ರಾಜ್ಯದಲ್ಲಿ ಜೂ.16 ರಂದು ಪೆಟ್ರೋಲ್ ಬಂಕ್ ಬಂದ್?
ಬೆಂಗಳೂರು, ಜೂನ್ 10: ಪೆಟ್ರೋಲ್ ದರ ಪರಿಷ್ಕರಣೆ ವಿರೋಧಿಸಿ, ರಾಜ್ಯ ಪೆಟ್ರೋಲಿಯಂ ವಿತರಕರ ಒಕ್ಕೂಟ, ಜೂನ್ 16 ರಂದು ಬಂದ್ ಗೆ ಕರೆನೀಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ತಕ್ಕಂತೆ ಪ್ರತಿದಿನವೂ ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಒಕ್ಕೂಟ ಬಂದ್ ಗೆ ಕರೆನೀಡಿದೆ.

ಈ ಕಾರಣದಿಂದ ಜೂನ್ 15 ರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬಂಕ್ ಗಳು ಸ್ಥಗಿತವಾಗುವ ಸಾಧ್ಯತೆಯಿದೆ.












Click it and Unblock the Notifications