ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರ ಮೇಲೆ ಶೇ 2ರಷ್ಟು ಸಾರಿಗೆ ಕರ

|
Google Oneindia Kannada News

ಬೆಂಗಳೂರು, ಮೇ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಕರದ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕಲು ಚಿಂತನೆ ನಡೆಸುತ್ತಿದೆ. ಸಾರಿಗೆ ಕರ ವಸೂಲಿಗೆ ಪಾಲಿಗೆ ಕೌನ್ಸಿಲ್ ಸಭೆ ಒಪ್ಪಿಗೆ ನೀಡಿದರೆ, ನೀವು ಆಸ್ತಿ ತೆರಿಗೆ ಕಟ್ಟುವಾಗ ಶೇ 2ರಷ್ಟು ಸಾರಿಗೆ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ.

ಕಳೆದ ಡಿಸೆಂಬರ್ 23ರಂದು ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿ ಸಾರಿಗೆ ಕರವನ್ನು ವಸೂಲಿ ಮಾಡುವ ಕುರಿತು ನಿರ್ಣಯವನ್ನು ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿತ್ತು. ಸದ್ಯ ಸರ್ಕಾರ ಸಹ ಕರವನ್ನು ವಸೂಲಿ ಮಾಡಲು ಹಸಿರು ನಿಶಾನೆ ತೋರಿಸಿದ್ದು, ಪಾಲಿಗೆ ಕೌನ್ಸಿಲ್ ಸಭೆಯ ಒಪ್ಪಿಗೆ ಮಾತ್ರ ಮಾತ್ರ ಬಾಕಿ ಇದೆ.

bbmp

ಮೇ 28ರಂದು ಬಿಬಿಎಂಪಿ ಕೌನ್ಸಿಲ್ ಸಭೆ ನಡೆಯಲಿದ್ದು, ಅಂದು ಸಾರಿಗೆ ಕರ ವಸೂಲಿ ಮಾಡುವ ಕುರಿತು ಚರ್ಚೆಗಳು ನಡೆಯಲಿವೆ. ಒಂದು ವೇಳೆ ಸಭೆ ಒಪ್ಪಿಗೆ ನೀಡಿದರೆ, ಈ ವರ್ಷದಿಂದಲೇ ನೀವು ಆಸ್ತಿ ತೆರಿಗೆ ಜೊತೆ ಶೇ 2ರಷ್ಟು ಸಾರಿಗೆ ಕರವನ್ನು ಪಾವತಿ ಮಾಡಬೇಕಾಗುತ್ತದೆ. [ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?]

ಕಸ, ಆರೋಗ್ಯ, ಶಿಕ್ಷಣ ಎಂದು ಶೇ 24ರಷ್ಟು ತೆರಿಗೆ ಪಾವತಿ ಮಾಡುವ ಬೆಂಗಳೂರಿನ ಜನರು ಇನ್ನುಮುಂದೆ ಶೇ 2ರಷ್ಟು ಸಾರಿಗೆ ಕರವನ್ನು ವಸೂಲಿ ಕಟ್ಟಬೇಕಾಗುತ್ತದೆ. ಒಂದು ವೇಳೆ ಈ ತೆರಿಗೆ ಪದ್ಧತಿ ಜಾರಿಗೆ ಬಂದರೆ, ಈಗಾಗಲೇ ಆಸ್ತಿ ತೆರಿಗೆ ಪಾವತಿ ಮಾಡಿದವರಿಂದಲೂ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಈಗಾಗಲೇ ಆಸ್ತಿ ತೆರಿಗೆ ಮಾಡಿರುವ ಜನರಿಗೆ ಪೂರಕ ಬೇಡಿಕೆ ಸಲ್ಲಿಸಿ ಸಾರಿಗೆ ಕರ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದ್ದು, ಖಾಲಿಯಾಗಿರುವ ಪಾಲಿಕೆ ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿದೆ. ಪಾಲಿಕೆ ಈ ಕ್ರಮಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.

English summary
Bangalore vehicle owners may have to shell out money to use roads. Bruhat Bengaluru Mahanagara Palike (BBMP) is set to introduce vehicle tax in Bangalore soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X