ಪಾಪಿಗಳು, ಬೀದಿಯಲ್ಲಿ ಬೆಂಕಿ ಹಚ್ಚಿ ಮಹಿಳೆಯ ಕೊಂದ್ರು

Bangalore young Woman Ravikala thrashed burnt alive by neighbours
ಬೆಂಗಳೂರು, ಅ.26: ಅದು ನೆರೆಹೊರೆಯ ಹೆಂಗಸರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ. ಆದರೆ ಪರಿಣಾಂ ಘನಘೋರ. ಮಾನವತೆಯನ್ನು ಬೀದಿಯಲ್ಲಿ ಹಾಕಿ ಸುಟ್ಟ ದುರುಳರು ಯುವತಿಯೊಬ್ಬರನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಇಡೀ ಸಮಾಜ ತಲೆತಗ್ಗಿಸುವಂತಹ ಈ ದಾರುಣ ಘಟನೆ ಸೋಲದೇವನಹಳ್ಳಿ ಜನತಾ ಕಾಲೋನಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ದೊಡ್ಡ ಬೇಲೆಕೆರೆ ಜನತಾ ಕಾಲೋನಿ ನಿವಾಸಿ ರವಿಕಲಾ (26) ಕೊಲೆಯಾದವರು. ಇವರನ್ನು ಪಕ್ಕದ ಮನೆಯ ಮುನಿತಾಯಮ್ಮ ಅವರ ಮಕ್ಕಳಾದ ಮಂಜ, ಮುರುಳಿ ಹಾಗೂ ರೂಪಾ ಎಂಬವುವರು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಅಷ್ಟಕ್ಕೇ ಈ ದುರುಳರು ಪೈಶಾಚಿಕ ಕೃತ್ಯ ಮುಗಿಸಿಲ್ಲ. ಜಗಳ ಬಿಡಿಸಲು ಬಂದ ರವಿಕಲಾ ಸಹೋದರ ರವಿಕುಮಾರ್ ಎಂಬಾತನ ಮೇಲೆಯೂ ಹಲ್ಲೆ ನಡೆಸಿದ್ದು ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಏನಾಯ್ತು?: ರವಿಕಲಾ ಅವರು ಎಂಎಸ್ ರಾಮಯ್ಯ ಇನ್ಸ್‌ ಟಿಟ್ಯೂಟ್‌ ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಪತಿ ನರಸಿಂಹಮೂರ್ತಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ದಂಪತಿ ಇಬ್ಬರು ಮಕ್ಕಳೊಂದಿಗೆ ಕಳೆದ ಕೆಲ ವರ್ಷಗಳಿಂದ ಜನತಾ ಕಾಲೋನಿಯಲ್ಲಿ ನೆಮ್ಮದಿಯಾಗಿ ವಾಸಿಸುತ್ತಿದ್ದರು.

ಇವರ ಮನೆ ಪಕ್ಕದಲ್ಲಿಯೇ ಮುನಿತಾಯಮ್ಮ ಎಂಬುವವರು ವಾಸಿಸುತ್ತಿದ್ದರು. ಇವರ ಮನೆ ಎದುರುಗಡೆಯೂ ಸಾಕಷ್ಟು ಮನೆಗಳಿವೆ. ಹೀಗಾಗಿ ಮನೆಗಳ ಮಧ್ಯದಲ್ಲಿ ಇರುವ ಎಲ್ಲರೂ ಓಡಾಡುವ ಜಾಗದಲ್ಲಿ ರವಿಕಲಾ ಅವರು ಬಟ್ಟೆ ಒಣಗಿಸಲು ಸಣ್ಣ ತಂತಿ ಕಟ್ಟಿಕೊಂಡಿದ್ದರು.

ಈ ವಿಚಾರವಾಗಿ ಮುನಿತಾಯಮ್ಮ ಅವರು ರವಿಕಲಾ ಅವರೊಂದಿಗೆ ಜಗಳ ಮಾಡಿದ್ದರು. ಜನಗಳು ಓಡಾಡಲು ಇರುವ ಈ ಜಾಗದಲ್ಲಿ ಬಟ್ಟೆ ಒಣ ಹಾಕುವುದರಿಂದ ಓಡಾಡುವ ಜನರಿಗೆ ತೊಂದರೆ ಆಗುತ್ತದೆ. ಹಾಗಾಗಿ ಹಗ್ಗವನ್ನು ಬೇರೆ ಕಡೆ ಕಟ್ಟಿಕೊಳ್ಳಿ ಎಂದು ಹೇಳಿದ್ದರು. ಈ ವಿಚಾರವಾಗಿ ಇವರ ನಡುವೆ ಆಗಾಗ ಜಗಳಗಳು ಸಂಭವಿಸುತ್ತಿದ್ದವು.

ಗುರುವಾರ ರಾತ್ರಿಯೂ ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ತಲೆದೂರಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಮುನಿತಾಯಮ್ಮನ ಮಕ್ಕಳಾದ ಮಂಜ ಹಾಗೂ ಮುರುಳಿ ಎಂಬುವವರು ರವಿಕಲಾ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಬಿಡಿಸಲು ಬಂದ ರವಿಕಲಾ ಅವರ ಸಹೋದರ ರವಿಕುಮಾರ್ ಮೇಲೆಯೂ ಹಲ್ಲೆ ನಡೆಸಿದ್ದಾರೆ.

ಸರಿಯಾಗಿ ಅದೇ ವೇಳೆ, ಹಲ್ಲೆಯಿಂದ ಕೆಳಗೆ ಬಿದ್ದಿದ್ದ ರವಿಕಲಾ ಮೇಲೆ ಮುನಿತಾಯಮ್ಮ ಅವರ ಮಗಳಾದ ರೂಪಾ ಮನೆಯಲ್ಲಿಟ್ಟಿದ್ದ ಸೀಮೆ ಎಣ್ಣೆ ತಂದು ಸುರಿದುಬಿಟ್ಟಿದ್ದಾಳೆ. ಸಾಲದು ಅಂತ ಬೆಂಕಿಕಟ್ಟಿಯನ್ನೂ ಗೀರಿದ್ದಾಳೆ. ಓಣಿಯ ಜನ ನೋಡನೋಡುತ್ತಿದ್ದಂತೆ ದಗದಗನೆ ಉರಿದ ರವಿಕಲಾ, ತೀವ್ರ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನಾ ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ಸಂದೀಪ್‌ ಪಾಟೀಲ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

ಪತಿ, ಮಕ್ಕಳು ಮನೆಯಲ್ಲಿರಲಿಲ್ಲ: ಮುನಿತಾಯಮ್ಮ ಮತ್ತು ರವಿಕಲಾ ನಡುವೆ ಗಲಾಟೆಯಾದ ಸಂದರ್ಭದಲ್ಲಿ ಹತ್ಯೆಗೀಡಾದ ರವಿಕಲಾ ಪತಿ ಹಾಗೂ ಮಕ್ಕಳು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜನತಾ ಕಾಲೋನಿಯ ತಮ್ಮ ನಿವಾಸದ ಹತ್ತಿರದಲ್ಲಿರುವ ಅಜ್ಜಿ ಮನೆಗೆ ಆಕೆ ಮಕ್ಕಳು ಹೋಗಿದ್ದರೆ, ಪತಿ ನರಸಿಂಹಮೂರ್ತಿ ಕೆಲಸದ ನಿಮಿತ್ತ ಹೊರಹೋಗಿದ್ದರು. ಈ ಘಟನೆಯಲ್ಲಿ ಮನೆ ಪೀಠೊಪಕರಣಗಳು ಕೂಡ ಬೆಂಕಿಗೆ ಆಹುತಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+