• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಣೇಶ ಉತ್ಸವ: 10ನೇ ದಿನ ಗಾಯಕ ವಿಜಯ್ ಪ್ರಕಾಶ್ ಸಂಗೀತ ಸಂಜೆ

|

ಬೆಂಗಳೂರು, ಆಗಸ್ಟ್ 30: ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ- ಬೆಂಗಳೂರು ಗಣೇಶ ಉತ್ಸವ 10ನೇ ದಿನಕ್ಕೆ ಹೆಜ್ಜೆ ಯಿಡುತ್ತಿದೆ. ಒಟ್ಟು 11 ದಿನಗಳ ಉತ್ಸವದ 58 ನೇ ಆವೃತ್ತಿಯನ್ನು ಈ ವರ್ಷ ವರ್ಚುವಲ್ ಆಗಿ ನಡೆಸಲಾಗುತ್ತಿದೆ. ಬೆಂಗಳೂರು ಗಣೇಶ ಉತ್ಸವದ ( ಬಿಜಿಯು) 10ನೇ ದಿನದಂದು ಹೆಸರಾಂತ ಹಿನ್ನಲೆ ಗಾಯಕ ವಿಜಯ್ ಪ್ರಕಾಶ್ ರವರ ಸಂಗೀತಮಯ ಸಂಜೆ ನಡೆಯಲಿದೆ. ಆಗಸ್ಟ್ 31 , 2020ರಂದು ಸಂಜೆ 6.30ರಿಂದ ವಿಜಯ್ ಪ್ರಕಾಶ್ ಅವರ ಮಧುರ ಧ್ವನಿಯಲ್ಲಿ ಹಾಡುಗಳನ್ನು ಕೇಳಿ ತಲ್ಲೀನರಾಗಬಹುದು.

   NIAಗೆ ವರ್ಗವಾಗುತ್ತಾ ಬೆಂಗಳೂರು ಗಲಭೆ ಪ್ರಕರಣ..? | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   'ಜೈ ಹೋ' ಖ್ಯಾತಿಯ ವಿಜಯ್ ಪ್ರಕಾಶ್ ಭಾರತೀಯ ಖ್ಯಾತ ಹಿನ್ನೆಲೆ ಗಾಯಕರು. ಮೈಸೂರಿನಲ್ಲಿ ಹುಟ್ಟಿ ಬೆಳೆದರು. ತಾಯಿ ಲೋಪಾ ಮುದ್ರ, ತಂದೆ ಎಲ್. ರಾಮ ಶೇಷ. ತಂದೆ ಕೂಡ ಸಂಗೀತ ಪಂಡಿತರು. ಚಿಕ್ಕಂದಿನಿಂದಲೂ ಇವರಿಗೆ ಸಂಗೀತವೆಂದರೆ ಅಚ್ಚು-ಮೆಚ್ಚು. ತಂದೆ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡ ವಿಜಯಪ್ರಕಾಶ್, ಮುಂದೆ ಪಾಶ್ಯಾತ್ಯ ಸಂಗೀತವನ್ನೂ ಕಲಿತರು. ವಿದೇಶದಲ್ಲೂ ಕನ್ನಡ ಸಂಗೀತದ ಕಂಪನ್ನು ಪಸರಿಸಿದ ಹೆಮ್ಮೆ ಇವರದ್ದು.

   ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   3000 ಕ್ಕೂ ಹೆಚ್ಚು ಜಾಹೀರಾತು ಜಿಂಗಲ್ ಗಳಲ್ಲಿ ಹಾಡಿದ್ದು ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಮರಾಠಿ ಸೇರಿದಂತೆ 1000 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ಆಗಸ್ಟ್ 3೦ರಂದು ನಡೆಯಲಿರುವ ವಿಜಯ ಪ್ರಕಾಶ್ ಲೈವ್ ಇನ್ ಕಾನ್ಸರ್ಟ್ ಆಕರ್ಷಕವಾಗಿ ಮೂಡಿ ಬರಲಿದ್ದು, ಅವರ ಅಭಿಮಾನಿಗಳು ಕಾರ್ಯಕ್ರಮ ವೀಕ್ಷಿಸಲು ಕಾತುರರಾಗಿದ್ದಾರೆ.

   ಸೆಪ್ಟೆಂಬರ್ 1ರ ತನಕ ಜರುಗಲಿರುವ ಬೆಂಗಳೂರು ಗಣೇಶ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ ಬುಕ್ , ಯೂ ಟ್ಯೂಬ್ , ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಲೈವ್ ಆಗಿ ಮೂಡಿ ಬರುತ್ತಿದೆ.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   English summary
   58th Bangalore Ganesh Utsav: Singer Vijay Prakash Music concert on August 31,2020 via virtual live concert.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X