ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ; ಎಲ್ಲ ರೈಲುಗಳೂ 6 ಬೋಗಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 3; ಬೆಂಗಳೂರಿನ 'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಎಲ್ಲ ಮೆಟ್ರೋ ರೈಲುಗಳು 6 ಬೋಗಿಗಳಾಗಿ ಇರಲಿವೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ತಿಳಿಸಿದೆ.

 ಮೆಟ್ರೋ ಆಯ್ತು ಈಗ ಬಿಎಂಟಿಸಿ ವಿರುದ್ಧ ಕನ್ನಡಿಗರ ಹೋರಾಟದ ಧ್ವನಿ ಮೆಟ್ರೋ ಆಯ್ತು ಈಗ ಬಿಎಂಟಿಸಿ ವಿರುದ್ಧ ಕನ್ನಡಿಗರ ಹೋರಾಟದ ಧ್ವನಿ

ಸದ್ಯ 50 ಮೆಟ್ರೋ ರೈಲುಗಳು ಬಿಎಂಆರ್‌ಸಿಎಲ್ ಬಳಿ ಇವೆ. ಇದರಲ್ಲಿ ಚಾಲ್ತಿಯಲ್ಲಿರುವ ಎಲ್ಲ 42 ರೈಲುಗಳು ಇನ್ಮುಂದೆ ಆರು ಕೋಚ್‌ಗಳ ರೈಲುಗಳಾಗಿವೆ. ಇವುಗಳ ಸಂಖ್ಯೆ ಈ ಮೊದಲು 34 ಆಗಿತ್ತು. ಇನ್ನುಳಿದ 8 ರೈಲುಗಳು ಫೆಬ್ರವರಿ ಅಂತ್ಯಕ್ಕೆ ಹಳಿಗಿಳಿಯಲಿವೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಬೆಂಗಳೂರು ಮೆಟ್ರೋದಲ್ಲಿ ಪ್ರತಿನಿತ್ಯ 4.75 ಲಕ್ಷ ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇನ್ಮುಂದೆ ಎಲ್ಲ ಆರು ಕೋಚ್‌ಗಳ ರೈಲುಗಳು ಪ್ರತಿದಿನ 137 ಸುತ್ತುಗಳನ್ನು ಪೂರೈಸಲಿವೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Bangalore Metro Increased 6 Compartment Trains

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವಲ್ಲಿ ಹೆಚ್ಚು ಸಹಾಯ ನೀಡುತ್ತಿರುವ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೆಟ್ರೋ ರೈಲು ಸಂಚಾರದ ಅವಧಿಯನ್ನು ರಾತ್ರಿ 11 ರಿಂದ 12 ಕ್ಕೆ ಹೆಚ್ಚಿಸಿ ಇತ್ತೀಚಿಗಷ್ಟೆ ಬಿಎಂಆರ್ಸಿಎಲ್ ಪ್ರಯಾಣಿಕ ಸ್ನೇಹಿ ಕ್ರಮ ಕೈಗೊಂಡಿತ್ತು.

English summary
Bangalore Metro Increased 6 Compartment Trains For All Line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X