ಜಬ್ಬಾರ್ ಟ್ರಾವೆಲ್ಸ್ ಬಸ್ಸಿಗೆ ಬೆಂಕಿ: ಮೃತರ ಸಂಖ್ಯೆ 45
ಬೆಂಗಳೂರು, ಅ.30: ಜಬ್ಬಾರ್ ಟ್ರಾವೆಲ್ಸ್ ವೋಲ್ವೊ ಬಸ್ ಅಪಘಾತ ಪ್ರಕರಣದಲ್ಲಿ 45 ಮಂದಿ ಸುಟ್ಟುಕರಕಲಾಗಿದ್ದಾರೆ. 39 ಶವಗಳನ್ನು ಹೊರತೆಗೆಯಲಾಗಿದೆ. ಬಸ್ಸಿನಲ್ಲಿ ಒಟ್ಟು 52 ಮಂದಿ ಪ್ರಯಾಣಿಕರಿದ್ದರು. ಗಾಯಗೊಂಡ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಚಾಲಕ ಮುಂದಿನ ವಾಹನವನ್ನು ಓವರ್ ಟೇಕರ್ ಮಾಡುವ ಭರದಲ್ಲಿ ರೋಡ್ ಡಿವೈಡರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಘನಘೋರ ಬಸ್ ದುರಂತ ಇದಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು: ನಯಾಜ್ (ಕ್ಲೀನರ್), ಫಿರೋಜ್ ಷಾ (ಡ್ರೈವರ್), ಯೋಗೇಶ್ (ಬೆಂಗಳೂರು), ಶ್ರೀಕರ್ ರೆಡ್ಡಿ (ಹೈದರಾಬಾದ್), ರಾಜೇಶ್ (ಹೈದರಾಬಾದ್), ಜೈಸಿಂಗ್ (ಯುಪಿ) ಮತ್ತು ಮುಝಫರ್ (ಬೆಂಗಳೂರು).
ಹಿಂದಿನ ಸುದ್ದಿ: ನಿನ್ನೆ ರಾತ್ರಿ ಕಲಾಸಿಪಾಳ್ಯಂನಿಂದ ಹೈದರಾಬಾದಿಗೆ ಹೊರಟಿದ್ದ ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಯ ವೋಲ್ವೋ ಬಸ್ಸು ಇಂದು ಬೆಳಗಿನ ಜಾವ 5.20ರಲ್ಲಿ ಅಗ್ನಿಗೆ ಆಹುತಿಯಾಗಿ, ಸುಮಾರು 40 ಮಂದಿ ಸಜೀವ ದಹನಗೊಂಡಿರುವ ದುರ್ಘಟನೆ ನಡೆದಿದೆ. ಬಸ್ಸಿನಲ್ಲಿದ್ದವರು ಹೆಚ್ಚಾಗಿ ಬೆಂಗಳೂರಿನವರೇ ಆಗಿದ್ದಾರೆ.
ಇಂದು ಬುಧವಾರ ಬೆಳಗಿನ ಜಾವ ಈ ಘೋರ ಬಸ್ ದುರಂತ ಘಟಿಸಿದೆ. ಬೆಂಗಳೂರಿನಿಂದ ಹೊರಟಿದ್ದ ಖಾಸಗಿ ವೋಲ್ವೋ ಬಸ್, ಕರ್ನಾಟಕದ ಗಡಿ ದಾಟಿ ಹೈದರಾಬಾದ್ ಪಕ್ಕದ ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ಪಲ್ಲಂ ಗ್ರಾಮದ ಬಳಿ ಅಗ್ನಿಗೆ ಆಹುತಿಯಾಗಿದೆ. ಇನ್ನರ್ಧ ಗಂಟೆ ಬಸ್ ತನ್ನ ಸಂಚಾರ ಮುಗಿಸಿದ್ದಿದ್ದರೆ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ತಮ್ಮ ಗಮ್ಯ ತಲುಪಬಹುದಿತ್ತು. ಆದರೆ ಅಷ್ಟರಲ್ಲೇ ದುರಂತ ಸಂಭವಿಸಿದೆ.
ಆಂಧ್ರದ ಮೆಹಬೂಬ್ ನಗರ ಜಿಲ್ಲೆಯ ಪಲ್ಲಂ ಗ್ರಾಮದ ಬಳಿ ಈ ದಾರುಣ ಘಟನೆ ನಡೆದಿದೆ. ಬಸ್ಸಿನಲ್ಲಿ 52 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಡ್ರೈವರ್, ಕ್ಲೀನರ್ ಮತ್ತು ನಾಲ್ಕಾರು ಪ್ರಯಾಣಿಕರು ಮಾತ್ರ ಹೊತ್ತಿ ಉರಿಯುತ್ತಿದ್ದ ಬಸ್ಸಿನಿಂದ ಪಾರಾಗಿದ್ದಾರೆ. ತೀವ್ರವಾಗಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
'ಬಸ್ಸು ಪಲ್ಟಿಯಾಗಿ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎನ್ನಲಾಗಿದೆ. 40-45 ಪ್ರಯಾಣಿಕರು ಬಸ್ಸಿನಲ್ಲಿದ್ದರು. ಬಸ್ಸಿನ ಮುಂದಿನ ಚಕ್ರ ಸಿಡಿದು ಈ ದುರ್ಘಟನೆ ನಡೆದಿದೆ' ಎಂದು ಜಬ್ಬಾರ್ ಟ್ರಾವೆಲ್ಸ್ ಮಾಲೀಕ ಶಕೀಲ್ ತಿಳಿಸಿದ್ದಾರೆ.
Jabbar Travels Head Office:
No: 21/13, Azeema Building,
TSP road, Kalasipalyam, Bangalore
Ph: 080-26703300
26700156
41140922
41738586












Click it and Unblock the Notifications