• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎರಡು ದಿನದ ಸಾಹಿತ್ಯ ಹಬ್ಬಕ್ಕೆ ಬೆಂಗಳೂರು ಸಜ್ಜು

|
Google Oneindia Kannada News

ಬೆಂಗಳೂರು. ಸೆ. 6: ಮಹಾನಗರಿಯನ್ನು ಸೆಪ್ಟಂಬರ್‌ 26 ರಿಂದ ಸಾಹಿತ್ಯದ ಘಮ ಆವರಿಸಲಿದೆ. ಬೆಂಗಳೂರು ಸಾಹಿತ್ಯೋತ್ಸವದ ಮೂರನೇ ಆವೃತ್ತಿಗೆ ಎಲೆಕ್ಟ್ರಾನಿಕ್‌ ಸಿಟಿಯ ವೇಲಂಕಂಣಿ ಟೆಕ್‌ ಪಾರ್ಕ್‌ ಸಜ್ಜಾಗಿದೆ.

ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತ್ಯ ದಿಗ್ಗಜರು ಒಂದೆಡೆ ಸೇರಲಿದ್ದಾರೆ. ವಿಶ್ವದ ಹತ್ತಾರು ದೇಶಗಳ ಚಿಂತಕರು, ವಾಗ್ಮಿಗಳು, ಪ್ರಗತಿಪರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ದಿವಂಗತ ಸಾಹಿತಿ ಯು.ಆರ್‌.ಅನಂತಮೂರ್ತಿ ಅವರಿಗೆ ಅರ್ಪಿಸಲಾಗುವುದು ಎಂದು ಬೆಂಗಳೂರು ಲಿಟಟರಿ ಫೆಸ್ಟ್‌ ಸಹ ಸಂಪಾದಕ, ಲೇಖಕ ವಿಕ್ರಂ ಸಂಪತ್‌ ತಿಳಿಸಿದ್ದಾರೆ.

ಭಾಗವಹಿಸುವ ಪ್ರಮುಖರು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್‌ ಕಾರ್ನಾಡ್‌, ಹೆಸರಾಂತ ಪತ್ರಕರ್ತ ಅರುಣ್‌ ಶೌರಿ, ಲೀಲಾ ಸೇಠ್‌, ನಟವರ್‌ ಸಿಂಗ್‌, ಗುಲ್ಜಾರ್‌, ಚಂದ್ರಶೇಖರ ಕಂಬಾರ, ಸಂಜಯ್‌ ಬಾರು, ರಾಮಚಂದ್ರ ಗುಹಾ, ನಯನತಾರಾ ಸೆಹಗಾಲ್‌, ಚೇತನ್‌ ಭಗತ್‌, ಶೋಭಾ ಡೇ, ಪವನ್‌ ವರ್ಮಾ, ಜಾಣ್‌ ಎಲಿಯಟ್‌, ಸ್ಯಾಮ್‌ ಮಿಲ್ಲರ್‌, ಅಶೋಕ್‌ ವಾಜಪೇಯಿ, ನಿಲೇಶ್‌ ಮಿಶ್ರಾ ಸೇರಿದಂತೆ ದೇಶದ ಪ್ರಖ್ಯಾತ 150ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸಲಿದ್ದಾರೆ.

ಕನ್ನಡದ ಪ್ರತಿನಿಧಿಗಳು
ಎಚ್‌.ಎಸ್‌.ಶಿವಪ್ರಕಾಶ್‌, ಪ್ರತಿಭಾ ನಂದಕುಮಾರ್‌, ಬಂಜಗರೆ ಜಯಪ್ರಕಾಶ್‌, ಒ.ಎಲ್‌.ನಾಗಭೂಷಣ, ಕೆ.ಎಸ್‌.ಪವಿತ್ರಾ, ದಾಮೋದರ ಶೆಟ್ಟಿ, ತಾರಿಣಿ ಶೋಭದಾಯಿನಿ, ಬಿ,ಟಿ.ಜಾಹ್ನವಿ, ಅಬ್ದುಲ್‌ ರಷೀದ್‌ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಯಾವ ವಿಷಯಗಳ ಚೆರ್ಚೆ ನಡೆಯಲಿದೆ
ಪೂರ್ವ ಮತ್ತು ಈಶಾನ್ಯ ಭಾರತ ಎದುರಿಸುತ್ತಿರುವ ಸಮಸ್ಯೆಗಳು, ಮಹಿಳೆ, ಲಿಂಗ ತಾರತಮ್ಯ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ದಲಿತ ಬರಹಗಳು, ದಕ್ಷಿಣ ಭಾರತದ ಭಾಷೆಗಳ ಸ್ಥಿತಿಗತಿ ಮುಂತಾದ ವಿಚಾರಗಳ ಬಗ್ಗೆ ಗಹನವಾದ ಚರ್ಚೆ ನಡೆಯಲಿದೆ. ಒಟ್ಟಿನಲ್ಲಿ ಆಹಾರದಿಂದ ಹಿಡಿದು ರಾಜಕೀಯದವರೆಗಿನ ಸಂಗತಿಗಳು ವಿವಿಧ ಆಯಾಮದಲ್ಲಿ ಚರ್ಚಿತವಾಗಲಿವೆ.

ಪ್ರವೇಶ ಉಚಿತ, ಆದರೆ ಖಚಿತಪಡಿಸಿಕೊಳ್ಳಿ
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದರೂ ಅಂತರ್ಜಾಲ ತಾಣ http://bangaloreliteraturefestival.org ದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಫೇಸ್‌ಬುಕ್‌ ಅಥವಾ ಟ್ವಿಟ್ಟರ್‌ನಲ್ಲಿಯೂ (#BlrLitFest)ಹೆಸರು ದಾಖಲಿಸಿಕೊಳ್ಳಬಹುದು.

ಸೆಪ್ಟಂಬರ್‌ 26ರ ಕಾರ್ಯಕ್ರಮಗಳು
ಬೆಳಿಗ್ಗೆ 10 ರಿಂದ 11.30: ಉದ್ಘಾಟನೆ ಕಾರ್ಯಕ್ರಮ, ಸಾಹಿತಿಗಳಾದ ಗಿರೀಶ್‌ ಕಾರ್ನಾಡ್‌, ಚಂದ್ರಶೇಖರ ಕಂಬಾರ, ಚೇತನ್‌ ಭಗತ್, ಶೋಭಾ ಡೆ

ಬೆಳಿಗ್ಗೆ 11.30 ರಿಂದ 12.30: ಅಗಲಿದ ಸಾಹಿತಿ ಅನಂತಮೂರ್ತಿಗೆ ಸಾಹಿತ್ಯ ಅಕಾಡಮಿಯಿಂದ ಶ್ರದ್ಧಾಂಜಲಿ.

ಬೆಳಿಗ್ಗೆ 12.30 ರಿಂದ 1.30: ಯುವಕರು ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಕುರಿತು ಸಂವಾದ. ಅಂದ್ಲೀಬ್‌ ವಾಜೀದ್‌ ಅವರ 'ಬ್ಯಾಕ್ ಇನ್ ಟೈಮ್' ಮತ್ತು ಲಕ್ಷ್ಮೀ ದೇವಾನಾಥ್ ವಿರಚಿತ 'ಪೂರ್ವ' ಪುಸ್ತಕ ಬಿಡುಗಡೆ

ಮಧ್ಯಾಹ್ನ 1.30 ರಿಂದ 2.30: ಚೇತನ್‌ ಭಗತ್‌ ಅವರಿಂದ 'ಪ್ರಾಮ್ ಫುಲ್ ವೈವ್ಸ್‌ ಟು ಹಾಫ್ ಗರ್ಲ್‌ ಫ್ರೆಂಡ್' ಕುರಿತು ಸಂವಾದ.

ಮಧ್ಯಾಹ್ನ2.30 ರಿಂದ 3.30: ಅಲ್ಪಸಂಖ್ಯಾತರ ಸದ್ಯದ ಸ್ಥಿತಿಗತಿಗಳು, ಭಾರತದಲ್ಲಿ ಮಹಿಳೆಯರ ಸ್ಥತಿಗತಿ, ಕನ್ನಡ ಸಾಹಿತ್ಯದ ಹೊಸ ಬೆಳವಣಿಗೆಗಳು ಕುರಿತು ಸಂವಾದ.

ಮಧ್ಯಾಹ್ನ 3.30 ರಿಂದ 4.30: ಕನ್ನಡ ರಂಗಭೂಮಿ ಸ್ಥಿತಿ ಗತಿ, ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿ ಭಾರತದ ಬದಲಾವಣೆಗಳು ವಿಷಯದ ಕುರಿತು ಸಂವಾದ.

ಸಂಜೆ 5.30 ರಿಂದ 6.30: ಎಲ್ಲ ಕಡೆ ಇರುವ ಭಾಷೆ ಯಾವುದು? 'ಐಎಸ್ಐಎಸ್ ಮತ್ತು ವಿಶ್ವಕ್ಕೆ ಅಂಟಿದ ಭಯೋತ್ಪಾದನೆ ಭೂತ' ಸಂವಾದ.

ರಾತ್ರಿ 6.30 ರಿಂದ 8.30: ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ ಬಾಂಬೆ ಜಯಶ್ರೀ ರಾಮಾನಾಥ್ ಅವರಿಂದ ಶಾಸ್ತ್ರೀಯ ಸಂಗೀತ.

English summary
The Bangalore Literature Festival 2014, slated to be held between September 26 and 28, will be dedicated to litterateur UR Ananthamurthy, who passed away recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X