• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂ-ಬೆಂ ಕಾರಿಡಾರ್ ನಿಂದ 25 ಲಕ್ಷ ಉದ್ಯೋಗ

|

ಬೆಂಗಳೂರು, ನ. 13 : ಮಹತ್ವಾಕಾಂಕ್ಷೆಯ ಬೆಂಗಳೂರು ಮತ್ತು ಮುಂಬೈ ನಡುವಿನ ವಾಣಿಜ್ಯ ಕಾರಿಡಾರ್ ಯೋಜನೆಗೆ ಬುಧವಾರ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಈ ಯೋಜನೆಯಿಂದಾಗಿ ಸುಮಾರು 25 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದ್ದು, 2020 ರ ವೇಳೆಗೆ ದೇಶದ ಜಿಡಿಪಿಗೆ ಶೇ 12 ರಷ್ಟು ಕೊಡುಗೆ ನೀಡಲಿದೆ. ಎರಡೂ ಮಾರ್ಗಗಳ ಮಧ್ಯೆ ಸುಮಾರು ಮೂರು ಲಕ್ಷ ಕೋಟಿ ಬಂಡಾವಳ ಹೂಡಿಕೆಗೆ ಯೋಜನೆ ಸಹಕಾರಿಯಾಗಲಿದೆ.

ವಾಣಿಜ್ಯ ನಗರಿ ಮುಂಬೈ ಮತ್ತು ಐಟಿ ಸಿಟಿ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಈ ಕಾರಿಡಾರ್ ನಿರ್ಮಾಣಕ್ಕೆ ಬ್ರಿಟನ್ ಸಹಕಾರ ದೊರೆತಿದೆ. 25 ಲಕ್ಷ ಜನರಿಗೆ ಉದ್ಯೋಗ ಕೊಡುವ ಈ ಯೋಜನೆಯ ಜಾರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕೆಲವು ತಿಂಗಳ ಹಿಂದೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರು ಹೇಳಿದ್ದರು.

ಈ ಮಹತ್ವದ ಕಾರಡಾರ್ ಯೋಜನೆಯಿಂದ ದೇಶದ ಜಿಡಿಪಿಗೆ 2020ರ ವಳೇಗೆ ಶೇ 12ರಷ್ಟು ಕೊಡುಗೆ ನೀರಿಕ್ಷಿಸಲಾಗಿದೆ. ಈ ಮಾರ್ಗದಲ್ಲಿ ನಾಲ್ಕು ಮಹಾನಗರಗಳ ಅಭಿವೃದ್ಧಿಗೆ ಈ ಯೋಜನೆ ಸಹಾಯಕವಾಗಲಿದೆ. ಭಾರತ ಮತ್ತು ಬ್ರಿಟನ್ ಈ ಯೋಜನೆಯ ಕುರಿತು ಅಧ್ಯಯನ ನಡೆಸಿ ವರದಿ ತಯಾರಿಸಿವೆ. ಯೋಜನೆಯ ನೀಲನಕ್ಷೆ ತಯಾರಿಸಲು ಬುಧವಾರ ಸರ್ಕಾರ ಟೆಂಡರ್ ನೀಡಲಿದೆ.

ಮುಂಬೈ-ಬೆಂಗಳೂರು ನಡುವಿನ ಈ ವಾಣಿಜ್ಯ ಕಾರಿಡಾರ್ ಯೋಜನೆ ಸುಮಾರು 1000 ಕಿ.ಮೀ.ವ್ಯಾಪ್ತಿಯನ್ನು ಹೊಂದಿದೆ. ಈ ಯೋಜನೆಯ ಜಾರಿಯಿಂದ ಮಾರ್ಗದ ನಗರಗಳಲ್ಲಿ ಸುಮಾರು 25 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ಸಾರಿಗೆ ಸಂಪರ್ಕ, ದೂರ ಸಂಪರ್ಕ, ವಿದ್ಯುತ್ ಯೋಜನೆಯಂಥ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗುತ್ತದೆ.

ಈ ಕಾರಿಡಾರ್ ಯೋಜನೆ ಪೂರ್ಣಗೊಂಡ ನಂತರ ಕಾರಿಡಾರ್ ನಡುವೆ ಶೇ 5.8ರಷ್ಟು ಜನಸಂಖ್ಯೆ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಾರ್ಗದಲ್ಲಿನ ನಗರಗಳು ಯೋಜನೆಯಿಂದ ಅಭಿವೃದ್ಧಿ ಹೊಂದಲಿದೆ. ಕೇಂದ್ರ ಸರ್ಕಾರ ಯೋಜನೆಯ ನಕ್ಷೆ ತಯಾರಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಿದ್ದು, ಎರಡೂ ರಾಜ್ಯಗಳ ಅನುಮೋದನೆ ದೊರೆತ ಬಳಿ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಲಾಗುತ್ತದೆ. (ಬ್ರಿಟನ್ ಕೃಪೆ: ಬೆಂ-ಮುಂ ಮಾಯದಂಥ ಕಾರಿಡಾರ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The government is set to kick off preliminary work on Wednesday, November 13 on an economic corridor between Mumbai and Bangalore, aiming to generate investment of over Rs 3 lakh crore. Indian and the British governments have agreed to undertake a joint feasibility study. In the next stage, the government will on Wednesday seek bids for developing a perspective plan for the Bangalore Mumbai Economic Corridor Region. A million homes and 2.5 million jobs are proposed to be created along the corridor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more