ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆದ ಆರು ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನ ಸೆಕೆ ಕಡಿಮೆ!

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಮೇ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಬಿಸಿಲ ನೆನೆಸಿಕೊಂಡು ಸೆಕೆಯಲ್ಲೂ ಮೈನಡುಕ ಉಂಟಾಗುತ್ತದೆ.

ಆದರೆ ಈ ಬಾರಿ ಬಿಸಿಲು ಆರಂಭವಾಗಿದ್ದರೂ ತಾಪಮಾನ ಹಾಗೂ ತೇವಾಂಶ ಹೆಚ್ಚಳವಾಗುತ್ತಿದೆ. ಏಪ್ರಿಲ್ ಅಂತ್ಯದಲ್ಲಿ ಸೆಕೆ ಹೆಚ್ಚಿದ್ದರೂ, ಕಳೆದ ಆರು ವರ್ಷಗಳ ತಾಪಮಾನಕ್ಕೆ ಹೋಲಿಸಿದರೆ ಇದು ಕಡಿಮೆ ಎನ್ನಬಹುದು.

ಈ ವರ್ಷದ ಏಪ್ರಿಲ್ ಆರಂಭದಿಂದಲೇ ಟ್ರಫ್ ಪರಿಣಾಮದಿಂದ ಮಳೆ ಸುರಿಯಿತು, ಇದು ಏಪ್ರಿಲ್ ಕೊನೆಯ ವಾರದವರೆಗೂ ಮುಂದುವರೆಯಿತು, ಹೀಗಾಗಿ, ನಗರದ ಕೇಂದ್ರ ಭಾಗದಲ್ಲಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿಲ್ಲ.

ಏಪ್ರಿಲ್ 25ರವರೆಗೂ ಮುಂದುವರೆಯಲಿರುವ ವರ್ಷಧಾರೆ! ಏಪ್ರಿಲ್ 25ರವರೆಗೂ ಮುಂದುವರೆಯಲಿರುವ ವರ್ಷಧಾರೆ!

ಮತ್ತೆ ಮಳೆ ಸಾಧ್ಯತೆ: ಮೇ 4 ಅಥವಾ 5 ರಂದು ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕಂಡು ಬಂದರೆ ಮೇ ಆರಂಭದಲ್ಲಿ ತಾಪಮಾನ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Bangalore cooler this time than last 6 year!

ತಾಪಮಾನ ಇಷ್ಟರಲ್ಲೇ ಇದ್ದರೂ ಸೆಕೆ ಮಾತ್ರ ಅಗಾಧವಾಗಿದೆ. ಪ್ರತಿ ದಿನ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗಿನ ಬಿಸಿಲು ಜನರನ್ನು ಹೈರಾಣರನ್ನಾಗಿ ಮಾಡುತ್ತವೆ. ಬಿಸಿಲಿನ ಝಳದಿಂದ ತತ್ತರಿಸುತ್ತಿರುವವರು, ಎಳನೀರು, ಕಲ್ಲಂಗಡಿ ಹಣ್ಣು ಸೇರಿದಂತೆ ಹಣ್ಣು ಹಾಗೂ ಹಣ್ಣಿನ ಪಾನೀಯಗಳನ್ನು ಹೆಚ್ಚು ಸೇವಿಸುತ್ತಿದ್ದಾರೆ.

2017ರ ಏಪ್ರಿಲ್ 13,25 ಹಾಗೂ 26ರಂದು ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು. 2016ರ ಏ.25ರಂದು 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಸರ್ವಕಾಲಿಕ ದಾಖಲೆಯೂ ಆಗಿದೆ. ಈ ವರ್ಷದ ಏಪ್ರಿಲ್ ನ ಉಳಿದ ದಿನಗಳಲ್ಲಿ ತಾಪಮಾನ 36,37 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು.

English summary
In a interesting data analysis, Indian meteorological department had revealed that Bengaluru city was cooler than last six years in the month of April comparatively. The IMD said that because of trough in the south interior Karnataka, temperature was low in Bangalore during this period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X