ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಒಂದೆರಡು ಎಟಿಎಂಗಳಷ್ಟೇ ಕಾನೂನುಬದ್ಧ!

By Srinath
|
Google Oneindia Kannada News

Bangalore Only one or two ATMs hold BBMP health wing trade licence
ಬೆಂಗಳೂರು, ನ.25: ಸೂಕ್ತ ಭದ್ರತೆಯಿಲ್ಲದ ಎಟಿಎಂಗಳಿಗೆ ನಗರ ಪೊಲೀಸರು ಒಂದು ಕಡೆಯಿಂದ ಬೀಗ ಹಾಕಿಕೊಂಡು ಬರುತ್ತಿದ್ದರೆ, ಇತ್ತ ಭದ್ರತೆ ಹಾಗಿರಲಿ ಅವು ಹಣಕಾಸು ವ್ಯವಹಾರ ನಡೆಸಲು ಕಾನೂನುಬದ್ಧವಾಗಿವೆಯಾ? ಎಂಬ ಪ್ರಶ್ನೆ ಮುಂದಿಟ್ಟುಕೊಂಡು ತಡಕಾಡಿದಾಗ ಕೇವಲ ಒಂದೆರಡು ATMಗಳು ಮಾತ್ರವೇ ವಹಿವಾಟು ನಡೆಸಲು ಯೋಗ್ಯವಾಗಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. (ಹುಷಾರು! ಬ್ಯಾಂಕುಗಳು SMSಗೆ ದುಡ್ಡು ಪೀಕುತ್ತಿವೆ)

ಹಾಗೆ ನೋಡಿದರೆ ನಗರದಲ್ಲಿ 2,580 ಸಕ್ರಿಯ ATMಗಳಿವೆ. ಇದರಲ್ಲಿ 1000ಕ್ಕೂ ಹೆಚ್ಚು ಎಟಿಎಂಗಳಿಗೆ ತಾತ್ಕಾಲಿವಾಗಿ ನಿನ್ನೆಯಿಂದ ಬೀಗ ಹಾಕಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ಎರಡನ್ನು ಬಿಟ್ಟು ಉಳಿದ ಯಾವುದೇ ಬ್ಯಾಂಕ್ ಎಟಿಎಂಗಳು ಅಗತ್ಯ ಲೈಸೆನ್ಸ್ ಪಡೆದಿಲ್ಲ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯಿದೆ- 1976ರ ಅನುಸಾರ ಹಣಕಾಸು ನಡೆಸುವ ATM ಕೇಂದ್ರಗಳು ಸ್ಥಳೀಯ ಆಡಳಿತ ಸಂಸ್ಥೆಗಳಿಂದ ವ್ಯಾಪಾರ ಅನುಮತಿ ಕೋರಿ ಲೈಸೆನ್ಸ್ ಪಡೆಯುವುದು ಕಡ್ಡಾಯ.

ಬೆಂಗಳೂರು ಮಟ್ಟಿಗೆ ಹೇಳುವುದಾದರೆ ಬ್ಯಾಂಕುಗಳು ಬಿಬಿಎಂಪಿಯಿಂದ ಇಂತಹ ಲೈಸೆನ್ಸ್ ಪಡೆಯಬೇಕು. ಆದರೆ ಅನೇಕ ಬ್ಯಾಂಕುಗಳು ಲೈಸೆನ್ಸ್ ಪಡೆಯಲು ಮುಂದೆಬಂದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಜಿಎಂ ವತ್ಸಲಾ ಹೇಳುತ್ತಾರೆ. ಬಿಬಿಎಂಪಿಯ ಆರೋಗ್ಯ ಘಟಕವು ATM ಲೈಸೆನ್ಸ್ ವಿತರಿಸುವ ಬಾಧ್ಯತೆ ಹೊಂದಿದೆ.

ಈಗಲೂ ಅಷ್ಟೇ ಪೊಲೀಸರಿಗಿಂತ ಹೆಚ್ಚಾಗಿ ಲೈಸೆನ್ಸ್ ಪಡೆಯದ ATM ಕೇಂದ್ರಗಳನ್ನು ಮುಚ್ಚುವ ಅಧಿಕಾರ BBMPಗೆ ಇದೆ. ಹಾಗಾಗಿ ಕಾರ್ಪೊರೇಶನ್ ಎಟಿಎಂನಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆದ ಪ್ರಕರಣದ ಬಳಿಕ ಎಲ್ಲ ಬ್ಯಾಂಕುಗಳಿಗೂ ಪತ್ರ ಬರೆದು ತಿಳಿಸುತ್ತಿದ್ದೇವೆ. ಬ್ಯಾಂಕುಗಳಿಗೆ ನೋಟಿಸ್ ಸಹ ನೀಡುತ್ತಿದ್ದೇವೆ. 10 ದಿನಗಳೊಳಗಾಗಿ ಎಲ್ಲವೂ ಸೂತ್ರಬದ್ಧವಾಗಲಿವೆ ಎಂದು ಬಿಬಿಎಂಪಿ ಸ್ಥಾಯಿಸಮಿತಿ (ಆರೋಗ್ಯ ಘಟಕ) ಅಧ್ಯಕ್ಷರು ತಿಳಿಸುತ್ತಾರೆ.

ಎಷ್ಟೂ ಬ್ಯಾಂಕುಗಳಿಗೆ BBMPಯಿಂದ ಲೈಸೆನ್ಸ್ ಪಡೆಯಬೇಕು ಎಂಬುದೂ ತಿಳಿದಿಲ್ಲ. RBIನಿಂದ ಲೈಸೆನ್ಸ್ ಪಡೆದರೆ ಸಾಕು ಎಂದು ಭಾವಿಸಿದ್ದೆವು. ಈಗ ಲೈಸೆನ್ಸ್ ಪಡೆದಿದ್ದೇವಾ. ಇಲ್ವಾ ಎಂಬುದನ್ನು ಪರಿಶೀಲಿಸಿ, ತಕ್ಷಣ BBMPಗೆ ಮೊರೆಹೋಗುತ್ತೇವೆ ಎಂದು ಸರಕಾರಿ ಬ್ಯಾಂಕೊಂದರ ವ್ಯವಸ್ಥಾಪಕ ನಿರ್ದೇಶಕರು ಹೇಳುತ್ತಾರೆ.

ಪಾಲಿಕೆಯದ್ದೂ ದಿವ್ಯ ನಿಲರ್ಕ್ಷ್ಯ: ಏನೇ ಆಗಲಿ ರಸ್ತೆ ಬದಿ ವ್ಯಾಪಾರ ಮಾಡುವವರನ್ನು ಒಕ್ಕಲೆಬ್ಬಸಿ, ಅವರಿಂದ ಹಣ ಪೀಕುವುದನ್ನೇ ಕಾಯಕವಾಗಿಸಿಕೊಂಡಿರುವ ಪೊಲೀಸರು ಮತ್ತು BBMPಯ ವಿವಿಧ ಘಟಕಗಳು ಬೃಹತ್ ಪ್ರಮಾಣದಲ್ಲಿ ಹಣಕಾಸು ವಹಿವಾಟು ನಡೆಸುವ ಬ್ಯಾಂಕ್ ಎಟಿಎಂಗಳು ಅಗತ್ಯ ಲೈಸೆನ್ಸ್ ಹೊಂದಿಲ್ಲದಿರುವುದನ್ನು ಗಣನೆಗೇ ತೆಗೆದುಕೊಳ್ಳದಿರುವುದು ನಿಜಕ್ಕೂ ದೊಡ್ಡ ಲೋಪವೇ ಸರಿ.

ಇನ್ನಾದರೂ ಎಲ್ಲ ಎಟಿಎಂಗಳನ್ನು ಒಂದೇ ಕಾನೂನಿನ ಸೂರಿನಡಿ ತಂದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಬ್ಯಾಂಕ್ ಮತ್ತು BBMP ಹೆಗಲಮೇಲಿದೆ.

English summary
According to media reports Bangalore has only one or two ATMs that hold BBMP health wing trade licence. Of the 2,580 ATMs in Bangalore, only two have trade licences despite the Karnataka municipal corporations Act, 1976, mandating that the civic authority should grant trade licences for ATM kiosks as they conduct financial transactions. However, as per records with the BBMP health wing, which issues trade licences, the rules are generally ignored. Neither has the Palike pushed for compliance from banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X