಮಿಷ! ಇದು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ ಪವನ್

ಟ್ರಾಫಿಕ್ ನಿಯಂತ್ರಣಕ್ಕೆ ಆಡ್, ಈವನ್!

ಟ್ವಿಟ್ಟರ್ ನಲ್ಲಿ ಬೆಂಗಳೂರು ಟತ್ರಅಫಿಕ್ ಜೊತೆ, ಆಡದ್, ಈವನ್ ಸಹ ಟ್ರೆಂಡಿಗ್ ಆಗಿದೆ. ಅಂದರೆ ಬೆಂಗಳೂರು ಟ್ರಾಫಿಕ್ಕಿಗೆ ಆಡ್, ಈವನ್ ಪರಿಹಾರ ಎಂದು ಟ್ವಿಟ್ಟರ್ ಸಲಹೆ ನೀಡುತ್ತಿದೆಯೇ? ಎಂದು ಮಯಾಂಕ್ ಎಂಬುವವರು ಕೇಳಿದ್ದಾರೆ.

ಮಹಾಬಲಿಪುರಂ ಬಂಡೆ ಮತ್ತು ಬೆಂಗಳೂರು ಟ್ರಾಫಿಕ್

ಮಹಾಬಲಿಪುರಂನ ಬಂಡೆ, ಅಥವಾ ಕೃಷ್ಣನ ಬೆಣ್ಣೆ ಎಂದು ಕರೆಯಲ್ಪಡುವ ಕಲ್ಲು ಮತ್ತು ಬೆಂಗಳೂರು ಟ್ರಾಫಿಕ್ ಎರಡೂ ಒಂದೆ. ಏಕೆಂದರೆ ಎರಡೂ ಮುಂದಕ್ಕೆ ಚಲಿಸುವುದಿಲ್ಲ! ಎಮದು ಕಿಚಾಯಿಸಿದ್ದಾರೆ ತಿರುವಳ್ಳುವನ್

ನಡೆದು ಹೋಗುವುದೇ ಉತ್ತಮ

ಬೆಳಿಗ್ಗೆ 8:00 ಗಂಟೆ. ನಾಲ್ಕು ಕಿಮೀ ನಡ್ಯೋಕೆ ಅರ್ಧ ಗಂಟೆ ಸಾಕು. ರಾತ್ರಿ 8:00 ಗಂಟೆ, ಅಷ್ಟೇ ದೂರ ಹೋಗೋಕೆ ದ್ವಿಚಕ್ರ ವಾಹನದಲ್ಲಿ ಹೋಗೋಕೆ 75 ನಿಮಿಷ ಬೇಕು ಇದು ಬೆಂಗಳೂರು ಟ್ರಾಫಿಕ್ ಎಂದಿದ್ದಾರೆ ಭಾವೇಶ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+