ಬೆಂಗಳೂರಿಗರಿಗೆ ಸಲ್ಲೂ, ಸನ್ನಿ, ಕೈಫ್ ಅಚ್ಚು ಮೆಚ್ಚು
ಬೆಂಗಳೂರು, ಡಿ.20: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಮೂಲಕ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ 'ಭಾರತೀಯ ರಾಜಕಾರಣಿ' ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಗೂಗಲ್ Zietgeist 2013ರ ವರದಿ ನೀಡಿದ ಬೆನ್ನಲ್ಲೇ ಬೆಂಗಳೂರಿಗರಿಗೆ ಯಾರು ಅಚ್ಚುಮೆಚ್ಚು ಎಂಬ ಮಾಹಿತಿ ಹೊರಹಾಕಲಾಗಿದೆ.
'ಸುದ್ದಿ (News Events) ವಿಭಾಗದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಸುದ್ದಿ ಹೆಚ್ಚು ಬಾರಿ ಶೋಧ ಮಾಡಲ್ಪಟ್ಟಿದ್ದು, ಕರ್ನಾಟಕದ ರಾಹುಲ್ ದ್ರಾವಿಡ್ .ವಿಜಯ್ ಮಲ್ಯ ಕೂಡಾ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. [ಪೂರ್ಣಪಟ್ಟಿ ಇಲ್ಲಿ ನೋಡಿ]

ಈಗ ಸೆಲೆಬ್ರಿಟಿಗಳ ಸರ್ಚ್ ಪೈಕಿ ಸಲ್ಮಾನ್ ಖಾನ್ ಹೆಚ್ಚು ಬಾರಿ ಸರ್ಚ್ ಆಗಿದ್ದರೆ ನಂತರದ ಸ್ಥಾನದಲ್ಲಿ ಸನ್ನಿ ಲಿಯೋನ್, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಹಾಗೂ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದಾರೆ. ಕುತೂಹಲದ ಅಂಶವೆಂದರೆ ಗೂಗಲ್ ಮೂಲಕ ಸರ್ಚ್ ಮಾಡಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ಕನ್ನಡ ಚಿತ್ರರಂಗದ ಯಾವೊಬ್ಬ ನಟ, ನಟಿ ಕೂಡಾ ಕಾಣಿಸಿಕೊಂಡಿಲ್ಲ.
ಇದರ ಜತೆಗೆ ವಿದ್ಯಾ ಸಂಸ್ಥೆ, ಶಾಲೆ ಕಾಲೇಜುಗಳ ಪೈಕಿ ಬೆಂಗಳೂರು ವಿಶ್ವವಿದ್ಯಾಲಯ ಅಗ್ರಸ್ಥಾನ ಪಡೆದಿದೆ. ವಿಶ್ವವಿದ್ಯಾಲಯಗಳ ಪೈಕಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಟಾಪ್ ಪಟ್ಟಿ: ಬೆಂಗಳೂರು ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯ, ಸತ್ಯಂ ಸಿನಿಮಾಸ್, ಮೈಸೂರು ವಿಶ್ವವಿದ್ಯಾಲಯ, ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯ, ಎಜಿಸ್ ಸಿನಿಮಾಸ್, ಸಿನಿಪೊಲೀಸ್ ಬೆಂಗಳೂರು, ಫನ್ ಸಿನಿಮಾಸ್
ವಿದ್ಯಾಸಂಸ್ಥೆ: ಬೆಂಗಳೂರು ವಿಶ್ವವಿದ್ಯಾಲಯ, ಕ್ಯಾಲಿಕಟ್ ವಿಶ್ವವಿದ್ಯಾಲಯ, ಅಣ್ಣಾ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕ್ರೈಸ್ಟ್ ವಿಶ್ವವಿದ್ಯಾಲಯ, ಮಣಿಪಾಲ್ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಕೇರಳ ವಿಶ್ವವಿದ್ಯಾಲಯ
ಟಾಪ್ ವ್ಯಕ್ತಿಗಳು: ಸಲ್ಮಾನ್ ಖಾನ್, ಸನ್ನಿ ಲಿಯೋನ್, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ, ಸಚಿನ್ ತೆಂಡೂಲ್ಕರ್, ಐಶ್ವರ್ಯಾ ರೈ, ನರೇಂದ್ರ ಮೋದಿ, ಶಾರುಖ್ ಖಾನ್, ಪ್ರಿಯಾಂಕಾ ಛೋಪ್ರಾ, ಪೂನಂ ಪಾಂಡೆ, ಕಾಜಲ್ ಅಗರವಾಲ್, ಮಿಲ್ಕಾ ಸಿಂಗ್, ಮಹೇಶ್ ಬಾಬು, ಕರೀನಾ ಕಪೂರ್












Click it and Unblock the Notifications